Wednesday, October 23, 2013

ಬಾ ಇನಿಯ

ಬಾ ಇನಿಯ
ನಿನ್ನನ್ನು ಪ್ರೀತಿಸುವೆ ನಾ
ಅಪ್ಪಿಕೊಂಡು ಸಂತೈಸುವೆ ನಾ
ಯಾಕೆ ನೀನು
ಇಷ್ಟೊಂದು ಬೇಸರದಲಿ
ಶುಷ್ಕತೆ ಅಧರದಲಿ   
ದಾಹ ಕಂಗಳಲಿ 
ಯಾಕೆ ನೀನು
ಯಾಕೆ ನೀನು
ಬಾ ಇನಿಯ....

ಸುಟ್ಟು ಹೋಗಿದೆ ದೇಹ ಎಷ್ಟೋ
ಇನಿಯ ಇದೇ ಜ್ವಾಲೆಯಲಿ
ಸೋತು ಹೋದ ಈ ಕೈಯನ್ನು
ನೀಡು ನನ್ನ ಕೈಯಲಿ
ಓ...
ನನ್ನ ಸುಖವನ್ನೆಲ್ಲಾ ನೀಡುವೆ ನಿನಗೆ
ನಿನ್ನ ಕಷ್ಟವನೆಲ್ಲಾ ನೀಡು ನನಗೆ
ನಾನೂ ಬದುಕುವೆ
ನೀನೂ ಬದುಕು
ಓ ಓ...
ಬಾ ಇನಿಯ.......

ಇರಲಿ ಬಿಡು
ನಿನ್ನ ಊರಿನ ಈ ಪಥ
ತುಂಬಾ ಕಷ್ಟದಾಯಕ
ಕಣ್ರೆಪ್ಪೆಯಿಂದ ಆಯ್ದುಕೊಳ್ಳುವೆ
ಮುಳ್ಳುಗಳನ್ನು ನಿನ್ನ ಹಾದಿಯ
ಓ ...
ಕೇಶ ಹರಡಿ
ಸೆರಗು ಹಾಸಿ
ಕುಳಿತಿರುವೆ ನಾನು ನಿನಗಾಗಿ
ಓ ಓ ...
ಬಾ ಇನಿಯ.......

ನನ್ನ ಈ ಕಣ್ಣಿಂದ
ಹರಿದೋಗುತ್ತಿದೆ ಈ ಧಾರೆಯ
ಅರಳಿತಲ್ಲೇ ಒಂದು ನಗೆ
ಇನಿಯ ನಿನ್ನ ಪ್ರೀತಿಯ
ಓ ....
ನಾನೇ ಸೋಲಲಿಲ್ಲವೆಂದ ಮೇಲೆ
ನೀನೆ ಸ್ವಲ್ಪ ಯೋಚಿಸು
ಅದೇಕೆ
ಅದೇಕೆ
ಓ ಓ ...
ಬಾ ಇನಿಯ.......

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಬಹಾರೋ ಕೆ ಸಪನೇ

Aaja piya tohe pyaar doon, gori baiyyaan tope vaar doon
Kis liye tu, itna udaas
Sukhe sukhe honth, ankhiyon me pyaas
Kis liye kis liye ho,
Aaja piyaa ..

Jal chuke, hain badan kayi
Piya isii aag mein
Thake hue in haathon ko
Dede mere haath mein
Ho, (sukh mera lele, main dukh tere leloon) -2
Main bhi jiyoon tu bhi jiye ho,
Aaja piya tohe pyaar doon, gori baiyyaan tope vaar doon

Hone de re jo ye julmi hai, path tere gaaon ke
Palkon se chun daloongi main,
Kaante teri raahon ke
Ho, (laat bikhraye chunariya bichhaye) -2
Baithi hoon main tere liye ho,
Aaja piya..

Apni to jab ankhiyon se, bah chali dhaar si
Khil padi bas ek hansi, piya tere pyaar ki
Ho, (main jo nahin haari, saajan zara socho) -2
Kis liye kis liye ho,
Aaja piya..
www.youtube.com/watch?v=E7qp-XaWwR0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...