Saturday, February 6, 2021

ಬಳೆಗಾರ


Photo: Google


ಬಳೆಗಾರ!

ತೋರಿಸು ನನಗೆ ನವೀನ ನವೀನ ಬಳೆಗಳನ್ನು, 

ತೊಡಿಸು ನನಗೆ ಈ ಸುಂದರ ಸುಂದರ ಬಳೆಗಳನ್ನು, 

ಮದುವೆ ಆಗಲಿದೆ ಬೇಗನೆ ನನ್ನ ಇನ್ನು,

-

ಕನಸು ಕಟ್ಟುವೆ ನಾನು ಈ ರಂಗು ರಂಗಿನ ಬಳೆಗಳಂತೆ,

 ಮುರಿಯದಿರಲಿ ಇದು ಮಾಮೂಲಿ ಗಾಜಿನಂತೆ, 

ಹೊಸ ಬಾಳು ಶುರುವಾಗಲಿದೆ ಇನ್ನು,

ತೊಡಿಸು ನನಗೆ ಗಟ್ಟಿಮುಟ್ಟಾದ ಬಳೆಗಳನ್ನು,

-

ಆಡುತ್ತಾ ಓಡಾಡುತ್ತಿದ್ದ ಈ ಊರು ಅಪರಿಚಿತ ಆಗಲಿದೆ ಇನ್ನು, 

ಹೊಸ ಊರಲ್ಲಿ ದೊಡ್ಡ ಮನೆಯಲ್ಲಿ ಇರುವೆ ನಾನಿನ್ನು,

ಬಳೆಗಾರ ನಂತರ ಬಾ ನನ್ನ ಹೊಸ ಊರಿಗೆ ನೀನು, 

ಬಂದು ಕೊಡುತ್ತಿರು ನನಗೆ ನನ್ನ ತವರಿನ ಸುದ್ಧಿಯನ್ನು,

-

ಆದರೆ ಬಳೆಗಾರ!! 

ಹೇಗೆ ಮರೆಯಲಿ ನನ್ನ ಹುಟ್ಟೂರನ್ನು, 

ನನ್ನನ್ನು ಕೊಂಡಾಡಿ ಬೆಳೆಸಿದ ಈ ಮಣ್ಣನ್ನು, 

ಹೇಗೆ ಮರೆಯಲಿ ಉಸಿರಲ್ಲಿ ನೆಲೆಸಿದ ಇಲ್ಲಿಯ ಮಲ್ಲಿಗೆಯ ಕಂಪನ್ನು,

ಮರೆಯಲಾರೆ ನಾನು ನನಗೆ ವೇದನೆ ನೀಡಿದ ಇಲ್ಲಿಯ ಕಲ್ಲು ಮುಳ್ಳುಗಳನ್ನೂ,

-

ಬಳೆಗಾರ!! 

ಪರ ಊರಲ್ಲಿ ನೋವಾಗಿ ಅತ್ತರೆ ಸಿಗದು ಅಮ್ಮನ ಸೆರಗು ನನಗೆ, 

ಸೋತು ಹೋದಾಗ ಸಿಗದು ಮಲಗಲು ಅಮ್ಮನ ಮಡಿಲು ನನಗೆ, 

ಕೋಪ ಬಂದಾಗ ನನ್ನ ಕೋಪ ತಣಿಸಲು ಸಿಗದು ಅಪ್ಪನ ವಾತ್ಸಲ್ಯಪೂರ್ಣ ಬಾಹುಗಳ ಆಲಿಂಗನ ನನಗೆ, 

ಅಲ್ಲಿ ಹೇಗೆ ಸಂತೈಸಲಿ ನಾನು ನನ್ನ ಹೃದಯವನ್ನು,

-

ಬಳೆಗಾರ!! 

ಮದುವೆ ಆಗಲೇ ಬೇಕೇನು? 

ಗಂಡನ ಮನೆಗೆ ಹೋಗಲೇಬೇಕೇನು? 

ಅವರ್ಯಾಕೆ ಇಲ್ಲಿ ನನ್ನ ಮನೆಗೆ ಬಂದು ಇರಬಾರದು? 

ಯಾಕೆ ಹೆಣ್ಣು ಮಕ್ಕಳೇ ಈ ನೋವು ಶಿಕ್ಷೆ ಸಹಿಸಬೇಕು?

-

ಬಳೆಗಾರ! 

ನಿನ್ನ ಗಾಜಿನ ಬಳೆ ಮುರಿಯದಿರಲಿ, 

ಈ ಬಳೆಯಲಿ ಸದಾ ನನ್ನ ತವರೂರ ನೆನಪಿರಲಿ, 

ಬಳೆಗಾರ ತೊಡಿಸು ನನಗೆ ಬಳೆಗಳನ್ನು, 

ಮದುವೆ ಆಗಲಿದೆ ಬೇಗನೆ ನನ್ನ ಇನ್ನು!!!


by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...