Tuesday, September 30, 2014

ಜನ್ಮಭೂಮಿ

ಹೇಳಲಿಕ್ಕೆ ಎಲ್ಲವೂ ಇದೆ ನನ್ನತ್ತಿರ
ಆದರೆ ಪಡೆಯಲಾಗಲಿಲ್ಲ ಅದನ್ನು
ಹಿಂದೆ ಬಿಟ್ಟು ಬಂದಿದ್ದನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಮರದ ನೆರಳು
ಆ ಹಣ್ಣಿನ ಪರಿಮಳ
ಆ ಮಾವಿನ ಹಣ್ಣಿನ ರುಚಿ
ಆ ಎಲ್ಲ ಸುಂದರ ಪರಿಸರ
ಹೇಳಲಿಕ್ಕೆ ಅದೆಷ್ಟೋ ಹಣ್ಣುಗಳು ಸಿಗುತ್ತದೆ ಇಲ್ಲಿ
ಆದರೆ ಪಡೆಯಲಾಗಲಿಲ್ಲ ಆ ರುಚಿಯನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಗಲ್ಲಿಯ ಆಟ
ಆ ರಾತ್ರಿಗೆ ತಡವಾಗಿ ಕುಳಿತು
ಹರಟೆ ಹೊಡೆಯುವ ಚಟ
ಆ ನಕ್ಕು ಆ ನಲಿವು
ಹೇಳಲಿಕ್ಕೆ ಅದೆಷ್ಟೋ ವೈವಾಟ ನಡೆಯುತ್ತದೆ ಇಲ್ಲಿ
ಆದರೆ ಪಡೆಯಲಾಗಲಿಲ್ಲ ಆ ಖುಷಿಯನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಆ ಉತ್ಸವ ಆ ವೈಭವ
ಆ ಹಬ್ಬ ಆಚರಣೆ
ಆ ತಡ ತನಕ ಹಬ್ಬಕ್ಕಾಗಿ
ನಡೆಯುವ ತಯಾರಿ
ಹೇಳಲಿಕ್ಕೆ ಹಬ್ಬ ಇಲ್ಲಿಯೂ ಆಚರಿಸುತ್ತಾರೆ
ಆದರೆ ಪಡೆಯಲಾಗಲಿಲ್ಲ ಅಂತಹ ಆನಂದವನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

ಅದೇಕೋ
ಹುಟ್ಟುವುದಿಲ್ಲ ಇಲ್ಲಿ ಅಂತಹ ಅತ್ಯಾಸಕ್ತಿ
ಕಾಡುತ್ತದೆ ಏನೋ ಒಂದು ಕೊರತೆ
ನಗು ಮೊಗದಲಿ ಕಣ್ಣೀರು ಅವಿತುಕೊಂಡಿರುತ್ತದೆ
ಪದೇ ಪದೇ ಮನಸ್ಸಲ್ಲಿ
ಜೀವನದ ಅತಿ ದೊಡ್ಡ ತಪ್ಪು ಮಾಡಿದೆಯೆಂಬ
ವಿಚಾರ ಬರುತ್ತದೆ
ಸುಖ ಹಣದಿಂದ ಹುಟ್ಟುವುದಿಲ್ಲ
ದುಡ್ಡು ನೀಡಿ ಹರ್ಷ ಪಡೆಯಲಾಗುವುದಿಲ್ಲ
ಮಣ್ಣಿನ ಋಣ ಉಳಿಯುತ್ತದೆ ಬಾಕಿ
ಈ ಹೊನ್ನುಕ್ಕಿಂತ ಅದೆಷ್ಟೋ ಉತ್ತಮ ನನ್ನ ದೇಶದ ಮಣ್ಣು
ಸದಾ ಎಳೆಯುತ್ತಿರುತ್ತದೆ ನನ್ನ ನಾಡು ನನ್ನನ್ನು
ಓ ನನ್ನ ದೇಶವೇ
ಯಾಕೆ ಬಿಟ್ಟು ಬಂದೆ ನಿನ್ನನ್ನು
ನನ್ನ ಜನ್ಮಭೂಮಿಯನ್ನು

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಮರಳಿ ಮಮತೆಯ ಮಡಿಲಿಗೆ ಹಿಂದಿರುಗುವ ಕಾಲವೂ ಇದ್ದೀತು ಸನಿಹ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...