Thursday, February 21, 2013

ಚಂದನದಂತಹ ಮೈ ಚಂಚಲ ದೃಷ್ಟಿ


!!ಚಂದನದಂತಹ ಮೈ ಚಂಚಲ ದೃಷ್ಟಿ
ನಿನ್ನ ಈ ಮೋಹಕ ನಸುನಗೆ
ನನ್ನನ್ನು ದೂರದಿರಿ ಜಗದವರೇ
ಒಂದು ವೇಳೆ ನಾನು ಮರುಳಾದರೆ!!

!!ಈ ಬಿಲ್ಲಿನಂತ ನಿನ್ನ ಹುಬ್ಬುಗಳು
ಕಣ್ರೆಪ್ಪೆಯ ತುದಿಯಲಿ ಕಾಡಿಗೆಯ ಅಲಂಕಾರ
ಹಣೆಯ ಮೇಲೆ ಕುಂಕುಮದ ಸೂರ್ಯ
ಅಧರದಲಿ ಜ್ವಲಿಸುವ ಬೆಂಬೂದಿ ಜ್ವಾಲ
ನೆರಳು ಸಹ ನಿನ್ನನ್ನು ಸೋಕಿದರೆ
ಅರಳುವುದು ಈ ನಿರ್ಜನ ಹೃದಯವೂ!!
ಚಂದನದಂತಹ ಮೈ ಚಂಚಲ ದೃಷ್ಟಿ

!!ದೇಹವೂ ಸುಂದರ ಮನವೂ ಸುಂದರ
ನೀನು ಸುಂದರತೆಯ ಮೂರ್ತಿ ಆಗಿರುವೆ
ಇನ್ಯಾರಿಗೂ ಬಹುಶಃ ಕಡಿಮೆ ಇರಬಹುದು
ನನಗೆ ನಿನ್ನ ತುಂಬಾ ಅಗತ್ಯವಿದೆ
ಮೊದಲೂ ಈ ಹೃದಯ ತುಂಬಾ ಹಂಬಲಿಸಿದೆ
ನೀನು ಇನ್ನು ಈ ಹೃದಯವನ್ನು ಹಂಬಲಿಸದಿರು!!
ಚಂದನದಂತಹ ಮೈ ಚಂಚಲ ದೃಷ್ಟಿ

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜೀ ಆನಂದ್ ಜೀ
ಚಿತ್ರ : ಸರಸ್ವತಿ ಚಂದ್ರ

चन्दन सा बदन चंचल चितवन
धीरे से तेरा ये मुसकाना
मुझे दोष ना देना जगवालों
हो जाऊ अगर मैं दीवाना

ये काम कमान भावे तेरी
पलको के किनारे कजरारे
माथेपर सिंदूरी सूरज
होठों पे दहकते अंगारे
साया भी जो तेरा पड जाए
आबाद हो दिल का विराना

तन भी सुन्दर, मन भी सुन्दर
तू सुन्दरता की मूरत है
किसी और को शायद कम होगी
मुझे तेरी बहोत जरुरत है
पहले भी बहोत दिल तरसा है
तू और ना दिल को तरसाना
http://www.youtube.com/watch?v=qnimQYX6Eu0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...