ಗೆಳತಿ
ಕೆಲವೊಮ್ಮೆ ಯಾಕೆ
ನನಗೆ ಹೀಗೆ ಅನಿಸುತ್ತದೆ
ನನ್ನಿಂದ ಎಲ್ಲರು ದೂರ
ಹೋಗುತ್ತಿದ್ದರೆಂದು !
ನಾ ಅವರಲ್ಲಿ
ಚಾಚಿದ ಕೈಯನ್ನು
ತಿರಸ್ಕರಿಸಿ
ನನ್ನಿಂದ ದೂರ ದೂರ
ಸರಿಯುತ್ತಿದ್ದರೆಂದು !
ಕೆಲವೊಮ್ಮೆ
ಬೇಸರ ಸಹ ಆಗುತ್ತದೆ
ಆದರೆ ನಂತರ
ತನ್ನನ್ನು ತಾನೇ
ಸಾವರಿಸಿ ಕೊಳ್ಳುತ್ತೇನೆ !
ಆದರೆ
ಈ ಅಲ್ಪ ಪರಿಚಿತ
ಜನರಿಂದಲೂ ನಾನ್ಯಾಕೆ
ಇಷ್ಟೆಲ್ಲಾ ನಿರೀಕ್ಷಿಸುತ್ತೇನೆ
ಅವರ ಅವರ ಇಷ್ಟ ಅಲ್ಲವೇ !
ಹೋಗಲಿ ಬಿಡು
ಅವರವರ ತಲೆಗೆ
ಅವರವರ ಕೈ
ಅವರವರ ಕಷ್ಟ ಸುಖಗಳ ಭಾರ
ಅವರವರಿಗೆ !
ಸುಮ್ಮನೆ
ನಾನ್ಯಾಕೆ ನಿನಗೆ
ಇದೆಲ್ಲ ಹೇಳುತ್ತಿದ್ದೇನೆ
ಎಲ್ಲ ಜನರ ಸ್ವಭಾವ ಬಿನ್ನ ಬಿನ್ನ
ಇದು ನಿನಗೂ ತಿಳಿದಿದ್ದ ವಿಷಯ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment