Saturday, February 23, 2013

ಏನನ್ನು ಹುಡುಕುತ್ತಿರುತ್ತದೆ


!!ಏನನ್ನು ಹುಡುಕುತ್ತಿರುತ್ತದೆ
ಕಣ್ಣು ನನ್ನಲ್ಲಿ
ಬೂದಿಯ ರಾಶಿಯಲಿ
ಜ್ವಾಲೆಯೂ ಇಲ್ಲ ಕಿಡಿಯೂ ಇಲ್ಲ!!-೨

!!ಈಗ ಆ ಪ್ರೀತಿಯೂ ಇಲ್ಲ
ಆ ಪ್ರೀತಿಯ ನೆನಪೂ ಉಳಿದಿಲ್ಲ
ಉರಿಯಿತು ಹೀಗೆ ಹೃದಯ
ಏನೂ ಇರಲಿಲ್ಲ ಏನೂ ಉಳಿಯಲಿಲ್ಲ !!

!!ಯಾರ ಚಿತ್ರ ನೀನು
ಕಂಗಳಲ್ಲಿ ತುಂಬಿಕೊಂಡಿರುವೆಯೋ
ಆ ಪ್ರೇಮಿ ನಾನಲ್ಲ
ನಾನದರ ಮೌನ ಚಿತೆಯಾಗಿದ್ದೇನೆ !!
ಏನನ್ನು ಹುಡುಕುತ್ತಿರುತ್ತದೆ.....

!!ಜೀವನ ನಗುತ್ತಲೇ ಸಾಗುತ್ತಿದ್ದರೆ
ತುಂಬಾ ಒಳ್ಳೆಯದಿತ್ತು
ಹೋಗಲಿ, ನಗುತ ಅಲ್ಲದೆ
ಅಳುತ್ತಲೇ ಸಾಗಬಹುದು !!

!!ಬೂದಿ ಭಗ್ನ ಪ್ರೀತಿಯ
ಉಳಿಸಿಟ್ಟಿದೇನೆ-೨
ಪುನಃ ಪುನಃ ಇದನ್ನು
ಕೊರೆದರೆ ಕೆದರುತ್ತದೆ!!
ಏನನ್ನು ಹುಡುಕುತ್ತಿರುತ್ತದೆ.....

!!ಬಯಕೆ ಅಪರಾಧ
ನಿಷ್ಠೆ ಅಪರಾಧ
ಇಚ್ಛೆ ತಕ್ಸೀರು
ಇದು ಆ ಜಗತ್ತಂದರೆ
ಇಲ್ಲಿ ಪ್ರೀತಿಯಾಗಲು ಸಾಧ್ಯವಿಲ್ಲ !!

!!ಹೇಗೆ ಈ ಬಾಜಾರದ ನಿಯಮ
ನಿನಗೆ ವಿವರಿಸಲಿ
ಮಾರಾಟ ಆದವನು
ಖರೀದಿದಾರನಾಗಲು ಸಾಧ್ಯವಿಲ್ಲ !!
ಏನನ್ನು ಹುಡುಕುತ್ತಿರುತ್ತದೆ.....

ಮೂಲ :ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಖಯ್ಯಾಮ್
ಚಿತ್ರ : ಶೋಲ ಔರ್ ಶಬನಮ್

jaane kya dhoondhti rehti hai
ye aankhe mujh mein
raakh ke dher mein
shola hai na chingaari hai-2


ab na wo pyaar
na us pyaar ki yaaden baaki
aag yoon dil mein lagi
kuchh na raha
kuchh na bacha

jis ki tasveer
nigaahon mein liye baithi ho
main wo dildaar nahi
us ki hoon khamosh chita

jaane kya ....

zindagi has ke guzarti to
bahut achha tha
khair has ke na sahi
ro ke guzar jaayegi

raakh barbad muhabbat ki
bacha rakhi hai-2
baar baar is ko jo
chheda to bikhar jaayegi

jaane kya ...

aarzoo zurm wafa zurm
tamanna hai gunaah-
ye wo duniya hai jahaan
pyaar nahi ho sakta

kaise bazar ka dastoor
tumhe samjhaun
bik gaya jo
wo khareedar nahi ho sakta-2

jaane kya ....2

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...