Tuesday, March 4, 2014

"ಮಳೆ" ಹಾಯ್ಕು

ಬಾಡಿದ ಬೆಳೆ
ವರುಣನ ಮುನಿಸು
ರೈತ ಕಂಗಾಲು

---

ಒಣ ಧರತಿ
ವಿಮುಖವಾದ ವರ್ಷ
ವರುಣ ಪೂಜೆ

---

ಬಾನಲ್ಲಿ ದೃಷ್ಟಿ
ಮೇಘಗಳ ಚೆಲ್ಲಾಟ
ಸೋತ ಕಂಗಳು

---

ಕಷ್ಟದ ಕಾಲ
ಏರುತ್ತಿರುವ ಸಾಲ
ವಿವಶ ರೈತ

---
ಖಾಲಿ ಬಾಣಲೆ
ಮನೆಯಲ್ಲಿಲ್ಲ ಧಾನ್ಯ
ಹಸಿದ ಹೊಟ್ಟೆ

---

ಬಂಜರು ಭೂಮಿ
ಹೃದಯ ಸೀಳು ಸೀಳು
ಚುಚ್ಚುವ ಮುಳ್ಳು

---

ಬರಿದು ಬಾವಿ
ಒಣ ನದಿ ಕಾಲುವೆ
ಕಣ್ಣೀರ ಗತಿ

by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...