Friday, February 15, 2013

ಜಾಗೃತಿ

ಕಹಿ ಮದ್ದು ಆದರೇನು
ರೋಗ ಗುಣವಾದರೆ
ತಲೆ ತಗ್ಗಿದ್ದರೇನು
ಬುದ್ದಿ ತಲೆಯಲಿ ಹೊಕ್ಕಿದರೆ
ಕಾಲು ಜಾರಿ ಬಿದ್ದರೇನು
ನಡಿಕೆ ಕಲಿಸಿ ಹೋದರೆ
ಮುಳ್ಳು ಚುಚ್ಚಿದರೇನು
ಸುಂದರ ಹೂವನ್ನು ಪಡೆದರೆ
ಬಿರುಗಾಳಿ ಜೀವನದಲಿ ಬಂದರೇನು
ಬದುಕ ಮಾರ್ಗ ತಿಳಿಸಿ ಹೋದರೆ
by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...