Wednesday, March 18, 2020

ಈಗ ನಿನ್ನ ವಿನಃ ಬದುಕುವೆ ನಾನು

ಈಗ ನಿನ್ನ ವಿನಃ ಬದುಕುವೆ ನಾನು
ವಿಷ ಜೀವನದ ಕುಡಿಯುವೆ ನಾನು
ಏನಾಯಿತು ಒಂದು ಹೃದಯ ಮುರಿದೋದರೆ
ಈಗ ನಿನ್ನ ವಿನಃ....

ನಿನ್ನ ಒಲವು ಎಂತಹ ತಿರುವು ನೀಡಿದೆ
ನಿಷ್ಠೆ ನಾನಿಟ್ಟೆ, ನೀನು ದ್ರೋಹ ಬಗೆದೆ
ನನ್ನದೇ ತಪ್ಪಿತ್ತು, ನಾನೀದೇನು ಆಶಿಸಿದೆ
ವಿಶ್ವಾಸದ್ರೋಹಿಯಿಂದ, ವಿಶ್ವಾಸ ಬಯಸಿದೆ
ನಿನಗೇನು ಗೊತ್ತು ಚಡಪಡಿಕೆ, ನೋವು ಯಾತನೆಯ
ಹೋಗು ನಿರ್ದಯಿ ಚೆಲುವೆ
ನೋಡಿದೆ ನಿನ್ನ ನಾಟಕ ಪ್ರೀತಿಯ
ಈಗ  ಅರಿತೆ ನಿಷ್ಕರುಣಿ ನಿನ್ನನ್ನು
ಈಗ ನಿನ್ನ ವಿನಃ....

ಪ್ರಿಯೆ  ಮುರಿಯುತಿದ್ದೆ ವಚನ ಪ್ರೀತಿಯ
ಒಂದು ವೇಳೆ ಗೊತ್ತಾಗುತ್ತಿದ್ದರೆ, ನಿನ್ನ ಆಶಯ
ಯಾರನ್ನು ಪ್ರೀತಿಸಿದೆ, ಎಲ್ಲಿ ಹೃದಯ ನೀಡಿದೆ ನಾನು
ಮರುಳು ನಾನು, ತಿಳಿಯಲಿಲ್ಲ ಏನೂ
ನನ್ನ ಕಣ್ಣೀರ ಮುತ್ತು,
ಕಣ್ಣಿನಿಂದ ಹರಿಯುವ ನೀರು
ನನ್ನ ತುಂಡು ಹೃದಯ,
ನಿನ್ನ ಗುರುತು ಪ್ರೀತಿಯ
ಹೇಗೆ ಮರೆಯಲಿ ನಿನ್ನ ಅನ್ಯಾಯವನ್ನು
ಈಗ ನಿನ್ನ ವಿನಃ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಸಮೀರ್
ಸಂಗೀತ : ನದೀಮ್ ಶ್ರವಣ್
ಹಾಡಿದವರು : ಕುಮಾರ್ ಸಾನು
ಚಿತ್ರ : ಆಶಿಕಿ



अब तेरे बिन जी लेंगे हम

ज़हर ज़िन्दगी का पी लेंगे हम
अब तेरे बिन जी लेंगे हम
ज़हर ज़िन्दगी का पी लेंगे हम
क्या हुआ जो एक दिल टूट गया
क्या हुआ जो एक दिल टूट गया

अब तेरे बिन जी लेंगे हम
ज़हर ज़िन्दगी का पी लेंगे हम

तेरी आशिक़ी भी ये क्या रंग लायी
वफ़ा मैंने की तूने की बेवफ़ाई
मेरी भूल थी मैं ये क्या चाहता था
किसी बेवफ़ा से वफ़ा चाहता था
तू जाने क्या बेकरारी बेदर्द बेमुरवत
जा संगदिल हसीना
देखी तेरी मुहब्बत
अब मैंने जाना तुझको बेरहम

अब तेरे बिन जी लेंगे हम
ज़हर ज़िन्दगी का पी लेंगे हम

सनम तोड़ देता मुहब्बत के वादे
अगर जान जाता मैं तेरे इरादे
किसे मैंने चाहा कहाँ दिल लगाया
मैं नादान था कुछ समझ ही न पाया
मेरे आंसुओं के मोती
आँखों में बहता पानी
मेरे टूटे दिल के टुकड़े
तेरे प्यार की निशानी
कैसे मैं भूलूंगा तेरे सितम

अब तेरे बिन जी लेंगे हम
ज़हर ज़िन्दगी का पी लेंगे हम
ज़हर ज़िन्दगी का पी लेंगे हम
क्या हुआ जो एक दिल टूट गया
क्या हुआ जो एक दिल टूट गया

अब तेरे बिन जी लेंगे हम
ज़हर ज़िन्दगी का पी लेंगे हम

जी लेंगे हम.. जी लेंगे हम..
जी लेंगे हम.. जी लेंगे हम.

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...