ಕ್ಷಣ ಕ್ಷಣ ಮುರಿಯುತ್ತಿರುವ
ಕನಸಿನ ಹಾದಿಯಲಿ
ದೃಡತೆಯಿಂದ ಸಾಗುತ್ತದೆ
ಹೆಣ್ಣೊಬ್ಬಳ ಪಯಣ
ಏನಿಲ್ಲ ಅವಳ ಹತ್ತಿರ
ಕೇವಲ ಪಾವನ ಭಾವನೆಗಳ ಹೊರತು
ಪ್ರಯತ್ನಗಳೆಲ್ಲ ಅಸಫಲವಾದರೇನು
ನಾನು ಸೋಲಲಾರೆ
ಎಂಬ ಹಠ ಅವಳ
ಮುಳ್ಳು ನನ್ನ ಭಾಗ್ಯದಲಿ ಬಂದರೇನು
ಹೂವನ್ನು ಹಾಸುವೆ
ಎಂಬ ದೃಡ ನಿಶ್ಚಯ ಅವಳ
ಈ ಹೆಣ್ಣು
ಪದೇ ಪದೇ ಕಷ್ಟಗಳನ್ನು
ಅನುಭವಿಸಿ ಕೂಡ
ಕಣ್ಣೀರ ಸಾಗರದಲಿ ತೇಲಿ ಸಹ
ನಗು ನಗುತ್ತಲೇ
ತನ್ನ ಸಂಸಾರದ ದೋಣಿ ಸಾಗಿಸುತ್ತಾಳೆ
ಜೀವನದಲಿ ಬರುವ ದುಖವೆಂಬ
ಬಿರುಗಾಳಿಯ ಆರ್ಭಟವನ್ನು
ಒಂದು ಸುಂದರ
ಕವಿತೆಯನ್ನಾಗಿ ಪರಿವರ್ತಿಸಿ
ಅದನ್ನು ಹಾಡುತ ಸಾಗುತ್ತಾಳೆ
ಈ ಹೆಣ್ಣು
ಹೆಣ್ಣೆ ಹೇಗೆ ಹೇಳಲಿ ನಿನ್ನ ಗೋಳು
ಸಂಸಾರದ ಭಾರ ಹೊಯ್ಯುವ
ನಿನ್ನ ಭಾಗ್ಯದಲಿ
ಸುಖದ ಬದಲು ಕಣ್ಣೀರೆ ಹೆಚ್ಚು
ಆದರೆ ಆ ಎಲ್ಲ ಕಣ್ಣೀರ ಹನಿಯನ್ನು ಅಡಗಿಸಿ
ಹರ್ಷವನ್ನು ಸುರಿಯುತ್ತಾಳೆ ಈ ಹೆಣ್ಣು
by ಹರೀಶ್ ಶೆಟ್ಟಿ, ಶಿರ್ವ
ಕನಸಿನ ಹಾದಿಯಲಿ
ದೃಡತೆಯಿಂದ ಸಾಗುತ್ತದೆ
ಹೆಣ್ಣೊಬ್ಬಳ ಪಯಣ
ಏನಿಲ್ಲ ಅವಳ ಹತ್ತಿರ
ಕೇವಲ ಪಾವನ ಭಾವನೆಗಳ ಹೊರತು
ಪ್ರಯತ್ನಗಳೆಲ್ಲ ಅಸಫಲವಾದರೇನು
ನಾನು ಸೋಲಲಾರೆ
ಎಂಬ ಹಠ ಅವಳ
ಮುಳ್ಳು ನನ್ನ ಭಾಗ್ಯದಲಿ ಬಂದರೇನು
ಹೂವನ್ನು ಹಾಸುವೆ
ಎಂಬ ದೃಡ ನಿಶ್ಚಯ ಅವಳ
ಈ ಹೆಣ್ಣು
ಪದೇ ಪದೇ ಕಷ್ಟಗಳನ್ನು
ಅನುಭವಿಸಿ ಕೂಡ
ಕಣ್ಣೀರ ಸಾಗರದಲಿ ತೇಲಿ ಸಹ
ನಗು ನಗುತ್ತಲೇ
ತನ್ನ ಸಂಸಾರದ ದೋಣಿ ಸಾಗಿಸುತ್ತಾಳೆ
ಜೀವನದಲಿ ಬರುವ ದುಖವೆಂಬ
ಬಿರುಗಾಳಿಯ ಆರ್ಭಟವನ್ನು
ಒಂದು ಸುಂದರ
ಕವಿತೆಯನ್ನಾಗಿ ಪರಿವರ್ತಿಸಿ
ಅದನ್ನು ಹಾಡುತ ಸಾಗುತ್ತಾಳೆ
ಈ ಹೆಣ್ಣು
ಹೆಣ್ಣೆ ಹೇಗೆ ಹೇಳಲಿ ನಿನ್ನ ಗೋಳು
ಸಂಸಾರದ ಭಾರ ಹೊಯ್ಯುವ
ನಿನ್ನ ಭಾಗ್ಯದಲಿ
ಸುಖದ ಬದಲು ಕಣ್ಣೀರೆ ಹೆಚ್ಚು
ಆದರೆ ಆ ಎಲ್ಲ ಕಣ್ಣೀರ ಹನಿಯನ್ನು ಅಡಗಿಸಿ
ಹರ್ಷವನ್ನು ಸುರಿಯುತ್ತಾಳೆ ಈ ಹೆಣ್ಣು
by ಹರೀಶ್ ಶೆಟ್ಟಿ, ಶಿರ್ವ
ಪಾವನ ಭಾವನೆಗಳೇ ಅವಳ ಶಕ್ತಿಯು ಕೂಡ. ಆಕೆ ನೂರು ನೋವುಗಳ ನುಂಗಿ ನಗುವನೇ ಸಂಕ್ರಮಿಸುವ ಮಹಾನ್ ಹೃದಯೀ.
ReplyDeleteಮನಮಿಡಿಯುವ ಕವನ.
ಮೆಚ್ಚಿದಕ್ಕೆ ಧನ್ಯವಾದಗಳು ಬದರಿ ಸರ್, ನಿಮಗೆ ಎಷ್ಟು ಧನ್ಯವಾದ ನೀಡಿದರು ಕಡಿಮೆ.
ReplyDelete