Wednesday, February 6, 2013

ಹಳ್ಳಿಯ ಹಳೆ ಮನೆ


(ಫೋಟೋ :ಗೂಗಲ್ ಕೃಪೆ )
ಕಾಲಿಟ್ಟೆ
ಹಳ್ಳಿಯ ಹಳೆ ಮನೆಯಲಿ
ನೆನಪಿನ ಅಂಗಲದಲಿ
ಬಾಲ್ಯದ ದೃಶ್ಯ
ಸಿನಿಮಾದಂತೆ ಚಲಿಸತೊಡಗಿತು
ಅಜ್ಜ, ಅಜ್ಜಿ, ಮಾವ, ಚಿಕ್ಕಮ್ಮ
ಬೆಲ್ಲ ನೀರು
ಅಜ್ಜಿಯ ಬೀಡದ ತಟ್ಟೆ
ತೆಂಗಿನ ಕಾಯಿ, ಬಾಳೆ ಹಣ್ಣುಗಳು
ಅಕ್ಕಿಯ ಮುಡಿ, ಅಡಿಕೆಯ ಮಡಕೆ
ನೇತಾಡಿಸಿಟ್ಟಿದ ಸೌತೆ ಕಾಯಿಗಳು
ಬಸಳೆ, ತೊಂಡೆ ಕಾಯಿ
ಹಪ್ಪಳ ,ಸಂಡಿಗೆ
ತುಂಬು ಹಸಿರು ಹೊಲಗದ್ದೆಗಳು,ತೋಟ
ಮನೆ ನಾಯಿ
ಹಸು ಎಮ್ಮೆಗಳು
ಬಾಲ್ಯದ ಆಟಗಳು
ಮದುವೆಯ ಸಂಭ್ರಮ, ಭೂತ ಕೋಲ
ಕುಟುಂಬದ ಒಗ್ಗಟ್ಟು.....
ಒಮ್ಮೆಲೇ ಚೇತರಿಸಿದೆ ನಾನು
ಇಂದಿನ ವಾಸ್ತವಕ್ಕೆ ಬಂದು ಬಿಟ್ಟೆ
ಮನೆ ಖಾಲಿ ಖಾಲಿ
ಕೇವಲ ಒಳಗೆ ಕೋಣೆಯಲ್ಲಿ ಕಾಯಿಲೆಯಲ್ಲಿದ್ದ ಕೆಮ್ಮುವ ಮಾವ
ಹಾಗು ಅವರನ್ನು ನೋಡಲು ಇಟ್ಟ ಕೆಲಸದಾಳು
ಒಣಗಿದ ಹೊಲಗದ್ದೆಗಳು,ತೋಟ
ಕೂರುವ ನಾಯಿ
ನಾನು ತುಂಡು ಕುರ್ಚಿಯಲ್ಲಿ ಕುಳಿತೆ
ಕೆಲಸದಾಳು ತಂದು ಕೊಟ್ಟ ನೀರಿನಲ್ಲಿ
ನನ್ನ ಹರಿಯುವ ಕಣ್ಣೀರು ಸೇರುತ್ತಿತ್ತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...