Thursday, March 26, 2020

ಓ ನನ್ನ ಭೂಮಿ

ಖಡ್ಗಕ್ಕೆ  ಈ ಶಿರವನ್ನು ಮಾಡಿ ಅರ್ಪಣ
ಜ್ವಾಲೆಯಲ್ಲಿ ದಹಿಸಿ ಈ ದೇಹವನ್ನ
ಅದರ ನಂತರವೇ ನಮ್ಮ ತಲೆಯ ಮೇಲೆ
ಅಲಂಕಾರವಾಯಿತು ಈ ಕೇಸರಿ ಬಣ್ಣ

ಓ ನನ್ನ ಭೂಮಿ, ವಿಷಾದವಿಲ್ಲ
ನಿನಗಾಗಿ ನೂರು ನೋವು  ಸಹಿಸಿದಕ್ಕೆ
ಎಂದಿಗೂ ನಿನ್ನ ಪ್ರತಿಷ್ಠೆ ಸುರಕ್ಷಿತವಾಗಿರಲಿ
ನನ್ನ ಪ್ರಾಣ ಉಳಿಯಲಿ ಉಳಿಯದಿರಲಿ

ಓ ನನ್ನ ಭೂಮಿ, ಪ್ರಿಯತಮೆ ನನ್ನ
ನನ್ನ ಧಮನಿ-ಧಮನಿಯಲಿ ನಿನ್ನ ಪ್ರೀತಿ ತುಂಬಿರಲಿ
"ಎಂದಿಗೂ ಮಸುಕಾಗದಿರಲಿ ನಿನ್ನ ಬಣ್ಣ"
ದೇಹದಿಂದ ಹೊರಬಂದು ಈ ನೆತ್ತರು ಹೇಳಲಿ

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ನಿನ್ನ ನದಿಯಲ್ಲಿ ತೇಲಲಿ
ನಿನ್ನ ಹೊಲದಲ್ಲಿ ಬೆಳೆಯಲಿ
ಕೇವಲ ಇಷ್ಟೇ ಹೃದಯದ ಬಯಕೆ

ಸಾಸಿವೆ ತುಂಬಿದ ನನ್ನ ಗದ್ದೆಗಳು
ಅಲ್ಲಿ ಸಂತಸದಿಂದ ಕುಣಿಯಲಾಗಲಿಲ್ಲ
ಎಂದಿಗೂ ನನ್ನ ಆ ಊರು ಸಮೃದ್ಧವಾಗಿರಲಿ 
ಅಲ್ಲಿ ಹಿಂತಿರುಗಿ ನನಗೆ ಹೋಗಲಾಗಲಿಲ್ಲ

ಓ ಮಾತೃಭೂಮಿಯೇ, ಓ ಮಾತೃಭೂಮಿಯೇ
ನಿನ್ನ ನನ್ನ ಪ್ರೀತಿ ಅದ್ವಿತೀಯವಾಗಿತ್ತು 
ಅರ್ಪಿಸಿದೆ ನನ್ನನ್ನು ನಿನ್ನ ಸೇವೆಯಲಿ 
ಅದೃಷ್ಟವಂತನಾಗಿದೆ ನಾನೆಷ್ಟು

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ಕೇಸರಿ

ಓ ನಲ್ಲೆ ನನ್ನ, ನೀ ನಗುತಿರು
ಕ್ಷಣಕ್ಕೂ ನಿನ್ನ ಕಣ್ಣಲ್ಲಿ ಕಣ್ಣೀರು ಬರದಿರಲಿ
ನಾನಾರಾಧಿಸಿದ ಆ ಮುಖದ 
ತೇಜಸ್ಸು ಎಂದಿಗೂ ಕಡಿಮೆಯಾಗದಿರಲಿ 

ಓ ಅಮ್ಮ ನನ್ನ, ನಿನಗೆ ವ್ಯಥೆ ಏಕೆ?
ಯಾಕೆ ಕಣ್ಣಿಂದ ಸಾಗರ ಹರಿಯುತ್ತಿದೆ
ನೀನು ಹೇಳುತ್ತಿದೆ ನಿನ್ನ ಚಂದಿರ ನಾನು
ಮತ್ತೆ ಚಂದಿರ ಎಂದಿಗೂ ಇರುತ್ತದೆ

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಮೂಲ : ಮನೋಜ್ ಮುಂತಶೀರ್ 
ಹಾಡಿದವರು :ಬಿ ಫ್ರಾಕ್ 
ಸಂಗೀತ :ಅರ್ಕೊ  ಪ್ರಾವೋ  ಮುಖರ್ಜಿ 
ಚಿತ್ರ : ಕೇಸರಿ  

Talvaron pe sar vaar diye
Angaaron mein jism jalaya hai
Tab jaake ke kahin humne sar pe
Yeh kesari rang sajaaya hai

Aye meri zameen afsoss nahi
Jo tere liye sau dard sahe
Mehfooz rahe teri aan sada
Chaahe jaan meri yeh rahe na rahe

Aye meri zameen mehboob meri
Meri nass nass mein tera ishq bahe
Pheeka na pade kabhi rang tera
Jismon se nikal ke khoon kahe

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

Wo o…

Sarson se bhare khalihaan mere
Jahaan jhoom ke bhagra paa na saka
Aabad rahe woh gaaon mera
Jahaan laut ke wapas jaa na saka

Ho watna ve, mere watna ve
Tera mera pyar nirala tha
Kurbaan hua teri asmat pe
Main kitna naseebon wala tha

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

O Heer meri tu hansti rahe
Teri aankh ghadi bhar nam na ho
Main marta tha jis mukhde pe
Kabhi uska ujaala kam na ho

O maai meri kya fiqr tujhe
Kyun aankh se dariya behta hai
Tu kehti thi tera chaand hoon main
Aur chaand hamesha rehta hai

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...