Tuesday, September 9, 2014

ಆ ಸಂಜೆ ಸ್ವಲ್ಪ ವಿಚಿತ್ರವಾಗಿತ್ತು

ಆ ಸಂಜೆ ಸ್ವಲ್ಪ ವಿಚಿತ್ರವಾಗಿತ್ತು
ಈ ಸಂಜೆಯೂ ವಿಚಿತ್ರವಾಗಿದೆ
ಅದು ನಿನ್ನೆಯೂ ನಿಕಟ ನಿಕಟವಾಗಿತ್ತು
ಅದು ಇಂದೂ ಸನಿಹವಾಗಿದೆ

ತಗ್ಗಿದ ದೃಷ್ಟಿಯಲಿ
ಅದೆಲ್ಲೋ ನನ್ನ ವಿಚಾರವಿತ್ತು
ಕುಗ್ಗಿದ ನಗುವಿನಲ್ಲೊಂದು
ಮೋಹಕ ಬಣ್ಣವಿತ್ತು
ನಾನು ಯೋಚಿಸುತ್ತಿದೆ
ನನ್ನೆಸರು ಅವಳು ಗುನುಗುನಿಸುತ್ತಿದ್ದಾಳೆಯೆಂದು
ಅದೇಕೋ ನನಗೆ ಅನಿಸಿತು
ಅವಳು ನಗುತ್ತಿದ್ದಾಳೆಯೆಂದು
ಆ ಸಂಜೆ ಸ್ವಲ್ಪ ವಿಚಿತ್ರವಾಗಿತ್ತು...

ನನ್ನ ಯೋಚನೆ
ಈಗ ಅವಳ ತಗ್ಗಿದ ದೃಷ್ಟಿಯಲಿ
ಅರಳಿದ ನಗುವೂ ಇದೆ
ಅಡಗಿದ ಬಯಕೆಯಲಿ
ನನಗೆ ತಿಳಿದಿದೆ
ನನ್ನೆಸರು ಅವಳು ಗುನುಗುನಿಸುತ್ತಿದ್ದಾಳೆಯೆಂದು
ಇದೇ ಯೋಚನೆ ನನಗಿದೆ
ಅವಳು ಒಟ್ಟಿಗೆ ಬರುತ್ತಿದ್ದಾಳೆಯೆಂದು
ಆ ಸಂಜೆ ಸ್ವಲ್ಪ ವಿಚಿತ್ರವಾಗಿತ್ತು...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ -ಹೇಮಂತ್ ಕುಮಾರ್
ಚಿತ್ರ : ಖಾಮೋಷಿ

वो शाम कुछ अजीब थी, ये शाम भी अजीब है
वो कल भी पास पास थी, वो आज भी करीब है

झुकी हुयी निगाहों में, कही मेरा ख़याल था
दबी दबी हंसी में, एक हसीं सा गुलाल था
मैं सोचता था, मेरा नाम गुनगुना रही हैं वो
न जाने क्यों लगा मुझे के मुस्कुरा रही हैं वो

मेरा ख़याल है, अभी झुकी हुयी निगाहों में
खिली हुयी हँसी भी है, दबी हुयी सी चाह में
मैं जानता हूँ, मेरा नाम गुनगुना रही हैं वो
यही ख़याल हैं मुझे के साथ आ रही हैं वो
http://www.youtube.com/watch?v=lvblBQbmd9k

1 comment:

  1. ಗುಲ್ಜಾರರ ಕೈಯಲ್ಲಿ ಅಕ್ಷರಗಳು ನಲಿಯುತ್ತವೆ.
    ಹೇಮಂತ್ ಕುಮಾರ್ ಅವರ ಸುಳಿತ ಸಂಯೋಜನೆಗೆ ಕಿಶೋರ್ ದಾರ ಗಾತ್ರಾಲಂಕಾರ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...