Wednesday, March 12, 2014

ಯಾವುದೇ ಕಲ್ಲ ಮೂರ್ತಿಯಿಂದ

ಯಾವುದೇ ಕಲ್ಲ ಮೂರ್ತಿಯಿಂದ
ಪ್ರೀತಿಯ ಇರಾದೆ ಇದೆ
ಪೂಜಿಸುವ ಬಯಕೆ ಇದೆ
ಆರಾಧಿಸುವ ಇರಾದೆ ಇದೆ-೨
ಯಾವುದೇ ಕಲ್ಲ ಮೂರ್ತಿಯಿಂದ.....
ಅವಳಿಗೆ ಹೃದಯದ ಮಿಡಿತ ಅರ್ಥವಾಗದು
ಕಣ್ಣ ಭಾಷೆಯೂ ಅರ್ಥವಾಗದು 
ದೃಷ್ಟಿಯ ಮಾತುಕತೆ ಅರ್ಥವಾಗದು 

ಭಾವನೆಯ ನುಡಿಯೂ ಅರ್ಥವಾಗದು
ಅವಳ ಮುಂದೆಯೇ ಅವಳನ್ನು 

ದೂರುವ ಇರಾದೆ ಇದೆ
ಯಾವುದೇ ಕಲ್ಲ ಮೂರ್ತಿಯಿಂದ.....
ಕೇಳಿದ್ದೆ ಪ್ರತಿಯೊಂದು
ಯುವ ಕಲ್ಲ ಹೃದಯದಲಿ ಅಗ್ನಿ ಇರುತ್ತದೆ
ಆದರೆ ಅದನ್ನು ಸ್ಪರ್ಶಿಸದಿದ್ದರೆ
ಲಜ್ಜೆಯ ಪರದೆಯಲಿ ಅಡಗಿರುತ್ತದೆ
ಯೋಚಿಸಿದ್ದೇನೆ ಮನಸ್ಸ ಮಾತನ್ನು
ಅವಳೆದುರು ಹೇಳುವೆಯೆಂದು
ಪರಿಣಾಮ ಏನೆಯಾಗಲಿ
ತನ್ನ ಇಚ್ಛೆ ಹೇಳುವೆಯೆಂದು
ಪ್ರತಿಯೊಂದು ರೂಢಿ ಪದ್ದತಿಗಳಿಂದ
ವಿದ್ರೋಹದ ಇರಾದೆ ಇದೆ
ಯಾವುದೇ ಕಲ್ಲ ಮೂರ್ತಿಯಿಂದ.....
ಪ್ರೀತಿ ಉಪೇಕ್ಷೆಯಿಂದ
ಇನ್ನೂ ಹೆಚ್ಚಾಗುವುದು ಅವಳಿಗೇನು ಗೊತ್ತು
ಯೌವನ ಈ ಭಂಗಿಯನ್ನೇ ಮೆಚ್ಚುವುದು
ಅವಳಿಗೇನು ಗೊತ್ತು
ಅವಳಿಗೇನು ಗೊತ್ತು
ನನ್ನ ಯಾವ ಪ್ರಳಯದ ಇರಾದೆ ಇದೆ
ಯಾವುದೇ ಕಲ್ಲ ಮೂರ್ತಿಯಿಂದ.....
ಮೂಲ :ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಹಮ್ ರಾಜ್
kisi patthar ki muurat se muhabbat ka iraada hai
parastish ki tamanna hai, ibaadat ka iraada hai
kisi patthar ki muurat se ...
jo dil ki dhadakanein samajhe na aankho ki zubaan samajhe
nazar ki guftagu samajhe na jazabon ka bayaan samajhe
usi ke saamane uski shikaayat ka iraada hai
kisi patthar ki muurat se ...
suna hai har javaan patthar ke dil mein aag hoti hai
magar jab tak na chhedo, sharm ke parde mein soti hai
ye socha hai ki dil ki baat usake ruubaru kah de
natiija kuch bhi nikale aaj apani aarazu kah de
har ik bejaan taqalluf se bagaavat ka iraada hai
kisi patthar ki muurat se ...
muhabbat berukhi se aur bhadakegi vo kya jaane
tabiiyat is ada pe aur phadkegi vo kya jaane
vo kya jaane ki apna kis qayaamat ka iraada hai
kisi patthar ki muurat se ...
http://www.youtube.com/watch?v=UIkgeoj9S8c

2 comments:

  1. ಸಾಹಿರ್ ಸಾಹೇಬರ ಒಳ್ಳೆಯ ರಚನೆ. ಭವಾನುವಾದವೂ ಸೈ.
    ಛಾಯಾಗ್ರಹಣ: ಎಂ.ಎನ್. ಮಲ್ಹೋತ್ರ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್,

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...