Friday, October 18, 2013

ನನಗಿಷ್ಟು ನೀನು ಪ್ರೀತಿಸದಿರು

ತಲತ್ :
!!ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ
ಹೇಗೆ ಯಾರ ಆಸರೆಯಾಗುವೆ
ಅಂದರೆ ನಾ ಸ್ವತಃ ನಿರಾಶ್ರಿತ ಅಲೆಮಾರಿ!!

ಲತಾ :
!!ಇದಕ್ಕಾಗಿ ನಾ ನಿನ್ನ ಪ್ರೀತಿಸುವೆ
ಅಂದರೆ ನೀನೊಂದು ಮೇಘ ಸೋಮಾರಿ
ಜನುಮ ಜನುಮದಿಂದ ಇರುವೆ ನಿನ್ನ ಜೊತೆ
ಅಂದರೆ ನನ್ನೆಸರು ಜಲದ ಧಾರೆ!!

ತಲತ್ :
ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ
ಲತಾ :
ಜನುಮ ಜನುಮದಿಂದ ಇರುವೆ ನಿನ್ನ ಜೊತೆ
ಅಂದರೆ ನನ್ನೆಸರು ಜಲದ ಧಾರೆ

ತಲತ್ :
!!ನನಗೆ ಒಂದು ಸ್ಥಾನದಲಿ ಆರಾಮವಿಲ್ಲ
ನಿಲ್ಲುವುದು ನನ್ನ ಕೆಲಸವಲ್ಲ
ಯಾವಾಗ ತನಕ ನನ್ನ ಜೊತೆ ನೀಡುವೆ ನೀನು
ಅಂದರೆ ನಾನು ದೇಶ ವಿದೇಶದ ಸಂಚಾರಿ!!
ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ

ಲತಾ :
!!ಒಹ್ ನೀಲ ಆಗಸದ ಪ್ರೇಮಿಯೇ
ನನ್ನ ಪ್ರೀತಿಯ ನಿನಗೆ ಅರಿವಿಲ್ಲ
ಅಲ್ಲಿಯವರೆಗೂ ನಾ ನಡೆಯುವೆ ನಿನ್ನ ಜೊತೆ
ಸೋತೆಯೆಂದು ನೀನು ಹೇಳುವ ತನಕ ಒಂದು ಸಾರಿ!!
ಇದಕ್ಕಾಗಿ ನಾ ನಿನ್ನ ಪ್ರೀತಿಸುವೆ
ಅಂದರೆ ನೀನೊಂದು ಮೇಘ ಸೋಮಾರಿ

ತಲತ್ :
ಬಯಕೆವಾಗಿತ್ತು ಈ ನಿಸರ್ಗದಲಿ ಸುರಿಯುವೆಯೆಂದು
ಒಂದು ಮೋಹಕ ಮಡಿಲಲ್ಲಿ ಸುರಿಯುವೆಯೆಂದು
ಆದರೆ ಈ ಸುಟ್ಟ ಮಣ್ಣಲ್ಲಿ ನನ್ನನ್ನು
ಭಾಗ್ಯ ತಂದು ಅಪ್ಪಳಿಸಿದೆ ಬಾರಿ ಬಾರಿ!!
ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ತಲತ್ ಮೆಹಮೂದ್, ಲತಾ ಮಂಗೇಶ್ಕರ್
ಸಂಗೀತ :ಸಲಿಲ್ ಚೌಧರಿ
ಚಿತ್ರ : ಛಾಯಾ
ta:
itanaa na mujhase tu pyaar badhaa
ke mai ek baadal aavaaraa
kaise kisi kaa sahaaraa banun
ke mai khud beghar bechaaraa
itanaa na

ta:
mujhe ek jagah aaraam nahi
ruk jaanaa meraa kaam nahi
meraa saath kahaa tak dogi tum
mai desh videsh kaa bajaaraa

la :
is liye tujhase pyaar karu
ke tu ek baadal avaaraa
janam janam se hu saath tere
ke naam meraa jal ki dhaaraa

la:
o nil gagan ke divaane
tu pyaar na meraa pahachaane
mai tab tak saath chalun tere
jab tak na kahe tu mai haaraa

ta:
aramaan thaa gulashan par barasun
ek shokh ke daaman par barasun
afasos jali mitti pe mujhe
taqadir ne meri de maaraa
itanaa na
http://www.youtube.com/watch?v=m4zAWM6ks6o

2 comments:

  1. ಈ ಚಿತ್ರಕ್ಕೆ ಜಯವಂತ ಪತ್ರ ಛಾಯಾಗ್ರಹಣವಿತ್ತು. ಮನ ಸೆಳೆದ ಭಾವಾನುವಾದ ಸಾರ್. 

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...