ಇನ್ನು ಅವರೆಲ್ಲಿಯೋ?
ದೇಹ ಎಷ್ಟು ಸುಂದರ ಕಾಣುತ್ತಿದೆ ಈಗ
ಪ್ರಾಣ ಇದ್ದಾಗ ಸುಸ್ತು ಚಹರೆ
ಆದರೆ ಈಗ ಅದೆಷ್ಟು ತೇಜ ಮುಖದಲಿ
ಘಾಡ ನಿದ್ರೆ
ಬೆಳಗುವ ದೀಪ ತಂದಿಟ್ಟಿದ್ದಾರೆ ಅವರು, ಸರಿಯೇ
ಮನೆಯ ಕಾಂತಿ ನಂದಿ ಹೋಯಿತ್ತಲ್ಲವೇ,
ಅಯ್ಯೋ, ಅಳುವುದು ಯಾಕೆ?
ಜೀವ ಇದ್ದಾಗ ಅವರ ಕಣ್ಣೀರು ಹರಿಸಿದ್ದು
ನೀವೇ ತಾನೇ
ಇನ್ನೇನು ಅವರ ಚಟ್ಟ ಹೋಯಿತೆಂದು ಅಳುವುದೇ
ಇದೇನು, ಹಿರಿಯರು ಬಂದು ಬೇಗ ಬೇಗ
ದೇಹ ಮಣ್ಣು ಮಾಡುವ ಎನ್ನುತ್ತಿದ್ದಾರೆ,
ಏನು ಅವರು ಪುನಃ ಜೀವಂತವಾಗುವರು
ಎಂಬ ಭಯವೇ ?
ಅವರೆಲ್ಲಿ ಇನ್ನು ಪುನಃ ಜೀವಂತವಾಗುತ್ತಾರೆ,
ನೋಡಿ ಅಲ್ಲಿ ಅವರ ಆತ್ಮ ನಗುತ್ತಿದೆ
ಅವರನ್ನೆಲ್ಲ ನೋಡಿ
ಅವರೆಲ್ಲರ ಹುಸಿತನ ನೋಡಿ ನಗುವುದೋ
ಏನೋ
ಚಲೋ, ದೇಹ ಬೂದಿಯಾಯಿತು
ಇನ್ನಿಲ್ಲ ಯಾವುದೇ ಕಿರಿಕಿರಿ,
ಕೆಮ್ಮಿನ ಶಬ್ದ ಇನ್ನಿಲ್ಲ,
ಸೇವಾ ಶುಶ್ರೂಷೆ ಮಾಡಬೇಕೆಂದೆನಿಲ್ಲ, ಆರಾಮ
ಶಾಂತತೆ
by ಹರೀಶ್ ಶೆಟ್ಟಿ,ಶಿರ್ವ
ದೇಹ ಎಷ್ಟು ಸುಂದರ ಕಾಣುತ್ತಿದೆ ಈಗ
ಪ್ರಾಣ ಇದ್ದಾಗ ಸುಸ್ತು ಚಹರೆ
ಆದರೆ ಈಗ ಅದೆಷ್ಟು ತೇಜ ಮುಖದಲಿ
ಘಾಡ ನಿದ್ರೆ
ಬೆಳಗುವ ದೀಪ ತಂದಿಟ್ಟಿದ್ದಾರೆ ಅವರು, ಸರಿಯೇ
ಮನೆಯ ಕಾಂತಿ ನಂದಿ ಹೋಯಿತ್ತಲ್ಲವೇ,
ಅಯ್ಯೋ, ಅಳುವುದು ಯಾಕೆ?
ಜೀವ ಇದ್ದಾಗ ಅವರ ಕಣ್ಣೀರು ಹರಿಸಿದ್ದು
ನೀವೇ ತಾನೇ
ಇನ್ನೇನು ಅವರ ಚಟ್ಟ ಹೋಯಿತೆಂದು ಅಳುವುದೇ
ಇದೇನು, ಹಿರಿಯರು ಬಂದು ಬೇಗ ಬೇಗ
ದೇಹ ಮಣ್ಣು ಮಾಡುವ ಎನ್ನುತ್ತಿದ್ದಾರೆ,
ಏನು ಅವರು ಪುನಃ ಜೀವಂತವಾಗುವರು
ಎಂಬ ಭಯವೇ ?
ಅವರೆಲ್ಲಿ ಇನ್ನು ಪುನಃ ಜೀವಂತವಾಗುತ್ತಾರೆ,
ನೋಡಿ ಅಲ್ಲಿ ಅವರ ಆತ್ಮ ನಗುತ್ತಿದೆ
ಅವರನ್ನೆಲ್ಲ ನೋಡಿ
ಅವರೆಲ್ಲರ ಹುಸಿತನ ನೋಡಿ ನಗುವುದೋ
ಏನೋ
ಚಲೋ, ದೇಹ ಬೂದಿಯಾಯಿತು
ಇನ್ನಿಲ್ಲ ಯಾವುದೇ ಕಿರಿಕಿರಿ,
ಕೆಮ್ಮಿನ ಶಬ್ದ ಇನ್ನಿಲ್ಲ,
ಸೇವಾ ಶುಶ್ರೂಷೆ ಮಾಡಬೇಕೆಂದೆನಿಲ್ಲ, ಆರಾಮ
ಶಾಂತತೆ
by ಹರೀಶ್ ಶೆಟ್ಟಿ,ಶಿರ್ವ
ಒಂದು ಸಾವಿನ ಸುತ್ತ ನೂರು ವಿಚಾರಗಳ ಪ್ರಸ್ತಾಪ.
ReplyDelete