Tuesday, February 19, 2013

ಒಂದು ವೇಶ್ಯೆಯ ಕಥೆ

ಪ್ರತಾಪ ಬಂದು ಬಾಗಿಲು ತೆರೆದ. 

ದ್ವಾರದಲ್ಲಿ ಸುಮಾರು ೪೫ ವಯಸ್ಸಿನ ಹೆಂಗಸು ನಿಂತಿದ್ದಳು, ಅವಳ ಕೈಯಲ್ಲಿ ಬ್ಯಾಗ್ ಹಾಗು ಹಿಂದೆ ಮೂರು, ನಾಲ್ಕು ಪೆಟ್ಟಿಗೆ ಇತ್ತು.

ಅವನ ಮುಖ ಕೆಂಪೇರಿತು "ಹೇಗೆ ಬಂದೆ? ಪತ್ರ ಆದರೂ ಬರೆಯ ಬೇಕಿತಲ್ಲವೇ" ಎಂದು ಅಸಮಾಧಾನದಿಂದ ನುಡಿದ.

ಅವಳು ನಸು ನಗುತ "ಮಗನ ಮನೆಗೆ ಬರಲಿಕ್ಕೆ ಯಾಕೆ ಇದು ಎಲ್ಲ, ಹೀಗೆಯೇ ಮನಸ್ಸಾಯಿತು ಬಂದೆ" ಎಂದು ಉತ್ತರಿಸಿದಳು.

ಮನಸ್ಸಿಲ್ಲದೆ ಅವನು ಅವಳಿಗೆ ಒಳಗೆ ಬರಲು ಹಾದಿ ಬಿಟ್ಟ.

ಒಳಗಿನಿಂದ ಚಿಂಟು ಓಡಿ ಬಂದ "ಅಜ್ಜಿ ".

ಇವಳು ಸಂತಸದಿಂದ "ಒಹ್ ಒಹ್ ಒಹ್, ಚಿಂಟು ಎಷ್ಟು ದೊಡ್ಡ ಆಗಿದೆ ನೀನು".


ಆಗ ಒಳಗಿನಿಂದ ಪ್ರತಾಪನ ಹೆಂಡತಿ ಗೀತಾ ಬಂದು "ಚಿಂಟು , ಬಾ ಒಳಗೆ" ಎಂದು ಅವನನ್ನು ಎಳೆದು ಒಳಗೆ ನಡೆದಳು.

ಇವಳಿಗೆ ಹೇಗೋ ಅನಿಸಿತು, ಆದರೂ ತನ್ನನ್ನು ಸಾವರಿಸಿ "ಮತ್ತೇನು ವಿಶೇಷ ಪ್ರತಾಪ, ನೀವೆಲ್ಲ ಸೌಖ್ಯ ತಾನೇ?" ಎಂದು ಕೇಳಿದಳು.

ಪ್ರತಾಪ ಮನಸ್ಸಿಲ್ಲದೆ " ಹ್ಮ್ಮ್ , ಸೌಖ್ಯ" ಎಂದು ಉತ್ತರಿಸಿದ. 


ಆಗ ಒಳಗಿನಿಂದ ಗೀತಾ "ರೀ ,ಇಲ್ಲಿ ಬನ್ನಿರಿ " ಎಂದು ಜೋರಾಗಿ ಕರೆದಳು.

ಪ್ರತಾಪ ಒಳಗೆ ಬಂದು "ಏನು? "

ಗೀತಾ "ಇವರು ಇಲ್ಲಿ ಯಾಕೆ ಬಂದಿದ್ದಾರೆ? ಇಲ್ಲಿ ಯಾರಿಗಾದರೂ ಗೊತ್ತದ್ದರೆ ನಮ್ಮ ಮರ್ಯಾದೆ ಬೀದಿ ಪಾಲಾಗುತ್ತದೆ, ಬೇಗ ಅವರಿಗೆ ಏನೋ ನೆಪ ಹೇಳಿ ಇಲ್ಲಿಂದ ಕಳಿಸಿ".

ಪ್ರತಾಪ "ನಾನೇನು ಮಾಡಲಿ ಹೇಳದೆ ಕೇಳದೆ ಬಂದಿದ್ದಾಳೆ".

ಗೀತಾ "ನನಗೇನು ಗೊತ್ತಿಲ್ಲ, ಅವರಿಗೆ ನೇರ ಹೇಳಿ, ಇಲ್ಲಿ ಬಂದು ನಮ್ಮ ಜೀವನ ಹಾಳು ಮಾಡುವುದು ಬೇಡ ಅಂತ".

ಪ್ರತಾಪ ಹೊರಗೆ ಬಂದ, ಅವನ ಮುಖ ನೋಡಿ ಎಲ್ಲ ತಿಳಿದ ಆ ತಾಯಿಗೆ ಬೇಸರವಾದರೂ "ಏನಾಯಿತು ಪ್ರತಾಪ"?

ಪ್ರತಾಪ " ಅಮ್ಮ ನೋಡು, ನಿನ್ನ ವಿಷಯ ಇಲ್ಲಿ ಯಾರಿಗಾದರೂ ತಿಳಿದರೆ ನಮ್ಮ ಜೀವನ ಹಾಳಾಗುತ್ತದೆ, ನೀನು ಇಲ್ಲಿ ಬರಬೇಡ ಅಮ್ಮ, ಬೇಕಾದರೆ ವರುಷಕ್ಕೊಮ್ಮೆ ನಾನೇ ನಿನ್ನಲ್ಲಿಗೆ ಬಂದು ಹೋಗುತ್ತೇನೆ".

ಅವಳ ಮುಖದಲ್ಲಿ ವಿಷಾದ ನಗು ಮೂಡಿತು.


ಮಗ ಹೇಳುವುದು ಸಹಜ ಅಲ್ಲವೇ?


ಅವನ ತಾಯಿ ಆದರೂ ನಾನೊಂದು ವೇಶ್ಯೆ ಎಂಬ ಸತ್ಯ ಸುಲ್ಲಾಗುದಿಲ್ಲವಲ್ಲ?

ಏನಾಯಿತು ವೇಶ್ಯೆಯ ದಾರುಣ ಜೀವನ ಸಾಗಿಸಿ ಸಹ ಇವನಿಗೆ ಒಳ್ಳೆ ಬೋರ್ಡಿಂಗ್ ಶಾಲೆಯಲ್ಲಿ ಕಲಿಸಿ, ಉತ್ತಮ ಶಿಕ್ಷಣ ಕೊಟ್ಟು ಇಂಜಿನಿಯರ್ ಮಾಡಿದರೆ?

ಏನಾಯಿತು ದಿನ ಹತ್ತು ಹದಿನೈದು ಜನರನ್ನು ತೃಪ್ತ ಗೊಳಿಸಿ ಪಡೆದ ಹಣದಿಂದ ತನಗಾಗಿ ಏನೂ ಇಡದೆ ಇವನಿಗಾಗಿ ಜೀವನದ ಎಲ್ಲ ಸುಖ ಸೌಕರ್ಯ ಒದಗಿಸಿದರೆ?

ಏನಾಯಿತು ಜೀವನದ ಎಲ್ಲ ಉಳಿಸಿದ ಹಣದಿಂದ ಇವನಿಗೆ ಈ ಮನೆ ಮಾಡಿ ಕೊಟ್ಟಿದ್ದರೆ?

ಈ ಸೂಳೆ ಒಂದು ದಿನ ನಾನು ಮಗ, ಸೊಸೆ ,ಮೊಮ್ಮಗನೊಟ್ಟಿಗೆ ಸುಖವಾಗಿರುವೆ ಎಂಬ ಕನಸು ಕಂಡಿದ್ದು ತಪ್ಪಲ್ಲವೆ ?

ಈ ದಿನ ನಿತ್ಯದ ವೇದನೆಯಿಂದ ಇಷ್ಟು ಬೇಗ ಮುಕ್ತಿ ಸಿಗುವುದು ಎಂದು ಎನಿಸಿದ್ದು ತಪ್ಪಲ್ಲವೆ?

ಅವಳ ಕಣ್ಣಿಂದ ಕಣ್ಣೀರು ಹರಿಯಲಾರಂಭಿಸಿತು.

ಬೇಗನೆ ಕಣ್ಣೀರು ಒರೆಸಿ " ಪ್ರತಾಪ ಈ ಮೂರು ಪೆಟ್ಟಿಗೆಯಲ್ಲಿ ನಿಮಗಾಗಿ ಉಡುಗೊರೆ, ಬಟ್ಟೆ, ತಿಂಡಿ ತಿನಿಸು ತಂದಿದ್ದೇನೆ, ನಾನಿನ್ನೂ ಬರುತ್ತೇನೆ, ಸುಖವಾಗಿರಿ" ಎಂದು ಹೇಳಿದಳು.

ಪ್ರತಾಪ "ಅಮ್ಮ ಬೇಜಾರ ಮಾಡಬೇಡ.... "

"ಬೇಜಾರ.... ಹ್ಹ್ಮ್ .. ನನಗೆ ಎಂತಹ ಬೇಜಾರ " ಅವಳು ಕಣ್ಣೀರು ಅಡಗಿಸಿ ನಕ್ಕಳು, "ಆಯಿತು ಬರುತ್ತೇನೆ, ಸುಖವಾಗಿರಿ" ಎಂದು ಹೇಳಿ ಹೊರಟಳು.



ಮರಳಿ ಪುನಃ ಅದೇ ಜೀವನಕ್ಕೆ , ದಿನ ನಿತ್ಯ ಸಾಯಲು ಅದೇ ನರಕ ಯಾತನೆ ತುಂಬಿದ ಜೀವನಕ್ಕೆ.



by ಹರೀಶ್ ಶೆಟ್ಟಿ, ಶಿರ್ವ

10 comments:

  1. :-( ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಬೆಳೆಸುತ್ತಾರೆ , ಆದರೆ ಮಕ್ಕಳು :-(

    ReplyDelete
  2. ತುಂಬಾ ಧನ್ಯವಾದಗಳು ನಿಮಗೆ.

    ReplyDelete
  3. ತುಂಬಾ ಧನ್ಯವಾದಗಳು ನಿಮಗೆ.

    ReplyDelete
  4. ಧನ್ಯವಾದಗಳು ನಿಮಗೆ.

    ReplyDelete
  5. ಧನ್ಯವಾದಗಳು ನಿಮಗೆ.

    ReplyDelete
  6. ತುಂಬಾ ಧನ್ಯವಾದಗಳು ನಿಮಗೆ.

    ReplyDelete
  7. ಅವನು ಅವರ ತಾಯಿಯನ್ನು ಮನೆಗೆ ಯಾಕೆ ಬಂದೆ ಅನ್ನುವಾಗ ಅವನು ಬೆಳದು ಬಂದ ದಾರಿ ಅರ್ಥವಾಗಲಿಲ್ಲವೆ?

    ReplyDelete
  8. ತುಂಬಾ ಧನ್ಯವಾದಗಳು ನಿಮಗೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...