Sunday, February 3, 2013

ಈ ಗಳಿಗೆ ಕಳೆದೋಗುತ್ತಿದೆ

!!ಈ ಗಳಿಗೆ ಕಳೆದೋಗುತ್ತಿದೆ 
ಶ್ಯಾಮ ಬರಲಿಲ್ಲ ಇಲ್ಲಿಯವರೆಗೆ
ಬರುವುದಿಲ್ಲ ನಿದ್ದೆ 
ಈ ಗಳಿಗೆ ಕಳೆದೋಗುತ್ತಿದೆ ...

!!ಶ್ಯಾಮ ಮರೆತ ಸಂಜೆ ನೀಡಿದ ಭಾಷೆ 
ದೀಪದೊಂದಿಗೆ ಎಚ್ಚರವಿರುವಳು ರಾಧೆ !!
ಬರುವುದಿಲ್ಲ ನಿದ್ದೆ 
ಈ ಗಳಿಗೆ ಕಳೆದೋಗುತ್ತಿದೆ ...

!!ಯಾವ ಸವತಿಯು ನಿಲ್ಲಿಸಿದಳು ದಾರಿಯನ್ನ 
ಯಾರ ಕಂಗಳಿಗೆ ನೀನು ಸೋತೆ ಮನವನ್ನ!!
ಬರುವುದಿಲ್ಲ ನಿದ್ದೆ
ಈ ಗಳಿಗೆ ಕಳೆದೋಗುತ್ತಿದೆ ...

!!ವಿರಹದಲ್ಲಿದ್ದಾಳೆ ಪ್ರೀತಿಯ ರಾಣಿ
ತನುಮನ ದಹದಲಿ ಕಂಗಳಲ್ಲಿ ಕಂಬನಿ!!
ಬರುವುದಿಲ್ಲ ನಿದ್ದೆ
ಈ ಗಳಿಗೆ ಕಳೆದೋಗುತ್ತಿದೆ ...

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್. ಡೀ . ಬರ್ಮನ್
ಚಿತ್ರ : ಅಮರ್ ಪ್ರೇಂ


ಶ್ಯಾಮ : ಇನಿಯ, ಪ್ರೇಮಿ 
raina biti jayey, sham naa aaye
nindiya naa aaye

sham ko bhula, sham kaa wada
sang diye ke jage radha

kis sautan ne roki dagariya
kis bairan se lagi najariya

birha kee mari prem diwani
tan mann pyasa akhiyo me pani

www.youtube.com/watch?v=RRk9pG5Upe4

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...