ರಾತ್ರಿ ತಂಬಿಲದ ಔತಣಕೂಟ ಗೌಜಿಯಿಂದ ನಡೆಯಿತು ಹಾಗು ಮನೆಯಲ್ಲಿ ಎಲ್ಲರು ಸೋತು ಹೋದ ಕಾರಣ ಊಟದ ನಂತರ ಎಲ್ಲರು ಬೇಗ ಮಲಗಿದರು.
ಮಾರನೇ ದಿನ ಬೆಳ್ಳಿಗೆ ರಮೇಶ ಮತ್ತು ದಿರೇಶ ಸುಮ್ಮಿಯೊಟ್ಟಿಗೆ ಅಮ್ಮನನ್ನು ಕರೆದುಕೊಂಡು ಊರಿನ ಸಮೀಪ ಇದ್ದ ಪ್ರಸಿದ್ಧ ಆಯುರ್ವೇದಿಕ್ ಆಸ್ಪತ್ರೆಗೆ ಹೋದರು, ಅಲ್ಲಿ ಡಾಕ್ಟರಿಗೆ ತೋರಿಸಿದ ನಂತರ ಡಾಕ್ಟರ್ "ನೋಡಿ ಇವರನ್ನು ಸ್ವಲ್ಪ ಸಮಯ ಇಲ್ಲಿ ಅಡ್ಮಿಟ್ ಮಾಡಿ, ಇಲ್ಲಿ ಇದ್ದರೆ ನಮ್ಮ ಚಿಕೆತ್ಸೆಯ ನಂತರ ಇವರಲ್ಲಿ ಬದಲಾವಣೆ ಕಂಡು ಬರಬಹುದು, ಯಾಕೆಂದರೆ ನಾವು ಇಂತಹ ರೋಗಿಗೆ ವ್ಯಾಯಾಮ ಎಲ್ಲ ಮಾಡಿಸಿ ಮತ್ತೆ ಆ ಪ್ರಕಾರ ಕೆಲವು ಆಯುರ್ವೇದಿಕ್ ಮದ್ದು ಕೊಟ್ಟು ಅವರ ಚಿಕೆತ್ಸೆ ಮಾಡುತ್ತೇವೆ, ಎಷ್ಟೋ ಜನರಿಗೆ ಇದರಿಂದ ತುಂಬಾ ಲಾಭ ಆಗಿದೆ, ಅವರಲ್ಲಿ ಸುಧಾರಣೆ ಕಂಡು ಬಂದಿದೆ, ನೀವು ಸಹ ಒಂದೆರಡು ತಿಂಗಳು ಇಟ್ಟು ನೋಡಿ" ಎಂದು ಹೇಳಿದರು.
ರಮೇಶ "ಡಾಕ್ಟ್ರೇ, ನಿಮಗೇನನಿಸುತ್ತದೆ ಅಮ್ಮನಿಗೆ ಸರಿ ನಡೆಯಲು ಆಗಬಹುದ"?
ಡಾಕ್ಟರ್ "ನೋಡಿ, ಇದರಲ್ಲಿ ನಮಗೆ ಅವರ ಸಹಯೋಗ ಎಷ್ಟು ಸಿಗುತ್ತದೆ ಅದರ ಮೇಲೆ ಇದು ಅವಲಂಭಿಸುತ್ತಿರುತ್ತದೆ, ಕೆಲವು ರೋಗಿಗಳು ಸ್ವತಃ ತುಂಬಾ ಸಹಯೋಗ ಮಾಡುತ್ತಾರೆ, ಪ್ರಯತ್ನ ಮಾಡುತ್ತಾರೆ ಆದ್ದರಿಂದ ಅವರಲ್ಲಿ ತುಂಬಾ ಸುಧಾರಣೆ ಕಂಡು ಬರುತ್ತದೆ ಆದರೆ ಕೆಲವು ರೋಗಿಗಳು ಸ್ವಲ್ಪ ಸಹ ಪ್ರಯತ್ನ ಮಾಡಲು ಸಿದ್ಧ ಇರುವುದಿಲ್ಲ, ಇವರು ಸಹಯೋಗಿಸಿದರೆ ಖಂಡಿತ ಸ್ವಲ್ಪಾದರೂ ಸುಧಾರಣೆ ಕಂಡು ಬರಬಹುದು, ನೋಡಿ ನೀವು ವಿಚಾರ ಮಾಡಿ ತಿಳಿಸಿ, ಒಪ್ಪಿಗೆ ಆದರೆ ಕೌಂಟರಿಗೆ ಹೋಗಿ ಈ ಚೀಟಿ ತೋರಿಸಿ ಹಣ ತುಂಬಿಸಿ ಅವರನ್ನು ಅಡ್ಮಿಟ್ ಮಾಡಿ" ಎಂದು ಹೇಳಿ ಚೀಟಿ ಬರೆದು ಕೊಟ್ಟರು.
ಆದರೆ ರಮೇಶನಿಗೆ ಚಿಂತೆಯಂದರೆ ಅವನು ಕೇವಲ ಇನ್ನು ಮೂರು ದಿವಸ ಇಲ್ಲಿ ಊರಲ್ಲಿದ್ದ ನಂತರ ಅವರಿಗೆ ಮುಂಬೈ ಹೋಗಿ ವಿದೇಶ ಹೋಗಲಿಕ್ಕಿತ್ತು, ಆದರೆ ದಿರೇಶ ಅವನಿಗೆ "ನೀನು ಚಿಂತೆ ಮಾಡಬೇಡ ನಾನು ವಾರಕ್ಕೆ ಎರಡು ಸಲ ಬಂದು ಅಮ್ಮನನ್ನು ನೋಡುತ್ತೇನೆ ಹಾಗು ಡಿಸ್ಚಾರ್ಜ್ ಆದ ನಂತರ ಸಹ ಮನೆಗೆ ಹೋಗಿ ನೋಡುತ್ತಾ ಇರುತ್ತೇನೆ, ನೀನು ಕೇವಲ ಹಣದ ವ್ಯವಸ್ಥೆ ಮಾಡು" ಎಂದು ಹೇಳಿದ, ಸುಮ್ಮಿಗೆ ಸಹ ಕೇಳಲಾಯಿತು, ಅವಳು ಅಮ್ಮನೊಟ್ಟಿಗೆ ಆಸ್ಪತ್ರೆಯಲ್ಲಿ ಇರಲು ಸಾಧ್ಯನಾ ಎಂದು, ಸುಮ್ಮಿ ಅವರೊಟ್ಟಿಗೆ ಅಲ್ಲಿಯೇ ಇದ್ದು ಕೆಲಸ ಮಾಡಲು ಸಿದ್ಧವಾದಳು, ರಮೇಶ ದಿರೇಶನೊಟ್ಟಿಗೆ ತುಂಬಾ ವಿಚಾರ ವಿಮರ್ಶೆ ಮಾಡಿ ನಂತರ ಅಮ್ಮನನ್ನು ಸ್ವಲ್ಪ ದಿವಸ ಅಲ್ಲಿ ಅಡ್ಮಿಟ್ ಮಾಡುವ ನಿರ್ಧಾರ ತೆಗೆದುಕೊಂಡ.
ರಮೇಶ ಕೌಂಟರಿಗೆ ಹೋಗಿ ಡಾಕ್ಟರ್ ಕೊಟ್ಟ ಚೀಟಿ ತೋರಿಸಿದ, ಕೌಂಟರಲ್ಲಿ ಕುಳಿತ ಹುಡುಗಿ "ಯಾರು ನಿಮ್ಮ ಅಮ್ಮನ ಪೇಷಂಟ್? ನಿಮಗೆ ಹೋಮ್ ನರ್ಸ್ ಸಹ ಬೇಕೇ"? ಎಂದು ಕೇಳಿದಳು.
ರಮೇಶ " ಹೌದು ನನ್ನಮ್ಮ, ನಾವು ಒಂದು ಹುಡುಗಿಗೆ ಮೊದಲೇ ಇಟ್ಟಿದ್ದೇವೆ, ಅದಕ್ಕೆ ಸದ್ಯ ಹೋಮ್ ನರ್ಸ್ ಬೇಡ " ಎಂದ.
ಅದಕ್ಕೆ ಅವಳು " ಓ ಕೆ, ಹಾಗಾದರೆ ನೀವು ೧೫೦೦೦ ಡೆಪಾಸಿಟ್ ಕೊಡಿ, ಬೆಡ್ ಚಾರ್ಜ್ ದಿನಕ್ಕೆ ಸಿಂಗಲ್ ಸಪರೇಟ್ ರೂಮ್ ಆದರೆ ೨೫೦, ಜನರಲ್ ಆದರೆ ೧೫೦ ಮತ್ತೆ ಮದ್ದಿನ ಹಾಗು ಡಾಕ್ಟರ್ ಫೀಸ್ ಬೇರೆ ಮತ್ತೆ ಒಂದುವೇಳೆ ಹೋಂ ನರ್ಸ್ ಬೇಕಾದರೆ ಅವಳ ಚಾರ್ಜ್ ಸಹ ಬೇರೆ ಆಗುತ್ತದೆ, ಡಿಸ್ಚಾರ್ಜ್ ಮಾಡುವಾಗ ನಿಮಗೆ ಲೆಕ್ಕ ಕೊಡುತ್ತೇವೆ"
ರಮೇಶ "ಜನರಲ್ ವಾರ್ಡಲ್ಲಿ ಎಷ್ಟು ಪೇಷಂಟ್ ಇರುತ್ತಾರೆ"?
ಅವಳು " ಆರು".
"ಒಹ್!!!ಹಾಗಾದರೆ ಸಪರೇಟ್ ರೂಮ್ ಇರಲಿ" ಎಂದು ರಮೇಶ ೧೫೦೦೦ ಕೊಟ್ಟು ರಸೀದಿ ತೆಗೊಂಡ.
ಅವಳು ಒಂದು ವಾರ್ಡ್ ಬಾಯನ್ನು ಕರೆದು "ಇವರೊಟ್ಟಿಗೆ ಹೋಗಿ ಇವರ ಅಮ್ಮನನ್ನು ೧೦೮ ನಂಬರ್ ವಾರ್ಡಿಗೆ ಸೇರಿಸು".
ಅಮ್ಮ ಆಸ್ಪತ್ರೆಯಲ್ಲಿ ಸೇರಿಸುವುದು ಬೇಡನೆ ಅಂದರು, ತುಂಬಾ ಹಠ ಮಾಡಿದರು ಅದಕ್ಕೆ ದಿರೇಶ ಅವರಿಗೆ ತುಂಬಾ ಬೈದ, ಆದರೆ ಅದರ ನಂತರ ಸಹ ಅವರ ಹಠಯೇನು ಕಡಿಮೆಯಾಗಲಿಲ್ಲ ಮತ್ತೆ ಹೇಗೋ ರಮೇಶ ತುಂಬಾ ಧೈರ್ಯದಿಂದ ಅವರಿಗೆ ಸಾಂತ್ವನ ನೀಡಿ ರಾಜಿ ಮಾಡಿದ.
(ಮುಂದುವರಿಯುತ್ತದೆ)
by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್
No comments:
Post a Comment