Wednesday, February 6, 2013

ಹುಣ್ಣಿಮೆಯ ಚಂದ್ರವೇ



!!ಹುಣ್ಣಿಮೆಯ ಚಂದ್ರವೇ,
ಅಥವಾ ಸೂರ್ಯನ ಬೆಳಕೇ,
ಏನೇ ಇರಲಿ ದೇವರಾಣೆ
ನೀನು ಅತ್ಯುತ್ತಮವಾಗಿರುವೆ !!

!!ಕೇಶ ಅಂದರೆ
ಭುಜಗಳಲ್ಲಿ ಮೋಡ ಬಾಗಿವೆ,
ಕಂಗಳು ಅಂದರೆ
ಮದ್ಯದ ಗ್ಲಾಸು ತುಂಬಿವೆ,
ಮೋಜಿದೆ ಅದರಲ್ಲಿ ಪ್ರೀತಿಯ
ನೀ ಆ ಶರಾಬು ಆಗಿರುವೆ!!

!!ಮುಖ ಅಂದರೆ
ಸರೋವರದಲಿ ನಗುತ್ತಿದ್ದ ಕಮಲ,
ಅಥವಾ ಜೀವನದ ರಾಗದಲಿ
ಹಾಡಿದ ಒಂದು ಗಝಲ್,
ಸುಂದರಾಂಗಿ ನೀ ಯಾವುದೇ
ಕವಿಯ ಕಲ್ಪನೆಯಾಗಿರುವೆ !!

!!ಆಧರದಲಿ ಅರಳುತ್ತಿದೆ
ನಗುವಿನ ಮಿಂಚುು,
ಸಾಷ್ಟಾಂಗ ಬೀಳುವರು
ನಿನ್ನ ಹಾದಿಯಲಿ ಮೂಕವಿಸ್ಮಿತಗೊಂಡು,
ಜಗ ಸೌಂದರ್ಯ ಪ್ರೇಮದ
ನೀನೇ ಯೌವನವಾಗಿರುವೆ !!

ಮೂಲ : ಶಕೀಲ್ ಬದಾಯುನಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಚೌಧವಿ ಕ ಚಾಂದ್

चौदहवी का चाँद हो, या आफताब हो
जो भी हो तुम खुदा की कसम लाजवाब हो

जुल्फे हैं जैसे, कंधो पे बादल झूके हुए
आँखे हैं जैसे, मय के प्याले भरे हुए
मस्ती हैं जिस में, प्यार की तुम वो शराब है

चेहरा हैं जैसे, झील में हंसता हुआ कँवल
या जिन्दगी के साज पे छेडी हुयी ग़ज़ल
जान-ए-बहार तुम किसी शायर का ख्वाब हो

होठो पे खिलती है, तबस्सूम की बिजलियाँ
सजदे तुम्हारी राह में, करती हैं कहकशा
दुनियाँ-ए-हुस्न ओ इश्क का तुम ही शबाब हो
www.youtube.com/watch?v=5Ud2rsMT5ng

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...