Monday, February 18, 2013

ದುರ್ಭಾಗ್ಯ

ದುರ್ಭಾಗ್ಯ 
____
ಕಲ್ಲಿನ ಕೋಟೆಯಲಿ 
ಮಲ್ಲಿಗೆಯ ಹೂವು 
ಅರಳಿ ಬಾಡುತಿದೆ
______________
ನದಿಯ ತಟದಲಿ 
ನಿಂತ ಹಳೆ ದೋಣಿಗೆ 
ನೀರಲ್ಲಿ ತೇಲುವ ಮನಸ್ಸಾಗುತ್ತಿದೆ 
___________________
ಗುಡಿಸಲ ಮಣ್ಣ ಅಡಿಯಲಿ
ಕಳ್ಳನೊಬ್ಬ ಬಚ್ಚಿಟ್ಟ
ಅಪಾರ ಸಂಪತ್ತು ಅಡಗಿದೆ
ಗುಡಿಸಲಲ್ಲಿ ವಾಸಿಸುವ
ಬಡ ಕುಟುಂಬ ಹಸಿವಿನಿಂದ
ಬಳಲುತ್ತಿದ್ದಾರೆ ಅನ್ನವಿಲ್ಲದೆ
____________________
ಅವನೊಬ್ಬ
ಪ್ರಸ್ಸಿದ್ದ ಮಿಠಾಯಿ ಉದ್ಯಮಿ
ಆದರೆ ಅವನಿಗೆ
ಸಿಹಿ ತಿನ್ನುವ ಭಾಗ್ಯವಿಲ್ಲ
ಯಾಕೆಂದರೆ ಅವನಿಗೆ ಸಿಹಿ ರೋಗ
____________________
ಹಕ್ಕಿವೊಂದು ಮರದಲಿ
ಗೂಡು ಕಟ್ಟಿ
ಹೊಟ್ಟೆ ಪಾಡಿಗಾಗಿ
ಹೊರ ಹೋಯಿತು
ಹಿಂತಿರುಗಿ ಬಂದು ನೋಡಿದರೆ
ಆ ಮರವೇ ಇರಲಿಲ್ಲ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...