Tuesday, September 23, 2014

ಅನನ್ಯ (ಇತ್ತೀಚಿಗೆ ಕೆಲವು ವಿಶಿಷ್ಟ ವೀಡಿಯೊ ನೋಡಿ ಪ್ರೇರಿತವಾಗಿ )

ಆತ
ಹೋಟೆಲಲ್ಲಿ
ಯಾರೋ
ಬಿಟ್ಟ
ಅನ್ನವನ್ನು
ಶ್ರದ್ಧೆಯಿಂದ ತಿಂದು
ಊಟದ ಹಣವನ್ನು
ದಾನದ ಪೆಟ್ಟಿಗೆಗೆ
ಹಾಕಿದ

---

ಬಲೂನು
ಮಾರುವ
ಮುದಕನಿಂದ
ಆತ
ಒಂದು
೫೦ ಪೈಸೆಯ
ಬಲೂನು
ಖರೀದಿ ಮಾಡಿ
ಮುದುಕನಿಗೆ
ಒಂದು ಸಾವಿರ ರೂಪಾಯಿ ನೀಡಿದ

----

ತನ್ನ ಹುಟ್ಟು ಹಬ್ಬ
ಆಚರಿಸಲು
ಆತ
ವೃದ್ಧಾಶ್ರಮ ಹೋಗಿ
ವೃದ್ಧರಿಗೆ
ಊಟ ಬಟ್ಟೆ ನೀಡಿ
ಅನೇಕ
ಅಮ್ಮ ಅಪ್ಪಂದಿರ
ಆಶೀರ್ವಾದ ಪಡೆದ

---

ಅಜ್ಜಿಯ
ಬಾಗಿಲಲಿ
ದಿನನಿತ್ಯ
ಬಾಳೆಹಣ್ಣು ಇಟ್ಟು
ಹೋಗುತ್ತಿದ್ದವನನ್ನು
ಅಜ್ಜಿ ಒಂದು
ದಿನ ನೋಡಿಯೇ ಬಿಟ್ಟಳು,
ಆಶೀರ್ವಾದದ ಸುರಿಮಳೆ
ಆಯಿತು ಆತನ ಮೇಲೆ

---

ಆತ ಅನಾಥ,
ಹೋಟಲಲ್ಲಿ ದುಡಿದು
ತಿಂಗಳಿಗೊಮ್ಮೆ
ಅನಾಥಾಲಯಕ್ಕೆ
ಅನಾಥ ಮಕ್ಕಳಿಗೋಸ್ಕರ
ತಿಂಡಿ ತಿನಿಸು
ಕೊಂಡು ಹೋಗುತ್ತಿದ್ದ

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಅರರೇ ಅಸಲು ಇಂತಹವರೂ ಇರುತ್ತಾರೆಯೇ ಕಲಿಯುಗದಲ್ಲಿ?

    ReplyDelete
  2. ತುಂಬಾ ಇದ್ದಾರೆ ಸರ್, ಅವರಿಂದಲೇ ಈ ಜಗತ್ತು ಉಳಿದಿದೆ ಬಹುಶಃ, ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...