Wednesday, September 24, 2014

ವನದ ಪ್ರಾಣಿ

ವನದ ಪ್ರಾಣಿ ಅದು
ಪಂಜರದಲಿ ಹೇಗೆ ತಾನೇ ವಾಸಿಸುವುದು
ಉಸಿರು ಕಟ್ಟುವುದು
ಕೋಪ ಏರುವುದು
ರಕ್ತ ಕುದಿಯುವುದು
ಮನುಜ ನಿನ್ನ ದುರದೃಷ್ಟ
ಇದು ನಿನ್ನ ಮೂರ್ಖತನವೇ
ಅಥವಾ ಬಾಲಿಶ ಧೈರ್ಯವೇ
ಅದು ಪ್ರಾಣಿ
ಅದರ ಈ ಕಾರ್ಯ ಸಹಜ
ನಿನ್ನ ನಡತೆ ಸರಿಯೇ
ಯಾಕೆ ಹೋದೆ ನೀನಲ್ಲಿಗೆ
ಕಾವಲು ಇಲ್ಲದ ಬಲೆಗೆ
ಏನಾಯಿತು ಇದರ ಫಲ
ಕಳೆದುಕೊಂಡೆ ನಿನ್ನ ಪ್ರಾಣ
ಸಿಕ್ಕಿತು ಪ್ರಾಣಿಗೆ ಭೋಜನ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಯಪ್ಪಾ ಎಂತಹ ಭಯಾನಕ ದೃಶ್ಯವದು!
    ಬಹುಶಃ ಮೃಗಾಲಯದ ಪ್ರಾಣಿಗಳಿಗೆ ಮನುಜನ ಕಂಡರೆ ಭಯಂಕರ ಕೋಪವಿದ್ದೀತು ಅಲ್ಲವೇ?

    ReplyDelete
  2. ಹೌದು ಬದರಿ ಸರ್, ಬೇಸರವಾಗುತ್ತದೆ, ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...