Thursday, March 20, 2014

ಗುಬ್ಬಚ್ಚಿ ನೀನೇಕೆ ಬರುವುದಿಲ್ಲ

ಗುಬ್ಬಚ್ಚಿ ನೀನೇಕೆ ಬರುವುದಿಲ್ಲ
ನನ್ನ ಪಟ್ಟಣದ ಹೊಸ ಮನೆಗೆ
ಏಕೆ ಮುಂಜಾನೆ ಕಿಟಕಿಯಲಿ
ನಿನ್ನ ಕಲರವ ಕೇಳುವುದಿಲ್ಲ

ಊರಲ್ಲಿ ದಿನನಿತ್ಯ ನೀನು
ನನ್ನ ಮನೆಗೆ ಬರುತ್ತಿದ್ದೆ
ನಿನ್ನ ಮಧುರ ಧ್ವನಿ
ಕೇಳಿಯೇ ನಾನು ಕಣ್ಣು ತೆರೆಯುತ್ತಿದ್ದೆ

ಊರ ಮರಗಳಲ್ಲಿ
ಅದೆಷ್ಟು ನಿನ್ನ ಗೂಡುಗಳು
ಗದ್ದೆಯಲ್ಲಿ ದುಡಿಯುವಾಗ
ಆಯಾಸ ಮರೆಸುತಿತ್ತು ನಿನ್ನ ಹಾಡುಗಳು

ಈಗ ಎಲ್ಲಿ ಹೋಗಿರುವೆ ನೀನು?
ನಿನಗೆ ಭಯವೇ ಈ ಪಟ್ಟಣದಿಂದ?
ಇಲ್ಲಿಯ ದೂಷಿತ ಗಾಳಿಯಿಂದ?
ಇಲ್ಲಿಯ ಕೊಳಕು ನೀರಿನಿಂದ?

ಹೌದು, ನೀನೇಕೆ ಬರುವೆ ಇಲ್ಲಿಗೆ
ಸ್ವಚ್ಚಂಧ ಗಾಳಿಯಲಿ ಉಸಿರಾಡುವ ನೀನು
ಝರಿ ನದಿಯ ಶುಭ್ರ ನೀರು ಕುಡಿಯುವ ನೀನು
ಏಕೆ ಬರುವೆ ಈ ಉಸಿರು ಕಟ್ಟುವ ವಾತಾವರಣದಲಿ

by ಹರೀಶ್ ಶೆಟ್ಟಿ, ಶಿರ್ವ

4 comments:

  1. ಗುಬ್ಬಚ್ಚಿ ಮತ್ತು 'ನಾನು' ಎಂದಿಗೂ ಹೋಲಿಕೆಯ ತಕ್ಕಡಿಗೆ ಹಾಕಲೇಬೇಕಾದ ವಿಚಾರಗಳು.
    ನಾಗರೀಕರಣ ಮತ್ತು ಗುಂಪಿನಲ್ಲೂ ಒಂಟಿತನದ ರೋಗಕ್ಕೆ ತುತ್ತಾದ ನಮಗೆ ಅವುಗಳ ಕಣ್ಮರೆ ದೊಡ್ಡ ಸುದ್ದಿಯೇ ಅಲ್ಲ ಎಂಬುದು ನೋವಿನ ವಿಚಾರ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete
  3. ಹಾಡುಗಳು ತುಂಬಾ ಸುಂದರವಾಗಿವೆ,
    ..
    ಹಾಗೆಯೇ ನನ್ನ ಪುಟ್ಟ ಬ್ಲಾಗಿಗೂ ಒಮ್ಮೆಯಾದರೂ ಬೇಟಿ ನೀಡಿ.........
    http://spn3187.blogspot.in/

    ReplyDelete
  4. ಧನ್ಯವಾದಗಳು ಶಿವಕುಮಾರ್'ರವರೆ, ಖಂಡಿತ ನಿಮ್ಮ ಬ್ಲಾಗ್ ವಿಸಿಟ್ ಮಾಡುವೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...