Thursday, September 4, 2014

ಇದ್ಯಾವ ಜಾಗ ಗೆಳೆಯರೇ

ಇದ್ಯಾವ ಜಾಗ ಗೆಳೆಯರೇ
ಇದ್ಯಾವ ಸ್ಥಾನ
ದೃಷ್ಟಿಹಾಯಿಸಿದಷ್ಟು
ಕೇವಲ ಬಿರುಗಾಳಿ ಧೂಳಿನ
ಇದ್ಯಾವ ಜಾಗ...

ಇದ್ಯಾವ ಹಂತದಲಿ
ಜೀವನ ನನ್ನನ್ನು ಕೊಂಡು ಬಂದಿದೆ
ಇಲ್ಲಿ ಖುಷಿಯೂ ನನ್ನ ಹಿಡಿತದಲ್ಲಿಲ್ಲ
ದುಃಖವೂ ನಿಯಂತ್ರಣದಲ್ಲಿಲ್ಲ ನನ್ನ
ಇದ್ಯಾವ ಜಾಗ...

ಜೀವಮಾನದ ಲೆಕ್ಕ
ಕೇಳುತ್ತದೆ ಜೀವನ
ಏನಂಥ ಉತ್ತರಿಸಲಿ ಹೃದಯ ನನ್ನ
ಇದು ತನ್ನಿಂದ ತಾನೇ ಲಜ್ಜಿಸಿಕೊಂಡಿದೆ
ಇದ್ಯಾವ ಜಾಗ...

ಕರೆಯುತ್ತಿದ್ದಾರೆ ನನ್ನನ್ಯಾರು
ಪರದೆಯ ಆಚೆಯಿಂದ
ನನಗೋಸ್ಕರ ಸಹ ಯಾರಾದರೂ
ಬೇಸರ ಹಂಬಲದಲಿ ಇದ್ದಾರೆ ಇಲ್ಲೇನು
ಇದ್ಯಾವ ಜಾಗ...

ಮೂಲ : ಶಹರಿಯಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಆಶಾ ಭೋಂಸ್ಲೆ
ಸಂಗೀತ : ಖಯ್ಯಾಮ್
ಚಿತ್ರ : ಉಮ್ರಾವ್ ಜಾನ್

ये क्या जगह है दोस्तो, ये कौन सा दयार है
हद-ए-निगाह तक जहाँ, गुबार ही गुबार है

ये किस मकाम पर हयात मुझको ले के आ गयी
ना बस खुशी पे है जहाँ, ना ग़म पे इख्तियार है

तमाम उम्र का हिसाब मांगती है जिन्दगी
ये मेरा दिल कहे तो क्या, के खुद से शर्मसार है

बुला रहा है कौन मुझको, चिलमनों के उस तरफ
मेरे लिए भी क्या कोई, उदास बेकरार है
http://www.youtube.com/watch?v=1_59l5BCeso

2 comments:

  1. ಅದ್ಭುತವಾದ ಸಿನಿಮಾ ಇದು. ಎಲ್ಲವೂ ಇಲ್ಲಿ ಅಪೂರ್ವ ಸಂಗಮ.
    ತಮ್ಮ ಭಾವಾನುವಾದಕ್ಕೆ ಶರಣು.
    ಪ್ರವೀಣ್ ಭಟ್ ಅವರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...