Thursday, March 20, 2014

ಈ ಅಂತರ

ಈ ಅಂತರ
ಈ ಅಂತರ
ಈ ಅಂತರ

ಈ ಪಥಗಳ ಅಂತರ
ಕಂಗಳ ಅಂತರ
ಸಂಗಡಿಗರ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಇಷ್ಟು ಸನಿಹ ಯಾರೇಕೆ
ಯಾರು ದೂರ ಯಾಕೆ
ಯಾರಿಗೂ ತಿಳಿದಿಲ್ಲ

ಬರುತ್ತಿದ್ದೇನೋ ಸನಿಹಕ್ಕೆ
ಅಥವಾ ಹೋಗುತ್ತಿದ್ದೇನೋ ದೂರಕ್ಕೆ ನಾನು
ಗೊತ್ತಿಲ್ಲ ಎಲ್ಲಿದ್ದೇನೆ ನಾನು

ಈ ಅಂತರ

ಈ ಪಥಗಳ ಅಂತರ
ಕಂಗಳ ಅಂತರ
ಸಂಗಡಿಗರ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಈ ಅಂತರ
ಈ ಅಂತರ

ಹೀಗೆಯೂ ಆಗಿತ್ತು
ಒಂದು ಸಮಯದಲಿ
ಖಾಲಿ ಪಥದಲಿ
ನೀನಿದ್ದೆ ನನ್ನ ಜೊತೆಯಲಿ

ಕೆಲವೊಮ್ಮೆ ನಿನ್ನ ಭೇಟಿಯಾಗಿಯೂ
ನನ್ನ ಹೃದಯದಲಿ ಒಂದು ಕುರುಹು
ಕೆಲವೊಮ್ಮೆ ಹೀಗೂ ಆಯಿತು
ಈಗ ತಾನೇ ಆದಂತೆ
ನಿನ್ನನ್ನು ನಾ ಕಂಡೆ ಎಲ್ಲರಲ್ಲಿಯೂ

ನನ್ನನ್ನು ನಿನ್ನ ಮಾಡಿ
ಹೋಗುತ್ತದೆ ಅಂತರ
ಸತಾಯಿಸುತ್ತದೆ ಅಂತರ
ಹಂಬಲಿಸುತ್ತದೆ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಹೇಳಿದ್ದೇನೆ ನಾನು ನಿನಗೆ
ಬದುಕಲ್ಲಿಕ್ಕಿಲ್ಲ ನನಗೆ
ನೀನು ಸಿಗಲಿಲ್ಲವೆಂದರೆ ನನಗೆ

ತಪ್ಪಿಯೂ ನನಗೆ ನಿನ್ನಿಂದ
ಬೇಡ ಯಾವುದೇ ಅಂತರ

ಕೇವಲ ಆ ಅಂತರವಿರಲಿ
ವೇದನೆ ಉಂಟಾಗಿ ನುಡಿಯಲಿ
ಈ ಪ್ರೀತಿಯೂ ಇನ್ನೂ ಅರಳಲಿ

ಕಣ್ಮರೆಯಾಗುವುದು ನಿನ್ನ ನನ್ನ ಅಂತರ
ಪರಕೀಯ ಈ ಅಂತರ

ತೆರಳುವುದು ಈ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಯಾರೇಕೆ ಇಷ್ಟು ಸನಿಹ
ದೂರ ಯಾಕೆ ಯಾರು
ಯಾರಿಗೂ ತಿಳಿದಿಲ್ಲ

ಬರುತ್ತಿದ್ದೇನೋ ಸನಿಹಕ್ಕೆ
ಅಥವಾ ಹೋಗುತ್ತಿದ್ದೇನೋ ದೂರಕ್ಕೆ ನಾನು
ಗೊತ್ತಿಲ್ಲ ಎಲ್ಲಿದ್ದೇನೆ ನಾನು

ಈ ಅಂತರ

ಈ ಪಥಗಳ ಅಂತರ
ಕಂಗಳ ಅಂತರ
ಸಂಗಡಿಗರ ಅಂತರ
ಕಣ್ಮರೆಯಾಗಲಿ ಈ ಎಲ್ಲ ಅಂತರ

ಮೂಲ : ಇರ್ಶಾದ್ ಕಾಮಿಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಮೋಹಿತ್ ಚೌಹಾನ್
ಸಂಗೀತ :ಪ್ರೀತಮ್ ಚಕ್ರಬೋರ್ತಿ
ಚಿತ್ರ : ಲವ್ ಆಜ್ ಕಲ್
Yeh Dooriyan
Yeh Dooriyan
Yeh Dooriyan

In Raahon Ki Dooriyan
Nigahon Ki Dooriyan
Hum Rahon Ki Dooriyan
Fanah Ho Sabhi Dooriyan

Kyun Koi Paas Hai
Door Hai Kyun Koi
Jaane Na Koi Yahan Pe

Aa Raha Paas Ya Door Mein Ja Raha
Janu Na Mein Hoon Kahan Pe

Yeh Dooriyan

In Raahon Ki Dooriyan
Nigahon Ki Dooriyan
Hum Rahon Ki Dooriyan
Fanah Ho Sabhi Dooriyan

Yeh Dooriyan
Yeh Dooriyan

Kabhi Hua Yeh Bhi
Khali Rahon Pe Bhi
Tu Tha Mere Saath

Kabhi Tujhe Milke Lauta
Mera Dil Yeh Khali Khali Haath
Yeh Bhi Hua Kabhi
Jaise Hua Aabhi
Tujhko Sabhi Mein Paa Li

Tera Mujhe Kar Jaati Hai Dooriyan
Satati Hain Dooriyan
Tarsati Hain Dooriyan
Fanah Ho Sabhi Dooriyan

Kaha Bhi Na Mene
Nahi Jeena Mene
Tu Jo Na Mila

Tujhe Bhule Se Bhi Na
Bola Na Mene Chahun Fasla

Bas Fasla Rahein
Ban Ke Kasak Jo Kahen
Ho Aur Chahat Yeh Aur Jawan

Teri Meri Mit Jaani Hai Dooriyan
Begani Hai Dooriyan

Hat Jani Dooriyan
Fanah Ho Sabhi Dooriyan

Kyun Koi Paas Hai
Door Hai Kyun Koi
Jaane Na Koi Yahan Pe

Aa Raha Paas Ya Door Mein Ja Raha
Janu Na Mein Hoon Kahan Pe

Yeh Dooriyan

In Raahon Ki Dooriyan
Nigahon Ki Dooriyan
Hum Rahon Ki Dooriyan
Fanah Ho Sabhi Dooriyan

http://www.youtube.com/watch?v=DKOLynNhWxo

1 comment:

  1. ಕಾಮಿಲ್ ಸಾರ್ ಮೂಲಕ್ಕೆ ತಮ್ಮದು ಪುಟವಿಟ್ಟಂತಿದೆ.
    ಈ ಚಿತ್ರಕ್ಕೆ ನಟರಾಜನ್ ಸುಬ್ರಹ್ಮಣ್ಯಂ ಅವರ ಛಾಯಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...