ಮಹಾಭಾರತದ ಯುದ್ಧ ನಿಶ್ಚಿತವಾಗಿತ್ತು, ಇದನ್ನು ಕೇಳಿ ಕುಂತಿ ಚಿಂತಿತಳಾದಳು. ಅವಳಿಗೆ ಕರ್ಣ ಪಾಂಡವರ ಜೊತೆ ಯುದ್ಧ ಮಾಡುವುದು ಇಷ್ಟವಾಗಿರಲಿಲ್ಲ. ಅವಳು ಕರ್ಣನನ್ನು ಭೇಟಿಯಾಗಲು ಅವನಲ್ಲಿ ಹೋದಳು. ಕುಂತಿಯನ್ನು ನೋಡಿ ಕರ್ಣ ಗೌರವದಿಂದ ಎದ್ದು ಅವಳನ್ನು ಸ್ವಾಗತಿಸಿ ಹೇಳಿದ "ನೀವು ಪ್ರಥಮವಾಗಿ ಇಲ್ಲಿ ಬರುತ್ತಿದ್ದಿರಿ, ಈ ರಾಧೇಯನ ಪ್ರಣಾಮ ಸ್ವೀಕರಿಸಿ." ಕರ್ಣನ ಮಾತು ಕೇಳಿ ಕುಂತಿಯ ಮನಸ್ಸಿಗೆ ನೋವಾಯಿತು ಹಾಗು ಅವಳು "ಪುತ್ರ, ನೀನು "ರಾಧೇಯ" ಅಲ್ಲ ನೀನು "ಕೌಂತೇಯ", ನಾನು ನಿನ್ನ ತಾಯಿ ಆದರೆ ಲೋಕಾಚಾರದ ಭಯದಿಂದ ನಾನು ನಿನ್ನ ತ್ಯಾಗ ಮಾಡಿದೆ. ನೀನು ಪಾಂಡವರ ಹಿರಿಯಣ್ಣ, ಅದಕ್ಕೆ ಈ ಯುದ್ಧದಲ್ಲಿ ನೀನು ಕೌರವರ ಜೊತೆ ಅಲ್ಲ ತನ್ನ ಸಹೋದರರ ಜೊತೆ ಇರಬೇಕು. ಅಣ್ಣ ತಮ್ಮಂದಿರ ಮಧ್ಯೆ ಪರಸ್ಪರ ಯುದ್ಧವಾಗುವುದು ನಾನು ಬಯಸುವುದಿಲ್ಲ. ನೀನು ಪಾಂಡವರ ಪಕ್ಷದಲ್ಲಿರಬೇಕೆಂದು ನಾನು ಬಯಸುವೆ. ಹಿರಿಯನಾದ ಕಾರಣ ಪಾಂಡವರ ರಾಜ್ಯದ ಮೇಲೆ ನಿನ್ನ ಅಧಿಕಾರವಿದೆ. ನೀನು ಯುದ್ಧದಲ್ಲಿ ವಿಜಯಿಯಾಗಿ ರಾಜನಾಗಬೇಕೆಂದು ನನ್ನ ಇಚ್ಛೆ."
ಕುಂತಿಯ ಮಾತು ಕೇಳಿ ಕರ್ಣ ಉತ್ತರಿಸಿದ "ಮಾತೆ, ನೀನು ನನ್ನನ್ನು ತ್ಯಜಿಸಿದೆ, ಕ್ಷತ್ರಿಯರ ಉತ್ತಮ ಕುಲದಲ್ಲಿ ನಾನು ಹುಟ್ಟಿ ಸಹ ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ನಾನು. ಕ್ಷತ್ರಿಯನಾಗಿಯೂ ಸೂತಪುತ್ರ ಎಂದು ಕರೆಸಿಕೊಂಡಿದಕ್ಕೆ ನನ್ನನ್ನು ದ್ರೋಣಚಾರ್ಯ ಸಹ ತನ್ನ ಶಿಷ್ಯನಾಗಿ ಸ್ವೀಕರಿಸಲಿಲ್ಲ. ಯುವರಾಜ ದುರ್ಯೋಧನ ನನ್ನ ನಿಜವಾದ ಗೆಳೆಯ, ನಾನು ಅವನ ಉಪಕಾರ ಮರೆತು ಕೃತಘ್ನ ಆಗಲಾರೆ. ಆದರೆ ನನ್ನ ಬಳಿ ಬಂದದ್ದು ವ್ಯರ್ಥವಾಗದು ಯಾಕೆಂದರೆ ಇಂದಿನ ತನಕ ಕರ್ಣನಲ್ಲಿಗೆ ಬಂದು ಎಂದೂ ಖಾಲಿ ಕೈ ಯಾರೂ ಹೋಗಲಿಲ್ಲ. ನಾನು ನಿಮಗೆ ವಚನ ನೀಡುತ್ತೇನೆ ನಾನು ಅರ್ಜುನನ ಹೊರತು ನಿಮ್ಮ ಯಾವುದೇ ಪುತ್ರರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಲಾರೆ. ನನ್ನ ಮತ್ತು ಅರ್ಜುನನ ಯುದ್ಧ ಅನಿವಾರ್ಯವಾಗಿದೆ ಹಾಗು ಆ ಯುದ್ಧದಲ್ಲಿ ನಮ್ಮಿಬ್ಬರಲ್ಲಿ ಒಬ್ಬನ ಮೃತ್ಯು ನಿಶ್ಚಿತವಾಗಿದೆ. ನೀವು ಐದು ಪುತ್ರರ ತಾಯಿಯಾಗಿ ಉಳಿಯುವಿರಿ ಎಂಬ ಪ್ರತಿಜ್ಞೆಯನ್ನು ನಾನು ಮಾಡುತ್ತೇನೆ."
ಕರ್ಣನ ಮಾತು ಕೇಳಿ ಕುಂತಿ ಅವನಿಗೆ ಆಶಿರ್ವಾದ ಕೊಟ್ಟು ದುಃಖಿತ ಮನಸ್ಸಿಂದ ಹಿಂತಿರುಗಿದಳು.
(ಮಹಾಭಾರತದಿಂದ)
ವ್ಯಾಖ್ಯಾನ : ಹರೀಶ್ ಶೀಟಿ, ಶಿರ್ವ
ಕರ್ಣ ಮಹಾಭಾರತದಲ್ಲಿ ಶೌರ್ಯಕ್ಕೂ ಸ್ನೇಹಕ್ಕೂ ಹೆಸರಾದ ಪಾತ್ರ. ಈ ಲಘು ಬರಹ ಇಷ್ಟವಾಯಿತು.
ReplyDeleteಧನ್ಯವಾದಗಳು ಬದರಿ ಸರ್.
ReplyDeleteಏನು ಹೇಳೈ ಕರ್ಣ ಚಿತ್ತ ಗ್ಲಾನಿ ಯಾವುದು ಮನಕೆ ಕುಂತಿ ಅನ್ನುವಂತಹ ಹಳೆಯ ಕವಿತೆ ಅಥವಾ ಕವಿತೆಯ ಬಗ್ಗೆ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು cooltopservices@gmail.com ಈ ವಿಳಾಸಕ್ಕೆ ಕಳುಹಿಸಬಹುದೇ?
ReplyDeleteI will send you the link.
ReplyDelete