ಹಗಲು ಸಂಜೆ
ನಿನ್ನ ನಾಮ ಜಪಿಸಿ
ನಿನ್ನ ಹಿಂದೆ ಮುಂದೆ
ಓಡಾಡುತ್ತಿದ್ದವನು
ಅದು ನಾನೇನಲ್ಲ
ಪತ್ರ ಬರೆದು
ಹತ್ತಿರ ಕರೆದು
ಪ್ರೀತಿಸುವೆಯೆಂದು ಹೇಳದೆ
ಮೂಕನಂತೆ ಸುಮ್ಮನೆ ನಿಂತವನು
ಅದು ನಾನೇನಲ್ಲ
ನನ್ನ ಮೌನ ಭಾಷೆ ಅರಿತು
ಪ್ರೀತಿಗೆ ನಿನ್ನ ಒಪ್ಪಿಗೆ
ಸಿಕ್ಕಿದ ನಂತರ
ಹರ್ಷದಿ ನಿನ್ನನ್ನು ಅಪ್ಪಿಕೊಂಡವನು
ಅದು ನಾನೇನಲ್ಲ
ನದಿಯ ಕಿನಾರೆ
ನಿನ್ನ ಮಡಿಲಲ್ಲಿ ಮಲಗಿ
ನಿನ್ನೊಟ್ಟಿಗೆ ಅದೆಷ್ಟೋ
ಹಗಲುಗನಸು ಕಟ್ಟಿದವನು
ಅದು ನಾನೇನಲ್ಲ
ಅವಸರದಿ ಬಂದು
ನಾವು ಈಗಲೇ
ಓಡಿ ಹೋಗಿ ಮದುವೆಯಾಗುವ
ಎಂದು ಹಠ ಹಿಡಿದರೂ ಕೇಳದವನು
ಅದು ನಾನೇನಲ್ಲ
ನಿನ್ನ ಮದುವೆಯಂದು
ಅತ್ತು ಅತ್ತು
ಊರ ಸುತ್ತು ಸುತ್ತು
ಹುಚ್ಚನಂತೆ ತಿರುಗುತ್ತಿದ್ದವನು
ಅದು ನಾನೇನಲ್ಲ
ಹೌದು
ಅದು ನಾನಲ್ಲ
ನನ್ನಲ್ಲಿದ್ದ ಒಬ್ಬ
ಗತಿಸಿದ ಪ್ರೇಮಿ
ಅದು ನಾನೇನಲ್ಲ
by ಹರೀಶ್ ಶೆಟ್ಟಿ, ಶಿರ್ವ
ನಿನ್ನ ನಾಮ ಜಪಿಸಿ
ನಿನ್ನ ಹಿಂದೆ ಮುಂದೆ
ಓಡಾಡುತ್ತಿದ್ದವನು
ಅದು ನಾನೇನಲ್ಲ
ಪತ್ರ ಬರೆದು
ಹತ್ತಿರ ಕರೆದು
ಪ್ರೀತಿಸುವೆಯೆಂದು ಹೇಳದೆ
ಮೂಕನಂತೆ ಸುಮ್ಮನೆ ನಿಂತವನು
ಅದು ನಾನೇನಲ್ಲ
ನನ್ನ ಮೌನ ಭಾಷೆ ಅರಿತು
ಪ್ರೀತಿಗೆ ನಿನ್ನ ಒಪ್ಪಿಗೆ
ಸಿಕ್ಕಿದ ನಂತರ
ಹರ್ಷದಿ ನಿನ್ನನ್ನು ಅಪ್ಪಿಕೊಂಡವನು
ಅದು ನಾನೇನಲ್ಲ
ನದಿಯ ಕಿನಾರೆ
ನಿನ್ನ ಮಡಿಲಲ್ಲಿ ಮಲಗಿ
ನಿನ್ನೊಟ್ಟಿಗೆ ಅದೆಷ್ಟೋ
ಹಗಲುಗನಸು ಕಟ್ಟಿದವನು
ಅದು ನಾನೇನಲ್ಲ
ಅವಸರದಿ ಬಂದು
ನಾವು ಈಗಲೇ
ಓಡಿ ಹೋಗಿ ಮದುವೆಯಾಗುವ
ಎಂದು ಹಠ ಹಿಡಿದರೂ ಕೇಳದವನು
ಅದು ನಾನೇನಲ್ಲ
ನಿನ್ನ ಮದುವೆಯಂದು
ಅತ್ತು ಅತ್ತು
ಊರ ಸುತ್ತು ಸುತ್ತು
ಹುಚ್ಚನಂತೆ ತಿರುಗುತ್ತಿದ್ದವನು
ಅದು ನಾನೇನಲ್ಲ
ಹೌದು
ಅದು ನಾನಲ್ಲ
ನನ್ನಲ್ಲಿದ್ದ ಒಬ್ಬ
ಗತಿಸಿದ ಪ್ರೇಮಿ
ಅದು ನಾನೇನಲ್ಲ
by ಹರೀಶ್ ಶೆಟ್ಟಿ, ಶಿರ್ವ
ನಾನೂ ಒಬ್ಬ 'ಗತಿಸಿದ ಪ್ರೇಮಿ'. ಅದಕ್ಕೇ ಈಗ ಕವಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಓಡಾಡುತ್ತಿರುವೆ!
ReplyDeleteತುಂಬಾ ತುಂಬಾ ಧನ್ಯವಾದಗಳು ಬದರಿ ಸರ್. :)
Delete