ಯಾರದ್ದೋ ಸೊತ್ತು
ಯಾರದ್ದೋ ಭಾಗ್ಯದಲ್ಲಿ
___________
ಯಾರೋ
ಕಟ್ಟಿದ ಕಟ್ಟಡದಲ್ಲಿ
ಯಾರೋ ಇರುವುದು
____________
ನದಿಯಲ್ಲಿ ತುಂಬು ನೀರು
ಆದರೆ ಸುತ್ತ ಮುತ್ತ ಬೇಲಿಗಳು
ಅಲ್ಲಿಯ ಜನರ ಭಾಗ್ಯದಲ್ಲಿ
ಆ ನದಿಯ ನೀರಿಲ್ಲ ,
ಎಲ್ಲೊ ದೂರ ಇದ್ದವರು
ನಲ್ಲಿನಿಂದ
ಆ ನದಿಯ ನೀರನ್ನು ಪಡೆಯುವರು
_____________
ಅವನ ಮನೆ
ಮದುವೆ ಆದ ನಂತರ
ಈಗ ಅಲ್ಲಿ
ಅವನ ಹೆಂಡತಿಯ
ಶಾಸನೆ
_____________
ಆತ ಅವಳಿಗಾಗಿ
ದೊಡ್ಡ ಸಿನಿಮಾ
ನಿರ್ಮಿಸಿದ
ಸಿನಿಮಾದ ಹೆಸರು "ಹುಚ್ಚ"
ಈಗ
ಅವಳು ದೊಡ್ಡ ನಟಿ
ಇವನು "ಹುಚ್ಚ "
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment