Wednesday, February 6, 2013

ಪಾಪ ಪುಣ್ಯ

ಅವನು 
ಹೂವು ಮಾರುತ್ತಿದ್ದ
ಚಿಕ್ಕ ಹುಡುಗಿಯಿಂದ 
ಹೂವು ಕೊಂಡು
"ಹಣ ಬಂದು ಕೊಡುತ್ತೇನೆ" ಎಂದು ಹೇಳಿ 
ದೇವಸ್ಥಾನದ ಒಳಗೆ 
ಹೋಗಿ ದೇವರಿಗೆ 
ಹೂ ಅರ್ಪಿಸಿ 
ದೇವಸ್ಥಾನದ ಹುಂಡಿಗೆ 
ಒಂದು ಸಾವಿರ ರೂಪಾಯಿ
ಹಾಕಿ ಹೊರಗೆ ಬಂದು 
ಹೂ ಮಾರುವ ಹುಡುಗಿಯಿಂದ 
"ಹೂವಿಗೆ ಎಷ್ಟೆಂದು"? ಕೇಳಿದ 
ಅವಳು "೧೦ ರೂಪಾಯಿ ಸಾಹೇಬರೇ "
ಅವನು " ಏನೇ ಇಷ್ಟು ಹೆಚ್ಚು,ಲೂಟಿ ನಡೆದಿದೆಯೇ " ಎಂದು ಅವಳಿಗೆ ಬೈದು 
ಕೇವಲ ೫ ರೂಪಾಯಿ ಕೊಟ್ಟು ಹೊರಟ.

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...