Tuesday, February 5, 2013

ನನಗೆ ಮಲ್ಲಿಗೆ ಹೂವಾಗುವ ಆಸೆ

ನನಗೆ ಮಲ್ಲಿಗೆ ಹೂವಾಗುವ ಆಸೆ 
ಅವಳ ಜಡೆ ಸಿಂಗಾರವಾಗಿ ಮೆರೆಯುವೆ !

ನನಗೆ ತಂಗಾಳಿ ಆಗುವ ಆಸೆ 
ಅವಳ ಉಸಿರಲಿ ನಾ ಉಸಿರಾಗಿರುವೆ !

ನನಗೆ ನಗು ಆಗುವ ಆಸೆ
ಅವಳ ಅಧರದಲಿ ಶಾಶ್ವತವಾಗಿ ಕುಳಿತಿರುವೆ !

ನನಗೆ ಗೆಜ್ಜೆ ಆಗುವ ಆಸೆ
ಅವಳ ಕಾಲಲಿ ವಾಸಿಸಿ ನಲಿಯುವೆ !

ನನಗೆ ದೀಪ ಆಗುವ ಆಸೆ
ಅವಳ ಜೀವನದಲಿ ಸದಾ ಬೆಳಗುವೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...