Showing posts with label ಅನುವಾದ. Show all posts
Showing posts with label ಅನುವಾದ. Show all posts

Wednesday, September 23, 2020

ಸಾಗರ ಪ್ರಾಣ ತಳಮಳಿಸುತ್ತಿದೆ




ಹೇ ಕರೆದುಕೊಂಡೋಗು ನನ್ನನ್ನು ಪುನಃ ನನ್ನ ಮಾತೃಭೂಮಿಗೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ಭೂಮಾತೆಯ ಚರಣ ತೊಳೆಯುವುದನ್ನು 
ನಾನು ದಿನ ನಿತ್ಯ ನೋಡುತ್ತಿದ್ದೆ, 

ನೀನು ಹೇಳಿದೆ ಪರದೇಶಕ್ಕೆ ಹೋಗುವಯೆಂದು,
ಅಲ್ಲಿಯ ವಿವಿಧ ಅದ್ಭುತ ಪ್ರಕೃತಿಯ ನೋಟ ನೋಡುವಯೆಂದು, 

ನನ್ನ ತಾಯಿ ನನ್ನ ವಿರಹದಲ್ಲಿ ನೊಂದುತ್ತಿದ್ದಾಳೆ, 
ಆದರೆ ನೀನು ಅವಳಿಗೆ ಭರವಸೆ ನೀಡುರುವೆ, 

ಹೇಗೆ ನನ್ನನ್ನು ಕರೆದುಕೊಂಡೋಗುವೆಯೋ,
ಹಾಗೆಯೇ ಹಿಂತುರುಗಿ ಕರೆದುಕೊಂಡು ಬರುವೆಯೆಂದು, 

ನಾನು ನಿನ್ನ ಮಾತನ್ನು ನಂಬಿದೆ, 
ಯೋಚಿಸಿದೆ ಹಿಂತಿರುಗಿ ಬಂದು ಇಲ್ಲಿಯ ಅನುಭವ ನನ್ನ ಮಾತೃಭೂಮಿಯನ್ನು ಸದೃಢಗೊಳಿಸಲು ಉಪಯೋಗಿಸುವೆಯೆಂದು, 

ಅದಕ್ಕೆ ಅವಳಿಗೆ ಧೈರ್ಯ ನೀಡಿ, 
ನಾನು ಹಿಂತಿರುಗಿ ಬರುವೆಯೆಂದು ಹೇಳಿ ಬಂದಿದ್ದೆ,

ಸಾಗರ ಪ್ರಾಣ ತಳಮಳಿಸುತ್ತಿದೆ, 

ಭೇಟೆಗಾರನ ಕಾಣದ ಬಲೆಯಲ್ಲಿ ಜಿಂಕೆ ಸಿಕ್ಕಿಬಿದ್ದಂತೆ,
ನಾನು ನಿನ್ನ ಮಾತಿಗೆ ಮೋಸ ಹೋದೆ, 

ಹೇಗೆ ಸಹಿಸಲಿ ಈ ವಿರಹ ಮಾತೃಭೂಮಿಯ,
ಎಲ್ಲ ದಿಶೆಯಲ್ಲೂ ಕತ್ತಲೆ ಈಗ ಕಾವಿದೆ, 

ನಾನು ಜ್ಞಾನದ ಹೂಗಳನ್ನು ಹೆಕ್ಕಿದೆ, 
ಅವಳು ಅದರ ಸುವಾಸನೆಯನ್ನು ಭಾವಿಸಲೆಂದು, 

ಆದರೆ ಮಾತೃಭೂಮಿಯ ಪ್ರಗತಿಗೆ ಇದರ ಉಪಯೋಗ ಆಗದಿದ್ದರೆ, 
ಇದು ವಿದ್ಯೆಯ ವ್ಯರ್ಥ ಭಾರವೊಂದು, 

ಅವಳೊಂದು ಮಾವಿನ ಮರದ ಹಾಗೆ, 
ವಿವಿಧ ವಸ್ತುಗಳನ್ನು ನೀಡುವಳು ಬೇಕಾದವರಿಗೆ,

ಅವಳೊಂದು ನವ ಕುಸುಮದ ಹಾಗೆ, ಆದರೆ ಈ ಉಪವನವು ಈಗ ಪರಕೀಯ ನನಗಾಗಿದೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ಈ ಬ್ರಹ್ಮಾಂಡದಲ್ಲಿ ಅನೇಕ ನಕ್ಷತ್ರಪುಂಜಗಳು, 
ಆದರೆ ನನಗೆ ಪ್ರಿಯ ನನ್ನ ಮಾತೃಭೂಮಿಯ ತಾರೆ,

ಅದೆಷ್ಟೋ ಸುಖ ಸೌಕರ್ಯ ಇಲ್ಲಿ ಎನಗೆ, 
ಆದರೆ ಅಮ್ಮನ ಜೋಪಡಿ ಇಷ್ಟ ನನಗೆ, 

ಅವಳ ವಿನಃ ನನಗೆ ಯಾವ ರಾಜ್ಯವೂ ಬೇಡ, ವನವಾಸವೂ ಒಪ್ಪಿಗೆ ನನಗೆ ಅವಳ ಆಶ್ರಯದಲ್ಲಿ,

ಈಗ ಈ ಮೋಹಗಳೆಲ್ಲ ವ್ಯರ್ಥ ಅನಿಸುತ್ತಿದೆ, 
ನನ್ನ ಹೃದಯ ನೋವಿನಿಂದ ಅಳುತ್ತಿದೆ, 

ನಿನ್ನಲ್ಲಿ ಹರಿಯುವ ಆ ನದಿಯಿಂದ ಅಗಲಿ, 
ಕಣ್ಣೀರ ಧಾರೆಯಲ್ಲಿ ತೇಲುವಂತೆ ಆಗಿದೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ನಿರ್ದಯಿಯಂತೆ ನೀ ನಗುತ್ತಿರುವೆ ಕಂಡು ನನ್ನ ವ್ಯಥೆಯನ್ನು , 
ಯಾಕೆ ಭರವಸೆ ನೀಡಿ ಮುರಿಯುವೆ ಹೀಗೆ ನೀನು, 

ಪರ ಸ್ವಾಮಿತ್ವದಲ್ಲಿ ತನ್ನನ್ನು ಶಕ್ತಿಶಾಲಿ ಎನ್ನುವವರೇ, ನಿಜದಲಿ ನೀವು ಭಯಭೀತವಾಗಿದ್ದಿರಿ ಆಂಗ್ಲರ ಆಡಳಿತದಿಂದ, 

ನನ್ನ ತಾಯಿಯನ್ನು ದುರ್ಬಲ ಎಂದು ವಂಚಿಸುವವರೇ, 
ದುರ್ಬಲ ನೀವಾಗಿದ್ದಿರಿ, 

ಆಂಗ್ಲರು ಬಂದು ಹೆದರಿಸಿದರೆ ಹೀಗೆಲ್ಲ, 
ನನ್ನ ತಾಯಿ ದುರ್ಬಲವೇನಲ್ಲ, 

ಹೇಳುವರು ಈಗ ಅಗಸ್ತ್ಯ ಮಹರ್ಷಿಯವರು ಇದನ್ನೇ, ಒಮ್ಮೆ ಅಂಗೈಯಲ್ಲಿ ಒಂದೇ ಕ್ಷಣದಲ್ಲಿ ಕುಡಿದವರು ನಿನಗೆ ಹಿಂದೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ಮೂಲ: ಈ ಮರಾಠಿ ಕವಿತೆಯನ್ನು ಸ್ವಾತಂತ್ರವೀರ ಸಾವರ್ಕರ್ ರವರು ಇಂಗ್ಲೆಂಡಿನ ಒಂದು ಸಾಗರ ತೀರದಲ್ಲಿ ಕುಳಿತು ಬರೆದಿದ್ದರು,ಕವಿತೆಯಲ್ಲಿ ಅವರು ತನ್ನನ್ನು ಪುನಃ ತನ್ನ ತಾಯಿನಾಡಿಗೆ ಹಿಂತಿರುಗಿ ಕರೆದುಕೊಂಡು ಹೋಗು ಎಂದು ಸಾಗರದಿಂದ ವಿನಂತಿಸುತ್ತಿದ್ದಾರೆ,ಕವಿತೆಯಲ್ಲಿ ಅವರು ತನ್ನ ದೇಶವನ್ನು ತನ್ನ ತಾಯಿಯೆಂದು ಉಲ್ಲೇಖಿಸಿದ್ದಾರೆ.

 ಅನುವಾದ: ಹರೀಶ್ ಶೆಟ್ಟಿ, ಶಿರ್ವ. ಈ ಮರಾಠಿ ಕವಿತೆಯನ್ನು ತನಗೆ ಅರ್ಥವಾದಷ್ಟು ಕನ್ನಡದಲ್ಲಿ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ,ನನ್ನ ಈ ಬಾಲಿಷ ಪ್ರಯತ್ನದಲ್ಲಿ ತಪ್ಪಿದ್ದರೆ ಕ್ಷಮಿಸಬೇಕು. 
ने मजसी ने परत मातृभूमीला सागरा प्राण तळमळला ॥धृ॥ 

भूमातेच्या चरणतला तुज धूता मी नित्य पाहिला होता मज वदलासी अन्य देशि चल जाऊ सृष्टिची विविधता पाहू तैं जननीहृद् विरहशंकितहि झाले परि तुवां वचन तिज दिधले मार्गज्ञ स्वये मीच पृष्ठि वाहीन त्वरित या परत आणीन विश्वसलो या तव वचनी मी जगद्नुभवयोगे बनुनी मी तव अधिक शक्ती उद्धरणी मी येईन त्वरे कथुनि सोडिले तिजला ॥ 
सागरा प्राण तळमळला 

शुक पंजरि वा हरिण शिरावा पाशी ही फसगत झाली तैशी भूविरह कसा सतत साहु या पुढती दशदिशा तमोमय होती गुणसुमने मी वेचियली या भावे की तिने सुगंधा घ्यावे जरि उद्धरणी व्यय न तिच्या हो साचा हा व्यर्थ भार विद्येचा ती आम्रवृक्षवत्सलता रे नवकुसुमयुता त्या सुलता रे तो बाल गुलाबहि आता रे फुलबाग मला हाय पारखा झाला ॥ 
सागरा प्राण तळमळला 

नभि नक्षत्रे बहुत एक परि प्यारा मज भरतभूमिचा तारा प्रासाद इथे भव्य परी मज भारी आईची झोपडी प्यारी तिजवीण नको राज्य मज प्रिया साचा वनवास तिच्या जरि वनिचा भुलविणे व्यर्थ हे आता रे बहु जिवलग गमते चित्ता रे तुज सरित्पते जी सरिता रे त्वदविरहाची शपथ घालितो तुजला ॥ 
सागरा प्राण तळमळला 

या फेनमिषें हससि निर्दया कैसा का वचन भंगिसी ऐसा त्वत्स्वामित्वा सांप्रत जी मिरवीते भिनि का आंग्लभूमीते मन्मातेला अबला म्हणुनि फसवीसी मज विवासनाते देशी तरि आंग्लभूमी भयभीता रे अबला न माझि ही माता रे कथिल हे अगस्तिस आता रे जो आचमनी एक क्षणी तुज प्याला ॥ 
सागरा प्राण तळमळला

Monday, June 22, 2020

ಕಣ್ಣೀರು

ಕಣ್ಣೀರು ಹರಿದು ಬಂದರೆ ನೀವೇ ಒರೆಸಿಕೊಳ್ಳಿ,
ಅನ್ಯರು ಒರೆಸಲು ಬಂದರೆ ವ್ಯವಹರಿಸುತ್ತಾರೆ

ಮೂಲ : ಸಲೀಮ್ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ

आंसू निकल आये तो खुद पोछ लेना,
लोग पोछने आएंगे तो सौदा करेंगे

Friday, June 19, 2020

ಪ್ರೀತಿ

ನೆನಪಿನ ಕಪಾಟಿನಲ್ಲಿ ನೋಡಿದೆ,
ಅಲ್ಲಿ ಪ್ರೀತಿ ದುಸ್ಥಿತಿಯಲ್ಲಿ ನೇತಾಡುತ್ತಿದೆ....

ಮೂಲ : ಗುಲ್ಜಾರ್
ಅನುವಾದ: ಹರೀಶ್ ಶೆಟ್ಟಿ, ಶಿರ್ವ


यादों की अलमारी में देखा...
वहॉं मुहब्बत फटेहाल लटक रही है....
-गुलज़ार

Tuesday, June 16, 2020

ನೀರವ ಮೌನ

ನೀರವ ಮೌನ ತುಂಬಿತ್ತು,
ಒಂದು ಬಲೂನಿನಂತಹ ಕೋಣೆಯಲ್ಲಿ
ನಿನ್ನ ಫೋನ್ ರಿಂಗಣಿಸುವ ಮೊದಲು.
ಹಳಸಿದ ವಾತಾವರಣ ಇದೆಲ್ಲ
ಕಿಂಚಿತ ಮಿಡಿಯಿತು,
ಉಸಿರು ಅಲ್ಲಾಡಿತು, ನಾಡಿಮಿಡಿತ ನಡೆಯಿತು,
ನಿರಾಶೆಯ ಛಾಯೆ ಕಣ್ಣಿಂದ ಜಾರಿತು ಕೆಲವು ಕ್ಷಣ
ಮತ್ತೆ ನಿನ್ನ ಸ್ವರವನ್ನು, ಅಂತಿಮ ಬಾರಿ ವಿದಾಯ
ಹೇಳಿ ಹೋಗುವುದನ್ನು ನೋಡಿದೆ!!
ನೀರವ ಮೌನ ತುಂಬಿತ್ತು,
ದೇಹದ ಈ ಬಲೂನಿನಲ್ಲಿ
ನಿನ್ನ ಅಂತಿಮ ಕರೆಯ ನಂತರ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ

इक सन्नाटा भरा हुआ था,
एक गुब्बारे से कमरे में,
तेरे फोन की घंटी के बजने से पहले.
बासी सा माहौल ये सारा
थोड़ी देर को धड़का था
साँस हिली थी, नब्ज़ चली थी,
मायूसी की झिल्ली आँखों से उतरी कुछ लम्हों को-- 
फिर तेरी आवाज़ को, आखरी बार "खुदा हाफिज़"
कह के जाते देखा था!
इक सन्नाटा भरा हुआ है,
जिस्म के इस गुब्बारे में,
तेरी आखरी फोन के बाद

Sunday, June 14, 2020

ನಟ

ದಫನ ಮಾಡುವ ಮೊದಲು ನಾಡಿಮಿಡಿತ ಪರೀಕ್ಷಿಸಿ ನೋಡಿ,
ಉತ್ತಮ ನಟ ಅವನು, ಅಭಿನಯ ಮಾಡುತ್ತಿರಬಹುದು!!

ಅನುವಾದ : ಹರೀಶ್ ಶೆಟ್ಟಿ, ಶಿರ್ವ
Photo: Google

Wednesday, June 10, 2020

ಅದೃಷ್ಟ

ಪ್ರಯತ್ನ ಸಹ ಮಾಡು,
ಭರವಸೆ ಸಹ ಇಡು,
ಮಾರ್ಗ ಸಹ ನಿರ್ಧರಿಸು,
ಮತ್ತೆ ಇದರ ನಂತರ ಸ್ವಲ್ಪ ಅದೃಷ್ಟವನ್ನು ಹುಡುಕು

ಮೂಲ: ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

कोशिश भी कर, उमीद भी रख, रास्ता भी चुन

फिर इस के बाद थोड़ा मुक़द्दर तलाश कर

~निदा फ़ाज़ली

Wednesday, May 27, 2020

ಜೀವನ ತಾನೇ

ಸ್ವಲ್ಪ ಹೊಲಿದು ನೋಡಿರೋ, ಪುನಃ ಹೊಸತಾಗಿ ಕಾಣುತ್ತದೆ, ಜೀವನ ತಾನೇ... ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್

Tuesday, May 26, 2020

ನೆನಪಿನ ವ್ಯಾಪಾರ

ತುಂಬಾ ಕಷ್ಟದಿಂದ ಮಾಡುತ್ತಿದ್ದೇನೆ
ನಿನ್ನ ನೆನಪಿನ ವ್ಯಾಪಾರ, ಲಾಭ ಕಡಿಮೆಯಿದೆ, ಆದರೆ ಬದುಕಲು ಪರ್ಯಾಪ್ತವಾಗಿದೆ. ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ : ಗುಲ್ಜಾರ್

Monday, May 25, 2020

ಯೋಗಕ್ಷೇಮ

ಯಾರು ಹೇಳುತ್ತಾರೆ ನಾನು ಸುಳ್ಳು ಹೇಳುವುದಿಲ್ಲವೆಂದು, ನೀನೊಂದು ಸಲ ನನ್ನ ಯೋಗಕ್ಷೇಮ ಕೇಳಿಯಾದರೂ ನೋಡು. ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್

Sunday, May 24, 2020

ಪ್ರಕೃತಿ

ಈ ನಗರಗಳ ಮೌನ ಹೇಳುತ್ತಿದೆ, ಮನುಷ್ಯರು ಪ್ರಕೃತಿಯನ್ನು ತುಂಬಾ ಮುನಿಸಿದ್ದಾರೆಯೆಂದು. ಅನುವಾದ: ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್
------
ಈ ನಗರಗಳ ಮೌನ ಹೇಳುತ್ತಿದೆ
ಈ ಮನುಷ್ಯರಿಂದ ಪ್ರಕೃತಿ ಮುನಿಸಿಕೊಂಡಿದೆ.
ಅನುವಾದ: ಹರೀಶ್ ಶೆಟ್ಟಿ, ಶಿರ್ವ ಮೂಲ: ಗುಲ್ಜಾರ್

Thursday, May 21, 2020

ಗುಲ್ಜಾರ್ ಕ್ಲಾಸಿಕ್

ರೇಖೆ ಇದ್ದರೆ ಇರಲಿ,
ಯಾರೋ ಮುನಿಸಿ ಎಳೆದಿರಬೇಕು,
ಅದನ್ನೇ ಈಗ ಮಾಡುವ ಮೈದಾನ ಹಾಗು
ಬನ್ನಿ ಕಬ್ಬಡ್ಡಿ ಆಡುವ.

-------
ಮನುಷ್ಯ ನೀರಿನ ಗುಳ್ಳೆಗಳಂತೆ
ಹಾಗು ನೀರು ಹರಿಯುವ ಮೇಲ್ಮೈಯಲ್ಲಿ ತುಂಡಾಗುತ್ತಾನೆ,
ಮುಳುಗುತ್ತಾನೆ ಪುನಃ ಮೇಲೆತ್ತುತ್ತಾನೆ,
ಪುನಃ ಹರಿಯುತ್ತಾನೆ.
______

ಮಿಂಚುಗಳನ್ನು ಇಡುತ್ತಿದ್ದೆ ತೋಳುಗಳಲ್ಲಿ,
ಒಂದು ವೇಳೆ ಮೇಘಗಳ ಉಡುಪು ಇರುತ್ತಿದ್ದರೆ.

लकीरें हैं तो रहने दो 
किसी ने रूठ के गुस्से में शायद खींच दी थी 
इन्हीं को अब बनाओ पाला और 
आओ कबड्डी खेलते हैं 
------
आदमी बुलबुला है पानी का 
और पानी की बहती सतह पर टूटता भी है, 
डूबता भी है, फिर उभरता है, 
फिर से बहता है
--------
बिजलियाँ रखते आस्तीनों में, 
बादलों का अगर लिबास होता।

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ 

Wednesday, May 20, 2020

ಸ್ವಲ್ಪ ನಿಧಾನ ಜೀವನ,

ಸ್ವಲ್ಪ ನಿಧಾನ ಜೀವನ, ಇನ್ನೆಷ್ಟೋ ಋಣ ತೀರಿಸಲಿದೆ, ಕೆಲವು ನೋವು ಸಹಿಸಲಿದೆ, ಇನ್ನೆಷ್ಟೋ ಕರ್ತವ್ಯ ಪಾಲಿಸಲಿದೆ,

ನಿನ್ನ ವೇಗದ ನಡೆಯಿಂದ ಕೆಲವು ಮುನಿದರು, ಕೆಲವು ಅಗಲಿದರು,
ಮುನಿದವರನ್ನು ಸಂತೈಸಲಿದೆ ಅಳುತ್ತಿದ್ದವರನ್ನು ನಗಿಸಲಿದೆ

ಕೆಲವು ಆಸೆ ಇನ್ನೂ ಅಪೂರ್ಣವಾಗಿದೆ, ಕೆಲವು ಕೆಲಸ ಇನ್ನು ಮುಖ್ಯವಾಗಿದೆ, ಜೀವನದ ಈ ಗೊಂದಲಮಯ ಒಗಟನ್ನು,
ಪೂರ್ಣವಾಗಿ ಪರಿಹರಿಸುವುದು ಬಾಕಿ ಇದೆ,

ಕೆಲವು ಸಂಬಂಧ ಸೇರಿ, ಮುರಿದವು, ಕೆಲವು ಸಂಬಂಧ ಬಿಟ್ಟೋದವು, ಆ ಮುರಿದ ಬಿಟ್ಟೋದ ಸಂಬಂಧದ,
ಗಾಯ ತುಂಬುವುದು ಬಾಕಿ ಇದೆ,

ನೀನು ಮುಂದೆ ಹೋಗು,ನಾನು ಬರುವೆ, ನಿನ್ನನು ಬಿಟ್ಟು ಬದುಕುವೇನೋ? ಈ ಉಸಿರಲ್ಲಿ ಯಾರ ಹಕ್ಕು ಇದೆಯೋ,
ಅವರನ್ನು ಒಲಿಸುವುದು ಬಾಕಿ ಇದೆ,

ಸ್ವಲ್ಪ ನಿಧಾನ ಜೀವನ, ಇನ್ನೆಷ್ಟೋ ಋಣ ತೀರಿಸಲಿದೆ,


ಅನುವಾದ : ಹರೀಶ್ ಶೆಟ್ಟಿ, ಶಿರ್ವ ಮೂಲ : ಗುಲ್ಜಾರ್

A poem by Gulzar:

Ahista chal zindagi,
abhi kai karz chukana baaki hai.
Kuch dard mitana baaki hai,
kuch farz nibhana baaki hai.

Raftaar mein tere chalne se
kuchh rooth gaye, kuch chhut gaye.
Roothon ko manana baaki hai,
roton ko hasana baki hai.

Kuch hasraatein abhi adhuri hain,
k
kaam bhi aur zaruri hai.
Khwahishen jo ghut gayi is dil mein,
unko dafnana baki hai.

Kuch rishte ban kar toot gaye,
kuch judte-judte chhut gaye.
Un tootte-chhutte rishton ke
zakhmon ko mitana baki hai.

Tu aage chal main aata hoon,
kya chhod tujhe ji paunga?
In saanson par haqq hai jinka,
unko samjhaana baaki hai.

Aahista chal zindagi,
abhi kai karz chukana baki hai...



Wednesday, June 10, 2015

ಅಹಂ ಅನುರಾಗ

ಹೆಜ್ಜೆ ಆ ತಿರುವಿನಲ್ಲಿಯೇ
ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು
ನಿಂತಿದ್ದೇನೆ
ಅನುರಾಗ ನನ್ನನ್ನು
ಒತ್ತಾಯಿಸುತ್ತಿದೆ
ಹಿಂತಿರುಗಿ ನೋಡು ಎಂದು
ಅಹಂ ಹೇಳುತ್ತಿದೆ
ತಿರುವು ದಾಟಿ ಬಿಡು ಎಂದು
ಆದರೆ ಅಂತರಂಗ ಹೇಳುತ್ತಿದೆ 
ತೆರೆದ ಕಿಟಕಿಯ ಹಿಂದೆ 

ಎರಡು ಕಣ್ಣು ಇಣುಕುತ್ತಿದೆ ಎಂದು
ಈಗಲೂ ನನ್ನ ನಿರೀಕ್ಷೆಯಲ್ಲಿ 

ಅವಳೂ ಎಚ್ಚರದಲ್ಲಿ ಇರುತ್ತಾಳೆ ಎಂದು
ಎಲ್ಲಿಯಾದರೂ ಅವಳ 

ಹೃದಯ ಮೂಲೆಯಲಿ 
ವೇದನೆ ಇರಬೇಕಲ್ಲವೇ
ಅವಳಿಗೆ ಹಠ ನಾನು ಕರೆಯಬೇಕೆಂದು
ನನ್ನ ಬೇಡಿಕೆ ಅವಳು ಕರೆಯಲೆಂದು
ಹೆಜ್ಜೆ ಆ ತಿರುವಿನಲ್ಲಿಯೇ ಸ್ಥಿರವಾಗಿದೆ
ಮೆರೆತ ದೃಷ್ಟಿಯಿಟ್ಟು ನಿಂತಿದ್ದೇನೆ
ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
क़दम उसी मोड़ पर जमे हैं
नज़र समेटे हुए खड़ा हूँ
जुनूँ ये मजबूर कर रहा है पलट के देखूँ
ख़ुदी ये कहती है मोड़ मुड़ जा
अगरचे एहसास कह रहा है
खुले दरीचे के पीछे दो आँखें झाँकती हैं
अभी मेरे इंतज़ार में वो भी जागती है
कहीं तो उस के गोशा-ए-दिल में दर्द होगा
उसे ये ज़िद है कि मैं पुकारूँ
मुझे तक़ाज़ा है वो बुला ले
क़दम उसी मोड़ पर जमे हैं
नज़र समेटे हुए खड़ा हूँ

Tuesday, June 2, 2015

ಘನಶ್ಯಾಮ ಸುಂದರ ಶ್ರೀಧರ

ಘನಶ್ಯಾಮ ಸುಂದರ ಶ್ರೀಧರ
ಅರುಣೋದಯವಾಯಿತು
ಎದ್ದೇಳು ಬೇಗ ವನಮಾಲಿ
ಮುಂಜಾವಿನ ಸ್ನೇಹಿತ ಬಂದಾಯಿತು

ನಂದನ ಕಂದನೇ ಸೂರ್ಯೋದಯವಾಯಿತು 
ರಾತ್ರಿಯ ಆಟ ಮುಗಿದಾಯಿತು
ಕ್ಷೀರವನು ತುಂಬಿ ಮೊಲೆಯಲಿ
ಹಸು ಕರೆಯುತ್ತಿದೆ ಕೂಗಿ ಕೂಗಿ
ಹರೆಯ ಹಸಿದ ಕರುಗಳು
ಇಣುಕುತ್ತಿದೆ ಬಾಗಿ ಬಾಗಿ
ಸ್ತನಪಾನ ಮಾಡುವ ಹಂಬಲದಲಿ

ಸಂಧ್ಯಾ ಮರದಲಿ ಆಶ್ರಯ ಪಡೆದ ಹಕ್ಕಿಗಳೆಲ್ಲ
ಅರುಣೋದಯಾದಂತೆ
ಹೊಟ್ಟೆ ಪಾಡಿಗಾಗಿ ಹಾರಿ ಹೋಯಿತೆಲ್ಲ
ಜೀವನೋಪಾಯಗೋಸ್ಕರ
ಮುಂಜಾವ ಹಿಡಿದು ನೇಗಿಲನು
ಹೊಲವೆಂಬ ತಿರ್ಥಸ್ಥಾನಕ್ಕೆ  ನಡೆದರು ರೈತರೆಲ್ಲ
ಹರಟೆ ಹೊಡೆಯುತ ಗೋಪಿಯರೆಲ್ಲ 
ಸೊಂಟಸುತ್ತ ಮಡಕೆ ಹಿಡಿದು
ಭಕ್ಷಿಸಲು ಮೊಸರನ್ನ ಮುಕುಂದನಿಗೆ
ಯಮುನಾ ತೀರಕ್ಕೆ ನಡೆದರೆಲ್ಲ

ತೇಜಸ್ಸು ನಿನ್ನಲ್ಲಿ ಪ್ರಜ್ವಲಿಸುತ್ತಿದೆ
ಕೋಟಿ ಸೂರ್ಯನ
ಹೋನಾಜಿ ನಮಿಸುವನು ದಿನನಿತ್ಯ
ಹೃದಯದಿಂದ ನಿನ್ನನ

ಅನುವಾದ : ಹರೀಶ್ ಶೆಟ್ಟಿ, ಶಿರ್ವ


ಮೂಲ : ಹೋನಾಜಿ ಬಾಳ
ಹಾಡಿದವರು : ಪಂಡಿತರಾವ್ ನಾಗರ್ಕರ್ /ಲತಾ ಮಂಗೇಶ್ಕರ್
ಸಂಗೀತ : ವಸಂತ್ ದೇಸಾಯಿ
ಮರಾಠಿ ಚಿತ್ರ :ಅಮರ್ ಭೂಪಾಲಿ

घनश्याम सुंदरा श्रीधरा अरुणोदय झाला
उठिं लवकरि वनमाळी उदयाचळी मित्र आला

आनंदकंदा प्रभात झाली उठी सरली राती
काढी धार क्षीरपात्र घेउनी धेनु हंबरती
लक्षिताती वासुरें हरी धेनु स्तनपानाला

सायंकाळीं एके मेळीं द्विजगण अवघे वृक्षीं
अरुणोदय होताच उडाले चरावया पक्षी
प्रभातकाळी उठुनि कावडी तीर्थ पथ लक्षी
करुनि सडासंमार्जन गोपी कुंभ घेऊनी कुक्षीं
यमुनाजळासि जाति मुकुंदा दध्योदन भक्षी

कोटी रवीहून तेज आगळें तुझिया वदनाला
होनाजी हा नित्य ध्यातसे हृदयी नाम माला
https://www.youtube.com/watch?v=LQWSzQcOTGs



Sunday, May 10, 2015

"ಅಮ್ಮ"

ಚಿತ್ರ ಕೃಪೆ : ಗೂಗಲ್ 
"ಅಮ್ಮ"

ಹಿಟ್ಟಿನ ಶುದ್ಧ ರೊಟ್ಟಿಯ ಮೇಲೆ, ಹುಳಿ ಚಟ್ನಿಯ ಹಾಗೆ ಅಮ್ಮ
ನೆನಪಾಗುತ್ತದೆ ಆ ಒಲೆ, ಪಾತ್ರೆ, ಚಿಮ್ಮಟ, ಊದುಕೊಳವೆಯ ಹಾಗೆ ಅಮ್ಮ

ಬಿದಿರಿನ ಮಂಚದ ಮೇಲೆ, ಪ್ರತಿಯೊಂದು ಧ್ವನಿಗೆ ಕಿವಿ ಕೊಟ್ಟು ಕೇಳುವ
ಅರ್ಧ ನಿದ್ರೆಯಲಿ ಅರ್ಧ ಎಚ್ಚರ, ದಣಿದ ಮಧ್ಯಾಹ್ನದ ಹಾಗೆ ಅಮ್ಮ

ಹಕ್ಕಿಗಳ ಕಳರವದಲಿ ಪ್ರತಿಧ್ವನಿಸುವ ರಾಧೆ ಮೋಹನ ಅಲಿ ಅಲಿ
ಕೋಳಿಯ ಕೂಗಿಗೆದ್ದು, ಮನೆಯ ಬಾಗಿಲ ಚಿಲಕದ ಹಾಗೆ ಅಮ್ಮ

ಮಡದಿ,ಮಗಳು,ಸೋದರಿ,ನೆರೆಯವಳು, ಸ್ವಲ್ಪ ಸ್ವಲ್ಪ ಎಲ್ಲರಲ್ಲೂ
ಇಡೀ ದಿನ ಒಂದು ಹಗ್ಗದ ಮೇಲೆ, ನಡೆಯುವ ಪ್ರಬುದ್ಧ ಕಲಾವಿದೆಯಂತೆ ಅಮ್ಮ

ಹಂಚಿಕೊಂಡು ತನ್ನ ಚಹರೆ, ಹಣೆ, ಕಣ್ಣನ್ನು ಅದೆಲ್ಲಿಗೆ ಹೋಗಿ ಬಿಟ್ಟಳು
ಹರಿದು ಹೋದ ಹಳೆ ಒಂದು ಚಿತ್ರ ಪುಸ್ತಕದಲ್ಲಿ ಚಂಚಲ ಹುಡುಗಿಯ ಹಾಗೆ ಅಮ್ಮ

ಮೂಲ : ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

" माँ "

बेसन की सोंधी रोटी पर, खट्टी चटनी जैसी माँ
याद आती है चौका, बासन, चिमटा, फूंकनी जैसी माँ

बांस की खुर्री खाट के ऊपर, हर आहट पर कान धरे
आधी सोई आधी जागी, थकी दोपहरी जैसी माँ

चिड़ियों के चहकार में गूंजे, राधा - मोहन  अली- अली
मुर्गी की आवाज़ से खुलती, घर की कुण्डी जैसी माँ

बीवी, बेटी, बहन, पड़ोसन, थोड़ी थोड़ी सब में
दिन भर इक रस्सी के ऊपर, चलती नटनी जैसी माँ

बाँट के अपना चेहरा, माथा, आँखें, जाने कहाँ गयी
फटे पुराने इक एलबम, में चंचल लड़की जैसी माँ...

निदा फ़ाज़ली 

Monday, September 15, 2014

ಈದ್ ಜಾತ್ರೆ ಭಾಗ -೬ (ಅಂತಿಮ)

ಈದ್ ಜಾತ್ರೆ
ಭಾಗ -೬ (ಅಂತಿಮ)
ವಿಜೇತನಿಗೆ ಸೋತವರಿಂದ ಯಾವ ರೀತಿಯ ಸತ್ಕಾರ ಸಿಗಬೇಕೋ, ಅಂತಹದ್ದೇ ಸತ್ಕಾರ ಹಮೀದನಿಗೆ ಸಿಕ್ಕಿತು,ಇತರರಿಗೆ ಮೂರಾಣೆ, ನಾಲ್ಕಾಣೆ ಖರ್ಚು ಮಾಡಿ ಸಹ ಯಾವುದೇ ಉಪಯೋಗದ ವಸ್ತು ಖರೀದಿ ಮಾಡಲಾಗಲಿಲ್ಲ, ಹಮೀದ್ ಕೇವಲ ಮೂರು ಪೈಸೆಯಿಂದಲೇ ತನ್ನ ಶ್ರೇಷ್ಟತೆ ಸ್ಥಾಪಿಸಿದ, ಸತ್ಯ ಅಲ್ಲವೇ ಆಟಿಕೆಗಳ ಏನು ಭರವಸೆ? ಮುರಿಯುವುದು, ಆದರೆ ಹಮೀದನ ಚಿಮ್ಮಟಕ್ಕೆ ವರ್ಷಗಟ್ಟಲೆ ಏನೂ ಆಗದು.

ಒಪ್ಪಂದದ ಕುರಿತು ಬಗ್ಗೆ ಚರ್ಚೆ ನಡೆಯಿತು, ಮೋಹಸಿನ್ ಹೇಳಿದ "ಸ್ವಲ್ಪ ನಿನ್ನ ಚಿಮ್ಮಟ ಕೊಡು, ನಾವು ನೋಡುತ್ತೇವೆ, ನೀನು ನನ್ನ 'ನೀರು ವಾಹಕತೆಗೆದುಕೊಂಡು ನೋಡು."

ಮಹಮೂದ್, ನೂರೆ ಸಹ ತನ್ನ ತನ್ನ ಆಟಿಕೆಗಳನ್ನು ನೀಡಿದರು.

ಹಮೀದನಿಗೆ ಈ ಒಪ್ಪಂದದಿಂದ ಯಾವುದೇ ಆಕ್ಷೇಪಣೆ ಇರಲಿಲ್ಲ, ಚಿಮ್ಮಟ ಎಲ್ಲರ ಕೈಗೆ ಸಾಲು ಸಾಲಾಗಿ ಹೋಯಿತು ಹಾಗು ಅವರ ಆಟಿಕೆ ಹಮೀದನ ಕೈಗೆ ಬಂತು, ಎಷ್ಟು ಒಳ್ಳೆಯ ಆಟಿಕೆಗಳು.

ಹಮೀದ್ ಸೋತವರ ಕಣ್ಣೀರು ಒರೆಸಿದ "ನಾನು ನಿಮ್ಮ ಕೀಟಲೆ ಮಾಡುತ್ತಿದ್ದೆ ಹೌದು ಆದರೆ  ಸತ್ಯಯಂದರೆ  ಈ ಚಿಮ್ಮಟ, ಈ ಆಟಿಕೆಗಳ ಸಾಟಿಗೆ ಎಲ್ಲಿಯೂ ನಿಲ್ಲುವುದಿಲ್ಲ."

ಆದರೆ ಮೋಹಸಿನನಿಗೆ ಹಮೀದನ ಈ ಸಾಂತ್ವನೆಯಿಂದ ಸಂತೋಷವಾಗುವುದಿಲ್ಲ, ಅವನಿಗೆ ಇನ್ನು ಸಮಾಧಾನ ಪಡಿಸಲು ಹಮೀದ್ "ನೋಡು ಈ ಚಿಮ್ಮಟಕ್ಕೆ ಅಂಟಿದ ಕಾಗದ ನೀರಿನಿಂದಲೂ ಹೋಗುವುದಿಲ್ಲ, ಇದರ ಕಡೆ ಸಹ ಸರಿ ಇಲ್ಲ."

ಮೋಹಸಿನ್ "ಆದರೆ ನಮ್ಮ ಈ ಆಟಿಕೆಗಳಿಗೆ ಯಾರು ನಮ್ಮನ್ನು ಕೊಂಡಾಡುದಿಲ್ಲವಲ್ಲ."

ಮಹಮೂದ್ "ನೀನು ಕೊಂಡಾಡುವುದನ್ನು ಬಯಸುವೆ, ಪೆಟ್ಟೊಂದು ಸಿಗದಿದ್ದರೆ ಸಾಕು, ಅಮ್ಮ ಖಂಡಿತ ಹೇಳುವಳು "ಜಾತ್ರೆಯಲ್ಲಿ ನಿಮ ಈ ಮಣ್ಣಿನ ಆಟಿಕೆಯೇ ಸಿಕ್ಕಿತ್ತಾ ಎಂದು?"

ಈಗಂತೂ ಹಮೀದನಿಗೆ ಸಹ ಮಹಮೂದನ ಮಾತಿಗೆ ಒಪ್ಪಿಗೆ ನೀಡಬೇಕಾಯಿತು, ನನ್ನ ಚಿಮ್ಮಟ ನೋಡಿ ಅಮ್ಮನಿಗೆ ಆಗುವಷ್ಟು ಸಂತೋಷ, ಈ ಆಟಿಕೆಗಳನ್ನು ನೋಡಿ  ಯಾರ ತಾಯಿಗೆ ಸಹ ಅಷ್ಟು ಸಂತೋಷವಾಗದು, ಮೂರು ಪೈಸೆಯಲ್ಲಿ ಅವನಿಗೆ ಎಲ್ಲವೂ ಮಾಡಲಿಕ್ಕೆ ಇತ್ತು, ಆ ಪೈಸೆಯ ಉಪಯೋಗದ ಬಗ್ಗೆ ಪಶ್ಚಾತ್ತಾಪ ಪಡುವ ಇನ್ನು ಅಗತ್ಯವೇ ಇಲ್ಲ, ಈಗಂತೂ ಚಿಮ್ಮಟ ಭಾರತ ವೀರ, ಎಲ್ಲ ಆಟಿಕೆಗಳ ರಾಜ.

ರಸ್ತೆಯಲ್ಲಿ ಮಹಾಮೂದನಿಗೆ ಹಸಿವೆ ಆಯಿತು, ಅವನ ತಂದೆ ಅವನಿಗೆ ತಿನ್ನಲು ಬಾಳೆಹಣ್ಣು ಕೊಟ್ಟ, ಮಹಮೂದ್ ಅದನ್ನು ಕೇವಲ ಹಮೀದನೊಟ್ಟಿಗೆ ಹಂಚಿ ತಿಂದ, ಅವನ ಇತರ ಮಿತ್ರರು ಮುಖ ನೋಡುತ್ತಾ ನಿಂತರು, ಇದು ಚಿಮ್ಮಟದ ಪ್ರಸಾದವಾಗಿತ್ತು.

ಹನ್ನೊಂದು ಗಂಟೆಗೆ ಊರಿನಲ್ಲಿ ಕೋಲಾಹಲ ಶುರುವಾಯಿತು, ಜಾತ್ರೆಗೆ ಹೋದವರು ಬಂದರು, ಜಾತ್ರೆಗೆ ಹೋದವರು ಬಂದರೆಂದು.

ಮೋಹಸಿನನ ತಂಗಿ ಓಡಿ ಬಂದು ಅವನ ಕೈಯಿಂದ 'ನೀರು ವಾಹಕ' ಕಸಿದುಕೊಂಡಳು, ಖುಷಿಯಿಂದ ಓಡಾಡುವಾಗ ಅವಳ ಕೈಯಿಂದ 'ನೀರು ವಾಹಕ" ಕೆಳಗೆ ಬಿದ್ದು ಸ್ವರ್ಗಲೋಕಕ್ಕೆ ತೆರಳಿದ, ಇದಕ್ಕೆ ಅಣ್ಣ ತಂಗಿಯ ಮಧ್ಯೆ ಜಗಳವಾಯಿತು, ಇಬ್ಬರೂ ತುಂಬಾ ಅತ್ತರು, ಅವರ ಬೊಬ್ಬೆ ಕೇಳಿ ಅವರ ಅಮ್ಮ ಬಂದು ಮೇಲಿಂದ ಅವರಿಗೆ ಇನ್ನು ಎರಡು ಎರಡು ಏಟು ಬಾರಿಸಿ ಹೋದರು.

ನೂರೆ ತಂದ ವಕೀಲನ ಅ೦ತ್ಯ ಅದರ ಪ್ರತಿಷ್ಠೆಯ ಅನುಕೂಲ ತುಂಬಾ ಗೌರವದಿಂದ ಆಯಿತು, ವಕೀಲ ನೆಲದಲ್ಲಂತೂ ಕುಳಿತುಕೊಳ್ಳುವುದಿಲ್ಲ, ಅವನ ಮರ್ಯಾದೆಯ ಸಹ ವಿಚಾರ ಮಾಡಬೇಕಲ್ಲವೇ, ಗೋಡೆಗೆ ಮೊಳೆ ಹೊಡೆಯಲಾಯಿತು, ಅದರ ಮೇಲೆ ಒಂದು ಮರದ ತುಂಡು ಇಡಲಾಯಿತು, ಅದರ ಮೇಲೆ ಕಾಗದದ ಹಾಳೆ ಹಾಸಲಾಯಿತು, ವಕೀಲ ರಾಜ ಭೋಜನ ಹಾಗೆ ಸಿಂಹಾಸನದ ಮೇಲೆ ವಿರಾಜಿಸಿದ. ಮೂಲೆಯಲ್ಲಿ ಬಿದ್ದ ರಟ್ಟಿನಿಂದ ಫ್ಯಾನ್ ತಯಾರಿಸಲಾಯಿತು, ನೂರೆ ಅದರಿಂದ ವಕೀಲ ಸಾಹೇಬರಿಗೆ ಗಾಳಿ ಬೀಸಲಾರಂಭಿಸಿದ, ನ್ಯಾಯಾಲಯದಲ್ಲಂತೂ ವಿದ್ಯುತ್ ಫ್ಯಾನ್ ಇರುತ್ತದೆ, ಇಲ್ಲಿ ಮಾಮೂಲಿ ಫ್ಯಾನ್ ಆದರೂ ಬೇಕಲ್ಲವೇ, ಇಲ್ಲಾದರೆ ವಕೀಲ ಸಾಹೇಬರಿಂದ ಕಾನೂನಿನ ತಾಪ ಸಹಿಸಲಾಗದಿದ್ದರೆ, ನೂರೆ ತುಂಬಾ ರಭಸದಿಂದ ರಟ್ಟಿನ ಫ್ಯಾನ್ ಬೀಸಲಾರಂಭಿಸಿದ, ಹಠತ್ತಾನೆ ಫ್ಯಾನಿನ ಏಟು ತಾಗಿ ವಕೀಲ ಕೆಳಗೆ ಬಿದ್ದು ಮಣ್ಣು ಪಾಲಾಗಿ ಮೃತ್ಯುಲೋಕಕ್ಕೆ ಸೇರಿದ, ಅಲ್ಲಿಗೆ ವಕೀಲನ ಕಥೆ ಮುಗಿಯಿತು, ತುಂಬಾ ಜೋರಿನಿಂದ ಶೋಕಾಚರಣೆ ನಡೆಯಿತು, ಕಡೆಗೆ ವಕೀಲನ ಅಸ್ತಿಯನ್ನು ಕಸದ ಬುಟ್ಟಿಗೆ ಹಾಕಲಾಯಿತು.

ಈಗ ಉಳಿದ ಮಹಮೂದನ ಸಿಪಾಯಿ, ಅವನಿಗೆ ಕೂಡಲೇ ಊರಿನ ರಕ್ಷಣೆ ಭಾರ ವಹಿಸಲಾಯಿತು, ಪೋಲಿಸಿನ  ಸಿಪಾಯಿ ಅಂದರೆ ಮಾಮೂಲಿ ವ್ಯಕ್ತಿ ಏನಲ್ಲ, ನಡೆದುಕೊಂಡು ಹೋಗಲು, ಅವನಂತೂ ಪಾಲಕಿಯ ಮೇಲೆ ಕುಳಿತು ಹೋಗುವನು. ಒಂದು ಬುಟ್ಟಿ ತರಿಸಲಾಯಿತು, ಅದರ ಒಳಗೆ ಕೆಂಪು ಹರಿದ ಕೆಲವು ಚಿಂದಿ ಇಡಲಾಯಿತು, ಅದರ ಮೇಲೆ ಸಿಪಾಯಿ ಸಾಹೇಬರು ಆರಾಮದಿಂದ ಮಲಗಿದರು, ಮಹಮೂದ್ ಈ ಬುಟ್ಟಿಯನ್ನು ತಲೆಯ ಮೇಲೆ ಇಟ್ಟು ಮನೆಯ ಸುತ್ತು ತಿರುಗಲಾರಂಭಿಸಿದ, ಅವನ ಹಿಂದೆ ಅವನ ಎರಡು ಸಣ್ಣ ತಮ್ಮಂದಿರು ಸಿಪಾಯಿಯ ಹಾಗೆ "ಮಲಗಿದವರೇ, ಎಚ್ಚರಿಕೆಯಲ್ಲಿರಿ" ಎಂದು ಕರೆ ನೀಡುತ ನಡೆಯಲಾರಂಭಿಸಿದರು, ಆದರೆ ರಾತ್ರಿ ಅಂದರೆ ಕತ್ತಲೆ ಇರಬೇಕು, ಈ ಕತ್ತಲೆ ನಿರ್ಮಿಸುವ ಗಡಿಬಿಡಿಯಲ್ಲಿ ಮಹಮೂದನ ಕಾಲು ಕಲ್ಲಿಗೆ ತಾಗಿ ಅವನ ತಲೆಯಲ್ಲಿದ್ದ ಬುಟ್ಟಿ ಕೆಳಗೆ ಬಿತ್ತು, ಅದರಲ್ಲಿದ್ದ ಮೀಯಾ ಸಿಪಾಯಿ ತನ್ನ ಬಂದೂಕಿನ ಜೊತೆ ನೆಲದ ಮೇಲೆ ಬಿದ್ದ, ಪಾಪ ಅವನ ಒಂದು ಕಾಲು ತುಂಡಾಗಿ ವಿಕಾರ ಉಂಟಾಯಿತು. ಆದರೆ ಮಹಮೂದನಿಗೆ ಇಂದು ತಿಳಿಯಿತು ಅವನೊಬ್ಬ ಒಳ್ಳೆ ಡಾಕ್ಟರ ಎಂದು, ಅವನಿಗೆ ಅಂತಹ ಮುಲಾಮು ಗೊತ್ತಿದೆ ಅಂದರೆ ಅವನು ಅದರಿಂದ ಸಿಪಾಯಿಯ ಕಾಲನ್ನು ಜೋಡಿಸಬಹುದು, ಕೇವಲ ಅದಕ್ಕಾಗಿ ಸ್ಯ್ಕಾಮೊರ್ ವೃಕ್ಷದ ಹಾಲು ಬೇಕು ಅಷ್ಟೇ, ಆಯಿತು ಹಾಲೂ ಬಂತು, ಶಸ್ತ್ರಕ್ರಿಯೆ ಶುರುವಾಯಿತು, ಆದರೆ ಕಾಲು ಸರಿಯಾಗಲಿಲ್ಲ, ಇನ್ನೊಂದು ಕಾಲನ್ನು ತುಂಡು ಮಾಡಲಾಯಿತು, ಈಗ ಸರಿ ಆಯಿತು ಎರಡೂ ಕಾಲಿಲ್ಲ, ಈಗ ಸಿಪಾಯಿ ಸನ್ಯಾಸಿ ಆದ, ಈಗ ಅವನು ಕುಲಿತ್ತಲ್ಲೇ ಕಾವಲು ನೀಡುವನು. ಕೆಲವೊಮ್ಮೆ ಅವನು ದೇವರು ಆಗುತ್ತಾನೆ, ತಲೆಯನ್ನು ಸ್ವಲ್ಪ ಕೆತ್ತಲಾಯಿತು, ಆ ನಂತರ ಅವನ ಹಲವು ತರಹದ ರೂಪಾಂತರ ಮಾಡಲಾಯಿತು, ಕೆಲವೊಮ್ಮೆ ಅವನ್ನು ತೂಕದ ರೂಪದಲ್ಲಿಯೂ ಉಪಯೋಗಿಸಲಾಯಿತು.

ಇನ್ನು ಮೀಯಾ ಹಮೀದನ ಅವಸ್ಥೆ ಕೇಳಿ, ಅಮೀನಾ ಅವನ ಸ್ವರ ಕೇಳಿ ಓಡಿ ಬಂದು ಅವನನ್ನು ಅಪ್ಪಿಕೊಂಡು ಮುದ್ದಿಸ ತೊಡಗಿದಳು, ಇದ್ದಕ್ಕಿದ್ದಂತೆ ಅವನ ಕೈಯಲ್ಲಿ ಚಿಮ್ಮಟ ನೋಡಿ ಆಶ್ಚರ್ಯ ಗೊಂಡಳು.

"ಈ ಚಿಮ್ಮಟ ಎಲ್ಲಿಂದ?"

"ನಾನು ಖರೀದಿ ಮಾಡಿ ತಂದದ್ದು."

"ಎಷ್ಟಕ್ಕೆ?"

"ಮೂರು ಪೈಸೆಗೆ."

ಅಮೀನಾ ರೋಧಿಸಿದಳು "ಅಯ್ಯೋ ಅಲ್ಲಾ, ಎಂಥ ಅವಿವೇಕಿ ಮಗು ಅಂದರೆ ಮಧ್ಯಾಹ್ನ ಆಯಿತು ಏನು ತಿನ್ನಲಿಲ್ಲ, ಏನು ಕುಡಿಯಲಿಲ್ಲ, ತಂದ ಏನು ಚಿಮ್ಮಟ!"

"ಎಲ್ಲ ಜಾತ್ರೆಯಲ್ಲಿ ನಿನಗೆ ಬೇರೇನೂ ಸಿಗಲಿಲ್ಲ, ಈ ಚಿಮ್ಮಟ ಅಲ್ಲದೆ?"

ಹಮೀದ್ ಅಪರಾಧ ಭಾವದಲ್ಲಿ "ನಿನ್ನ ಬೆರಳು ತವೆಯಲ್ಲಿ ಸುಟ್ಟು ಹೋಗುತ್ತದೆ, ಅದಕ್ಕಾಗಿ ನಾನು ತಂದೆ."

ಅಮೀನಾಳ ಕೋಪ ಕೂಡಲೇ ಸ್ನೇಹದಲ್ಲಿ ಪರಿವರ್ತಿಸಿತು, ಸ್ನೇಹ ಸಹ ಅಂತಹ ಅಲ್ಲಸೂಕ್ಷ್ಮಮತಿಯ ಅಲ್ಲ, ಕೇವಲ ಶಬ್ದಗಳಲ್ಲಿ ಕಾಣುವಂತಹದಲ್ಲ, ಇದು ಮೂಕ ಸ್ನೇಹವಾಗಿತ್ತು, ತುಂಬಾ ವಿಶ್ವಸನೀಯರಸಮಯ, ರುಚಿಯಾದದ್ದು, ಮಗುವಿನಲ್ಲಿ ಎಷ್ಟು ತ್ಯಾಗ, ಎಷ್ಟು ಸದ್ಭಾವ, ಎಷ್ಟು ವಿವೇಕ ಇದೆ, ಇತರರನ್ನು ಮಿಠಾಯಿ ತಿನ್ನುವುದು, ಆಟಿಕೆ ಖರೀದಿ ಮಾಡುವುದನ್ನು ನೋಡಿ ಇವನ ಮನಸ್ಸಲ್ಲಿ ಎಷ್ಟು ಆಸೆ ಹುಟ್ಟಿರಬೇಕು, ಇವನಲ್ಲಿ ಇಷ್ಟು ನಿಯಂತ್ರಣಶಕ್ತಿ ಬಂತು ಎಲ್ಲಿಂದ? ಅಲ್ಲಿಯೂ ಈ ಮುದಿ ಅಜ್ಜಿಯ ನೆನಪು ಹೋಗಲಿಲ್ಲ, ಅಮೀನಾಳ ಹೃದಯದಲ್ಲಿ ಪ್ರೇಮ ಉಕ್ಕಿ ಬಂತು.

ಮತ್ತು ಈಗ ಇನ್ನೊಂದು ವಿಚಿತ್ರ ಮಾತಾಯಿತು, ಹಮೀದನ ಈ ಚಿಮ್ಮಟಕ್ಕಿಂತಲೂ ವಿಚಿತ್ರ, ಮಗು ಹಮೀದ್ ಈಗ ಮುದುಕನ ರೂಪ ತಾಳಿದ, ಅಮೀನಾ ಬಾಲಿಕೆಯಾದಳು, ಅವಳು ಅಳುತ್ತಿದ್ದಳು, ಹಮೀದ್ ಅವಳ ತಲೆ ಸವರುತ್ತಾ ಸಾಂತ್ವನ ನೀಡುತ್ತಿದ್ದ, ಕೈಯನ್ನು ಎತ್ತಿ ಅಮೀನಾ ಹಮೀದ್ ಗೋಸ್ಕರ ಅದೆಷ್ಟೋ ಆಶೀರ್ವಾದ ಬೇಡಿದಳು, ಕಣ್ಣೀರು ಹನಿ ಹನಿ ಹರಿಯುತ್ತಲೇ ಇತ್ತು, ಪಾಪ ಹಮೀದನಿಗೆ ಇದರ ರಹಸ್ಯ  ಹೇಗೆ ತಾನೇ ತಿಳಿಯುವುದು!

(ಮುಗಿಯಿತು)
ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

Sunday, September 14, 2014

ಈದ್ ಜಾತ್ರೆ ಭಾಗ - ೫


ಈದ್ ಜಾತ್ರೆ
ಭಾಗ - ೫

ಎಷ್ಟು ಒಳ್ಳೆಯ ಹುಡುಗ, ಇವರ ಆಟಿಕೆಗಳಿಗೆ ಯಾರು ತಾನೇ ಇವರನ್ನು ಕೊಂಡಾಡುವರು? ದೊಡ್ಡವರ ಆಶಿರ್ವಾದ ನೇರ ಅಲ್ಲಾನಲ್ಲಿಗೆ ಹೋಗುತ್ತದೆ ಮತ್ತೆ ಬೇಗನೆ ನೆರವೇರುತ್ತದೆ, ನಾನು ಇವರ ದುಷ್ಟ ವರ್ತನೆ ಯಾಕೆ ಸಹಿಸಲಿ? ಬಡವನೇ ಆಗಲಿ ಆದರೆ ಯಾರಿಂದ ಏನನ್ನು ಕೇಳಲು ಹೋಗುವುದಿಲ್ಲ ಅಲ್ಲವೇ, ಒಂದಾನೊಂದು ದಿನ ಅಬ್ಬಜಾನ್ ಬರುವರು ತಾನೇ, ಅಮ್ಮಿಜಾನ್ ಸಹ ಬರುವಳು, ನಂತರ ಇವರ ಹತ್ತಿರ ಕೇಳುತ್ತೇನೆ, ಎಷ್ಟು ಆಟಿಕೆ ಬೇಕೆಂದು, ಒಬ್ಬೊಬ್ಬನಿಗೆ ಒಂದೊಂದು ಚೀಲ ಆಟಿಕೆ ಕೊಡುವೆ ಹಾಗು ತೋರಿಸುವೆ ಗೆಳೆಯರ ಒಟ್ಟಿಗೆ ಹೇಗೆ ವ್ಯವಹಾರ ಮಾಡಬೇಕೆಂದು, ಇದಲ್ಲ ಒಂದು ಪೈಸೆಯ ಪೇಡ ತೆಗೊಂಡು ತೋರಿಸಿ ತೋರಿಸಿ ತಿನ್ನುವುದು, ಈಗ ಎಲ್ಲರು ನಗುವರು ಹಮೀದ್ ಚಿಮ್ಮಟ ಖರೀದಿ ಮಾಡಿದ್ದಾನೆ ಎಂದು, ನಗಲಿ, ಅವರ ಬಾಯಾಗೆ ಹುಳ ಬೀಳಲಿ. 

ಅವನು ಅಂಗಡಿಯವನಿಗೆ ಕೇಳಿದ "ಈ ಚಿಮ್ಮಟ ಎಷ್ಟಕ್ಕೆ?"

ಅಂಗಡಿಯವನು ಅವನನ್ನು ನೋಡಿದ, ಅವನ ಒಟ್ಟಿಗೆ ಯಾರೂ ಇರದಿದ್ದನ್ನು ನೋಡಿ "ಇದು ನಿನ್ನ ಕೆಲಸದಲ್ಲ ಮಾರಾಯ!"

"ನಿನಗೆ ಇದು ಮಾರಲಿಕ್ಕೆದೆಯಾ, ಇಲ್ಲವ?"

"ಮಾರಲಿಕ್ಕೆ ಯಾಕೆ ಇಲ್ಲ, ಅದಕ್ಕೆ ತಾನೇ ಇಟ್ಟದ್ದು"

"ಮತ್ಯಾಕೆ ಹೇಳುವುದಿಲ್ಲ, ಇದಕ್ಕೆ ಎಷ್ಟು ಕ್ರಯ ಅಂತ?"

"ಆರು ಪೈಸೆ"

ಹಮೀದನಿಗೆ ನಿರಾಸೆ ಮೂಡಿತು.

ಅವನ ಮುಖ ನೋಡಿ ಅಂಗಡಿಯವನು "ಸರಿ, ಐದು ಪೈಸೆ ಕೊಡು, ಬೇಕಾದರೆ ಕೊಂಡೋಗು, ಇಲ್ಲಾದರೆ ಇರಲಿ."

ಹಮೀದ್ ಹೃದಯ ಗಟ್ಟಿ ಮಾಡಿ "ಮೂರು ಪೈಸೆಗೆ ಕೊಡುವೆಯ?"

ಹೀಗೆ ಹೇಳಿ ಅವನು ಈಗ ಅಂಗಡಿಯವನು ಬಯ್ಯುತ್ತಾನೆ ಎಂದು ಮುಂದೆ ಹೋಗಲಾರಂಭಿಸಿದ, ಆದರೆ ಅಂಗಡಿಯವನು ಏನು ಹೇಳಲಿಲ್ಲ, ಚಿಮ್ಮಟ ತೆಗೆದು ಅವನ ಕೈಯಲ್ಲಿ ಇಟ್ಟ, ಹಮೀದ್ ಬೇಗನೆ ತನ್ನಲ್ಲಿದ್ದ ಮೂರು ಪೈಸೆ ಅವನಿಗೆ ಕೊಟ್ಟ. ಹಮೀದ್ ಆ ಚಿಮ್ಮಟವನ್ನು ಹೀಗೆ ತನ್ನ ಭುಜದಲ್ಲಿ ಇಟ್ಟ ಅಂದರೆ ಯಾವುದೇ ಬಂದೂಕಿನ ಹಾಗೆ ಹಾಗು ತುಂಬಾ ಆಕರ್ಷಕವಾಗಿ ನಡೆದು ತನ್ನ ಸಂಗಡಿಗರು ಇದ್ದಲ್ಲಿ ಬಂದ, ಸ್ವಲ್ಪ ಕೇಳುವ ಈಗ ಇವರು ಏನು ಪ್ರತಿಕ್ರಿಯಿಸುತ್ತಾರೆ ಅಂತ.

ಮೋಹಸಿನ್ ನಗುತ್ತ "ಈ ಚಿಮ್ಮಟ ಯಾಕೆ ತಂದೆ ಮೂರ್ಖ, ಇದರ ಏನು ಮಾಡುವೆ?"

ಹಮೀದ್ " ಸ್ವಲ್ಪ ನಿನ್ನ 'ನೀರು ವಾಹಕ' ಕೆಳಗೆ ಬೀಳಿಸು, ಎಲ್ಲ ಅದರ ಎಲುಬು ಚೂರು ಚೂರಾಗುತ್ತದೆ, ಏನು ಉಳಿಯುತ್ತದೆ."

ಮೆಹಮೂದ್ "ಅಂದರೆ ಈ ಚಿಮ್ಮಟ ನಿನ್ನ ಆಟಿಕೆಯ?"

ಹಮೀದ್ "ಆಟಿಕೆ ಯಾಕೆ ಅಲ್ಲ, ಈಗ ಭುಜದ ಮೇಲೆ ಇಟ್ಟಿದ್ದೆ, ಬಂದೂಕು ಆಯಿತುಕೈಯಲ್ಲಿ ಇಟ್ಟೆ, ಸನ್ಯಾಸಿಯರ ಬಾರಿಸುವ ಚಿಮ್ಮಟ ಆಯಿತು, ಈ ಚಿಮ್ಮಟದಿಂದ ಒಂದು ಏಟು ಇಟ್ಟರೆ ನಿಮ್ಮ ಈ ಎಲ್ಲ ಆಟಿಕೆಗಳ ಜೀವ ಹೋಗಬಹುದು, ನಿಮ್ಮ ಆಟಿಕೆಯಿಂದ ಎಷ್ಟು ಬೇಕಾದರೂ ಪ್ರಯತ್ನಿಸಿ ನನ್ನ ಚಿಮ್ಮಟವನ್ನು ಏನು ಮಾಡಲಾಗದು, ನನ್ನ ವೀರ ಸಿಂಹ ಈ ಚಿಮ್ಮಟ."

ಸಮ್ಮಿ ಕಠಾರಿ ತೆಗೆದುಕೊಂಡಿದ್ದ, ಹಮೀದನಿಂದ ಪ್ರಭಾವಿತನಾಗಿ "ನನ್ನ ಕಠಾರಿಯಿಂದ ಬದಲಾಯಿಸುವೆಯ, ಇದು ಎರಡಾಣೆಯ?"

ಹಮೀದ್ ಅವನ ಕಠಾರಿಯನ್ನು ಉಪೇಕ್ಷೆಯಿಂದ ನೋಡಿದ "ನನ್ನ ಈ ಚಿಮ್ಮಟ ಬೇಕಾದರೆ ನಿನ್ನ ಕಠಾರಿಯ ಹೊಟ್ಟೆ ಹರಿದು ಬಿಡಬಹುದು, ಸ್ವಲ್ಪ ಚರ್ಮ ಸುತ್ತಿದೆ ಅಷ್ಟೇ, ಸ್ವಲ್ಪ ನೀರು ಬಿದ್ದರೆ ಮುಗಿಯುವುದು, ನನ್ನ ಚಿಮ್ಮಟ ಧೈರ್ಯವಂತ, ಬೆಂಕಿಯಲ್ಲಿ, ನೀರಲ್ಲಿ, ಬಿರುಗಾಳಿಯಲ್ಲಿ ಎಲ್ಲಿ ಬೇಕಾದರೂ ನಿಲ್ಲುವ ಸಾಮರ್ಥ್ಯ ಇದೆ ಇದರಲ್ಲಿ.

ಚಿಮ್ಮಟ ಎಲ್ಲರನ್ನೂ ಮೋಹಿಸಿತು, ಆದರೆ ಈ ಹಣ ಯಾರಲ್ಲಿ ಇತ್ತು? ಮತ್ತು ಈಗ ಜಾತ್ರೆಯಿಂದ ಎಷ್ಟೋ ದೂರ ಬಂದು ಆಗಿದೆ, ಯಾವಾಗ ತಾನೇ ಒಂಬತ್ತು ಗಂಟೆ ಆಗಿದೆ, ಈಗಂತೂ ಬಿಸಿಲು ಸಹ ಹೆಚ್ಚಾಗುತ್ತಿದೆ, ಮನೆಗೆ ಹೋಗುವ ಅವಸರ, ತಂದೆಯಿಂದ ಹೇಳಿದರೂ ಚಿಮ್ಮಟ ಸಿಗಲಿಕ್ಕಿಲ್ಲ, ಹಮೀದ್ ತುಂಬಾ ಚಾಣಾಕ್ಷ, ಅದಕ್ಕೆ ದುಷ್ಟ ತನ್ನ ಹಣ ಉಳಿಸಿ ಇಟ್ಟಿದ್ದ.

ಈಗ ಬಾಲಕರ ಎರಡು ತಂಡ ನಿರ್ಮಾಣವಾಯಿತು, ಒಂದರಲ್ಲಿ ಮೋಹಸಿನ್, ಮೆಹಮೂದ್, ನೂರೆ ಮತ್ತು ಸಮ್ಮಿ ಇದ್ದ, ಎರಡನೇ ತಂಡದಲ್ಲಿ ಕೇವಲ ಹಮೀದ್, ಸಶಸ್ತ್ರ, ಸಮ್ಮಿ ವಿದ್ರೋಹ ಮಾಡಿದ, ಬಂದು ಹಮೀದನ ತಂಡಕ್ಕೆ ಸೇರಿದ, ಆದರೆ ಮೋಹಸಿನ್, ಮಹಮೂದ್, ನೂರೆ ಹಮೀದಕ್ಕಿಂತ ಪ್ರಾಯದಲ್ಲಿ ಎರಡು ಎರಡು ವರ್ಷ ದೊಡ್ಡವರಾದರೂ ಹಮೀದನ ಆಕ್ರಮಣದಿಂದ ಭಯಭೀತರಾಗಿದ್ದರು, ಅವನ ಹತ್ತಿರ ನ್ಯಾಯದ ಬಲ ಇತ್ತು ಹಾಗು ನೀತಿಯ ಶಕ್ತಿ, ಒಂದು ಕಡೆ ಮಣ್ಣಿದೆ ಅಂದರೆ ಇನ್ನೊಂದು ಕಡೆ ಕಬ್ಬಿಣ ಹಾಗು ಅದು ತನ್ನನ್ನು ಶಕ್ತಿಶಾಲಿ ಎಂದು ಘೋಷಿಸುತ್ತಿದೆ, ಅದು ಅಜೇಯ, ಘಾತಕ. ಒಂದು ವೇಳೆ ಸಿಂಹ ಬಂದರೆ ನೀರು ವಾಹಕ ಮಹಾಶಯ  ಕಕ್ಕಬಿಕ್ಕಿಯಾಗುವನು, ಸಿಪಾಯಿ ಮಹಾಶಯ ಬಂದೂಕು ಬಿಟ್ಟು ಓಡಿ ಹೋಗುವನು, ವಕೀಲ ಸಾಹೇಬ ವಾದ ಬಿಟ್ಟು ಅದರ ಮುಂದೆ ಕುಣಿಯಲಾರಂಭಿಸುವನು, ಆದರೆ ಶಕ್ತಿಶಾಲಿ ಚಿಮ್ಮಟ, ಈ ಭಾರತ ವೀರ ಸಿಂಹದ ಕುತ್ತಿಗೆಯ ಮೇಲೆ ಸವಾರಿ ಮಾಡಿ ಅದರ ಕಣ್ಣು ಕಿತ್ತುಕೊಳ್ಳುವುದು.

ಆದರೂ ಮೋಹಸಿನ್ ಸ್ವಲ್ಪ ಮೆಲ್ಲ ಧ್ವನಿಯಲ್ಲಿ "ಆದರೆ ಅದಕ್ಕೆ ನೀರು ತುಂಬಿಸಲು ಸಾಧ್ಯವಿಲ್ಲವಲ್ಲ?"

ಹಮೀದ್ ಚಿಮ್ಮಟ ಎತ್ತಿಕೊಂಡು  "ನೀರು ವಾಹಕನಿಗೆ ಒಂದು ಸಲ ಬಯ್ದರೆ, ಅವನು ಓಡಿ ಹೋಗಿ ನೀರು ತಂದು ದ್ವಾರಕ್ಕೆ ಹಾಕಿ ಹೋಗುವನು."

ಮೋಹಸಿನ್ ಸೋಲನ್ನು ಒಪ್ಪಿಕೊಂಡ, ಆದರೆ ಮಹಮೂದ್ "ಒಂದು ವೇಳೆ ನಿಮ್ಮನ್ನು ಹಿಡಿದು ಬಿಟ್ಟರೆ, ನ್ಯಾಯಾಲಯದಲ್ಲಿ ವಕೀಲನ ಕಾಲ ಮುಂದೆ ಕುಳಿತು ಬೇಡುತ್ತಿರುವೆ."

ಹಮೀದನಿಗೆ ಮಹಮೂದನ ಪ್ರಬಲ ತರ್ಕಕ್ಕೆ ಉತ್ತರ ನೀಡಲಾಗಲಿಲ್ಲ, ಅವನು "ನಮ್ಮನ್ನು ಯಾರು ಹಿಡಿಯಲಿಕ್ಕೆ ಬರುತ್ತಾರೆ?"

ಮಹಮೂದ್ ದರ್ಪದಿಂದ "ನನ್ನ ಸಿಪಾಯಿ ಬಂದೂಕಧಾರಿ."

ಹಮೀದ್ "ಪಾಪ, ಈ ಸಿಪಾಯಿ ನಮ್ಮ ಭಾರತ ವೀರನನ್ನು ಹಿಡಿಯುವುದ, ಆಗಲಿ ಬನ್ನಿ, ಸ್ವಲ್ಪ ಕುಸ್ತಿ ಮಾಡೋಣ, ಇದರ ಮುಖ ನೋಡಿಯೇ ಓಡಿ ಹೋಗುವನು, ಹಿಡಿಯುವುದು ಹೇಗೆ."

ಮೋಹಸಿನನಿಗೆ ಹೊಸ ಏಟು ಹೊಳೆಯಿತು "ನಿನ್ನ ಚಿಮ್ಮಟದ ಮುಖ ದಿನಾಲೂ ಬೆಂಕಿಯಲ್ಲಿ ಸುಡುವುದು."

ಅವನು ಎನಿಸಿದ ಹಮೀದನಿಗೆ ಇದರ ಉತ್ತರ ಕೊಡಲು ಆಗದು ಎಂದು, ಆದರೆ ಅದಾಗಲಿಲ್ಲ "ಬೆಂಕಿಯಲ್ಲಿ ಧೈರ್ಯವಂತರೆ ಹಾರುವುದು ಮಹಾಶಯ, ನಿಮ್ಮ ಈ ವಕೀಲ, ಸಿಪಾಯಿ, ನೀರು ವಾಹಕ ಹೆಂಗಸರಂತೆ ಮನೆಯೊಳಗೇ ಅವಿತು ಕುಳಿತುಕೊಳ್ಳುವರು, ಬೆಂಕಿಯಲ್ಲಿ ಆ ಕೆಲಸ ಇದೆ ಅಂದರೆ ಅದನ್ನು ಕೇವಲ ಈ ಭಾರತ ವೀರನೆ ಮಾಡಬಲ್ಲ."

ಮಹಮೂದ್ ಇನ್ನೊಮ್ಮೆ ಪ್ರಯತ್ನಿಸಿದ "ವಕೀಲ ಸಾಹೇಬ ಕುರ್ಚಿಯಲ್ಲಿ ಕುಳಿತುಕೊಳ್ಳುವನು, ನಿನ್ನ ಈ ಚಿಮ್ಮಟ ಅಡುಗೆಮನೆಯ ನೆಲದಲ್ಲಿ ಎಲ್ಲೋ ಬಿದ್ದಿರುವ ಹೊರತು ಏನು ಮಾಡಬಹುದು?"

ಮಹಮೂದನ ಈ ತರ್ಕ ನೂರೆ ಮತ್ತು ಸಮ್ಮಿಗೆ ಸಹ ಹಿಡಿಯಿತುಎಷ್ಟು ಸರಿ ಮಾತು ಹೇಳಿದ್ದಾನೆ ಮಹಮೂದ್ ಮೀಯಾ, ಚಿಮ್ಮಟ ಅಡುಗೆಮನೆಯ ನೆಲದಲ್ಲಿ ಎಲ್ಲೋ ಬಿದ್ದಿರುವ ಹೊರತು ಏನು ಮಾಡಬಹುದು.

ಹಮೀದನಿಗೆ ಯಾವುದೇ ಸರಿಯಾದ ಉತ್ತರ ಸಿಗಲಿಲ್ಲ, ಅದಕ್ಕೆ ಅವನು ಒಟ್ಟಾರೆ ವಾದ ಮಾಡಲು ಶುರು ಮಾಡಿದ "ನನ್ನ ಚಿಮ್ಮಟ ಅಡುಗೆಮನೆಯಲ್ಲಿ ಇರಲಾರದು, ಅದು ವಕೀಲನ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಹಾಗು ಎಲ್ಲ ಕಾನೂನುಗಳನ್ನು ಆ ವಕೀಲನ ಹೊಟ್ಟೆಗೆ ಹಾಕಿ ಬಿಡುವುದು." ಮಾತು ಯಾರಿಗೂ ಹಿಡಿಯಲಿಲ್ಲ, ಆದರೆ ಕಾನೂನುಗಳನ್ನು ವಕೀಲನ ಹೊಟ್ಟೆಗೆ ಹಾಕುವ ಮಾತು ಕೇಳಿ ಆ ಎಲ್ಲ ಧೀರರು ಬೆರಗಾದರು. ಈ ಮಾತಿಗೆ  ಏನು ಅರ್ಥವಿರಲಿಲ್ಲ, ಆದರೆ ಒಂದು ಹೊಸತನ ಇತ್ತು, ಮಕ್ಕಳನ್ನು ಚಕಿತಗೊಳಿಸಿತು. ಅವರೆಲ್ಲ ಶರಣಾದರು, ಹಮೀದ್ ಗೆದ್ದಿದ, ಈಗ ಅವನ ಚಿಮ್ಮಟ ಭಾರತ ವೀರ ಎಂದು ಇದರಲ್ಲಿ ಮೋಹಸಿನ್, ಮಹಮೂದ್ , ನೂರೆ, ಸಮ್ಮಿ ಇವರಿಗೆ ಯಾವುದೇ ಆಕ್ಷೇಪಣೆ ಇರಲಿಲ್ಲ.


(ಮುಂದುವರಿಯುವುದು)

 ಮೂಲ : ಪ್ರೇಮಚಂದ್

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ