ಅದ್ಯಾಕೋ ಜೀವನ
ನಿನ್ನ ವಿನಾಃ ಉಸಿರಾಡುತ್ತಿದೆ
ತಿಳಿಯದ ಅಜ್ಞಾತ ಹಾದಿಯಲಿ
ಏಕಾಂತ ಸಾಗುತ್ತಿದೆ
ಅರಿವಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ
ಎಲ್ಲಿದ್ದೇನೆ ಎಂದು
ಬತ್ತಿದ ಕಂಗಳು ಕತ್ತಲ ಗುರಿಯತ್ತ
ದುರುಗುಟ್ಟಿ ನೋಡುತ್ತಿದೆ
ಹೇಗೋ ಈ ದೇಹ
ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ
ಬದುಕಲು ತನ್ನಂತಾನೆ
ಕೈ ಬಾಯಿಗೆ ತುತ್ತು ಇಡುತ್ತಿದೆ
ಮನಸ್ಸಿಲ್ಲ ಕನಸಿಲ್ಲ
ನಿದಿರೆಯ ಸುಳಿವಿಲ್ಲ
ಬದುಕಿನ ಆಗಸದಲಿ
ಅನಾಸಕ್ತಿಯ ಕಾರ್ಮೋಡ ಆವರಿಸುತ್ತಿದೆ
ಜನರು ಹೇಳುತ್ತಾರೆ
ನೀನೊಂದು ಮೌನ ಪ್ರತಿಮೆಯೆಂದು
ಹೇಗೆ ತಾನೇ ಹೇಳಲಿ ಜೀವನ ಅದೆಂದೋ ಮುಗಿದಿದೆ
ಕೇವಲ ಉಸಿರು ಚಲಿಸುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ
ನಿನ್ನ ವಿನಾಃ ಉಸಿರಾಡುತ್ತಿದೆ
ತಿಳಿಯದ ಅಜ್ಞಾತ ಹಾದಿಯಲಿ
ಏಕಾಂತ ಸಾಗುತ್ತಿದೆ
ಅರಿವಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ
ಎಲ್ಲಿದ್ದೇನೆ ಎಂದು
ಬತ್ತಿದ ಕಂಗಳು ಕತ್ತಲ ಗುರಿಯತ್ತ
ದುರುಗುಟ್ಟಿ ನೋಡುತ್ತಿದೆ
ಹೇಗೋ ಈ ದೇಹ
ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ
ಬದುಕಲು ತನ್ನಂತಾನೆ
ಕೈ ಬಾಯಿಗೆ ತುತ್ತು ಇಡುತ್ತಿದೆ
ಮನಸ್ಸಿಲ್ಲ ಕನಸಿಲ್ಲ
ನಿದಿರೆಯ ಸುಳಿವಿಲ್ಲ
ಬದುಕಿನ ಆಗಸದಲಿ
ಅನಾಸಕ್ತಿಯ ಕಾರ್ಮೋಡ ಆವರಿಸುತ್ತಿದೆ
ಜನರು ಹೇಳುತ್ತಾರೆ
ನೀನೊಂದು ಮೌನ ಪ್ರತಿಮೆಯೆಂದು
ಹೇಗೆ ತಾನೇ ಹೇಳಲಿ ಜೀವನ ಅದೆಂದೋ ಮುಗಿದಿದೆ
ಕೇವಲ ಉಸಿರು ಚಲಿಸುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ
ಇಲ್ಲಿ ಗಾಢವಾಗಿ ನನಗೆ ಗಾಲಿಬ್ ಕಾಣಿಸಿದರು. ಎಂತಹ ವಿರಹೋತ್ತಮ ರಚನೆ.
ReplyDeleteತುಂಬಾ ಧನ್ಯವಾದಗಳು ಬದರಿ ಸರ್.
ReplyDelete