!!ಸ್ಪರ್ಶಿಸಿ ಮನಸ್ಸನ್ನು
ಮಾಡಿದೆ ಯಾವ ಸನ್ನೆ ನೀನು ನನಗೆ !!
!!ಸ್ಪರ್ಶಿಸಿ ಮನಸ್ಸನ್ನು
ಮಾಡಿದೆ ಯಾವ ಸನ್ನೆ ನೀನು ನನಗೆ
ಬದಲಾಯಿತು ವಾತಾವರಣ
ಮೋಹಕ ಎನಿಸುತ್ತಿದೆ ಜಗವೆಲ್ಲ ನನಗೆ !!೩
!!ನೀನೊಂದು ವೇಳೆ ಹೇಳಿದರೆ
ಜೀವನ ಪರ್ಯಂತ ನಿನಗಾಗಿ ನಾ ಹಾಡುವೆ
ನಿನಗಾಗಿ ನಾ ಹಾಡುವೆ
ಗೀತೆ ನಿನ್ನ ನುಡಿಗಳಲ್ಲಿ ಬರೆಯುತಾ ಇರುವೆ
ಬರೆಯುತಾ ಇರುವೆ
ಗೀತೆಯಲಿ ನನ್ನ ಹುಡುಕುವರು ಜಗವೆಲ್ಲ ನಿನಗೆ !!
ಸ್ಪರ್ಶಿಸಿ ಮನಸ್ಸನ್ನು
ಮಾಡಿದೆ ಯಾವ ಸನ್ನೆ ನೀನು ನನಗೆ-೨
!!ಬಾ ನಿನ್ನ ಮಡಿಲನ್ನು
ಪ್ರೀತಿಯಿಂದ ನಾ ತುಂಬುವೆ
ಪ್ರೀತಿಯಿಂದ ನಾ ತುಂಬುವೆ
ಜಗತ್ತಿನ ಎಲ್ಲ ಸಂತೋಷ ನಿನಗೆ ಅರ್ಪಿಸುವೆ
ನಿನಗೆ ಅರ್ಪಿಸುವೆ
ನೀನೆ ನನ್ನ ಜೀವನ ನೀನೆ ಆಧಾರ ನನಗೆ!!
ಸ್ಪರ್ಶಿಸಿ ಮನಸ್ಸನ್ನು
ಮಾಡಿದೆ ಯಾವ ಸನ್ನೆ ನೀನು ನನಗೆ-೨
ಮೂಲ : ಅಂಜಾನ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ರಾಜೇಶ್ ರೋಶನ್
ಚಿತ್ರ : ಯಾರಾನಾ
Chhookar Mere Man Ko Kiya Toone Kya Ishaara
badla Yeh Mausam Lage Pyaara Jag Saara
tu Jo Kahe Jeevan Bhar Tere Liye Maein Gaoon
geet Tere Bolon Pe Likhta Chala Jaoon
mere Geeton Mein Tujhe Dhoonde Jag Saara
chhookar Mere Man Ko
aaja Tera Aanchal Yeh Pyaar Se Maein Bhar Doon
khushiyaan Jahan Bhar Ki Tujhko Nazar Kar Doon
tu Hi Mera Jeevan Tu Hi Jeene Ka Sahaara
chhookar Mere Man Ko
http://www.youtube.com/watch?v=_AeyCl-DliQ
No comments:
Post a Comment