Wednesday, February 27, 2013

ಶಿಲೆ ನಾನು


ಶಿಲೆ ನಾನು
ಸಾಗರದ ತೀರ
ಎಷ್ಟೋ ವರ್ಷದಿಂದ ನಿಂತಿದ್ದೇನೆ
ಅಲೆಗಳ ಏಟು ತಿಂದು ತಿಂದು,
ಮಳೆ ಬಿರುಗಾಳಿ ಎನ್ನದೆ
ಸತತ ಒಂದೇ ಸ್ಥಾನದಲಿ ನನ್ನ ವಾಸ !!

ಪ್ರೀತಿ ಮಾಡುವವರು
ನನ್ನಲ್ಲಿ ಪ್ರೇಮ ನಾಮ
ಪ್ರೇಮ ಚಿಹ್ನೆ ಕೆತ್ತಿ ಹೋಗುವರು
ನನಗೆ ನೋವಾದರೂ ಸಹಿಸುವೆ
ಅವರ ಪ್ರೀತಿಗೆ ಆನಂದ ಪಡುವೆ
ನನ್ನಲ್ಲಿ ಅಂಕಿತವಾದದ್ದು ಎಂದೂ ಆಗದು ಅಳಿಸ !!

ಕೆಲವು ಏಕಾಂತ ಜೀವಿ
ಬಂದು ನನ್ನ ಮೇಲೆ ಕುಳಿತು
ನನ್ನನ್ನು ಕಣ್ಣೀರಿಂದ ಮೀಯಿಸಿ
ತನ್ನ ಮನಸ್ಸು ಹಗುರಗೊಳಿಸಿ
ಶಾಂತಿ ಪಡೆಯುವರು
ಅವರ ದುಃಖ ನೋವನ್ನು ನನ್ನಿಂದಾಗದು ಬಣ್ಣಿಸ!!

ಹಲವರು ಜನ
ಕೋಪದಿಂದಲೋ ಅಸೂಯೆಯಿಂದಲೋ
ಬಂದು ನನ್ನನ್ನು ಕೆದಕುವರು
ಆಶ್ಚರ್ಯ,ಅವರಿಗೆ ಎನನ್ನು ಮಾಡದ ನನಗೆ ಯಾಕೆ ಕೆದಕುವರೆಂದು
ಕ್ಷಮಿಸುವೆ ಅವರನ್ನು,ನೋವಾದರೂ ಕೆದಕಲಿ ಎನ್ನುವೆ
ಹೇಗೂ ಕೋಪ ಅಸೂಯೆ ತುಂಬಿದ ಜನರ ಜೀವನ ನಿರಸ !!

ಶಿಲೆ ನಾನು
ಸಾಗರದ ತೀರ
ಎಷ್ಟೋ ವರ್ಷದಿಂದ ನಿಂತಿದ್ದೇನೆ
ಅಲೆಗಳ ಏಟು ತಿಂದು ತಿಂದು,
ಮಳೆ ಬಿರುಗಾಳಿ ಎನ್ನದೆ
ಸತತ ಒಂದೇ ಸ್ಥಾನದಲಿ ನನ್ನ ವಾಸ !!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...