Tuesday, October 29, 2013

ಯಾರೋ ಹಿಂತಿರುಗಿಸಲಿ

ಸೊಗಸಾದ ಸುಂದರ ದಿನಗಳೆಲ್ಲ
ಅಗಲಿದ ಜತೆ ಆಸರೆವೆಲ್ಲ
ಅಯ್ಯೋ, ಎಲ್ಲೋಯಿತು
ಆಯ್ಯೋ, ಎಲ್ಲೋಯಿತು
ಕಣ್ಣ ಕಾಂತಿಯೆಲ್ಲ
ನನ್ನ ಏಕಾಂತ ರಾತ್ರಿಯ ತಾರೆಗಳೆಲ್ಲ
ಆಯ್ಯೋ, ಎಲ್ಲೋಯಿತು

ಯಾರೋ ಹಿಂತಿರುಗಿಸಲಿ
ನನ್ನ ಕಳೆದೋದ ದಿನಗಳನ್ನು
ಕಳೆದೋದ ದಿನಗಳನ್ನು
ಸುಂದರ ಕ್ಷಣಗಳನ್ನು
ಯಾರೋ ಹಿಂತಿರುಗಿಸಲಿ.....

ನನ್ನ ಕನಸಿನ ಕೋಟೆ
ನನ್ನ ಸ್ವಪ್ನದ ನಗರ
ನಾನ್ಯಾರಿಗಾಗಿ ಕುಡಿದೆ
ಜೀವನದ ಈ ವಿಷವ
ನಾನಿಂದು ಹುಡುಕಲೆಲ್ಲಿ
ಮರೆಯಾದರು ಅವರೆಲ್ಲಿ
ಕಳೆದೋದ ದಿನಗಳನ್ನು.....

ನಾನೊಬ್ಬನೇ ಇರಲಿಲ್ಲ
ಕೆಲವರಿದ್ದರು ಜೊತೆಯಲಿ ನನ್ನ
ಒಂದು ಬಿರುಗಾಳಿಯಂತೆ ಬಂದು
ಕಸಿದೋಯಿತು ಇದ್ದದನ್ನ
ಹೀಗೆಯೂ ದಿನವಿತ್ತು
ನನ್ನ ದಿನವಾಗಿತ್ತು ನನ್ನ
ಕಳೆದೋದ ದಿನಗಳನ್ನು.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು/ಸಂಗೀತ : ಕಿಶೋರ್ ಕುಮಾರ್
ಚಿತ್ರ  : ದೂರ್ ಗಗನ್ ಕಿ ಚಾವು ಮೇ

अलबेले दिन प्यारे
मेरे बिछड़े साथ सहारे
हाय! कहाँ गये
हाय! कहाँ गये
आँखों के उजियारे
मेरी सूनी रात के तारे
हाय! कहाँ गये

कोई लौटा दे मेरे, बीते हुए दिन
बीते हुए दिन वो, प्यारे पल छिन
कोई लौटा दे मेरे...

मेरे ख्वाबों के महल, मेरे सपनों के नगर
पी लिया जिनके लिये मैंने जीवन का ज़हर
आज मैं ढूँढूं कहाँ, खो गये जाने किधर \- २
बीते हुए दिन...

मैं अकेला तो ना था, थे मेरे साथी कई
एक आँधी सी उठी, जो भी था लेके गई
ऐसे भी दिन थे कभी, मेरी दुनिया थी मेरी
बीते हुए दिन...

http://www.youtube.com/watch?v=gOW3P6-RoEw 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...