Thursday, October 10, 2013

ಎದೆಯಲ್ಲಿ ಉರಿಯುತ್ತಿದೆ ಬಯಕೆ

!!ಎದೆಯಲ್ಲಿ ಉರಿಯುತ್ತಿದೆ ಬಯಕೆ
ಕಣ್ಣಲ್ಲಿ ಬೇಸರ ಪಸರಿದೆ
ಇದಿಂದು ನಿನ್ನ ಜಗತ್ತಿಂದ ನನಗೆ
ಭಾಗ್ಯ ಎಲ್ಲಿಗೆ ತಂದಿದೆ!!
ಎದೆಯಲ್ಲಿ ಉರಿಯುತ್ತಿದೆ ಬಯಕೆ

!!ಕಣ್ಣಲ್ಲಿ ಕೆಲವು ಕಣ್ಣೀರ ಹನಿ ಉಳಿದಿದೆ
ಅದು ನನ್ನ ದುಃಖದ ಜತೆಗಾರನಾಗಿದೆ-೨
ಈಗ ಹೃದಯವೂ ಇಲ್ಲ, ಹೃದಯದ ಬಯಕೆಯೂ ಇಲ್ಲ
ಕೇವಲ ನಾನಿದ್ದೇನೆ, ನನ್ನ ಏಕಾಂತವಿದೆ!!
ಎದೆಯಲ್ಲಿ ಉರಿಯುತ್ತಿದೆ ಬಯಕೆ

!!ಯಾವುದೇ ಮನಸ್ತಾಪವಿಲ್ಲ ನಿನ್ನಿಂದ
ಯಾವುದಿಲ್ಲ ಫಿರ್ಯಾದು ಪ್ರಪಂಚದಿಂದ
ನಾಲ್ಕಾರು ಹೆಜ್ಜೆಯಲಿ ತಾಣವಿರುವಾಗ
ಭಾಗ್ಯ ನನ್ನಿಂದ ಮುನಿಸಿದೆ!!
ಎದೆಯಲ್ಲಿ ಉರಿಯುತ್ತಿದೆ ಬಯಕೆ

!!ಮನಸ್ಸಿಗೆ ಹೀಗೆ ಅಗ್ನಿ ಹಚ್ಚಿದೆ ಅಂದರೆ
ಜೀವಿಸಲು ಬಿಡುವುದಿಲ್ಲ ಸಾಯಲು ಸಹ ಬಿಡುವುದಿಲ್ಲ
ಮೌನವಾಗಿದ್ದರೆ ಅಂತರಂಗ ಉರಿಯುತ್ತದೆ
ಹೇಳಿದರೆ ನಿನ್ನನ್ನು ನಿಂದಿಸಿದಂತ್ತಾಗುತ್ತದೆ!!
ಎದೆಯಲ್ಲಿ ಉರಿಯುತ್ತಿದೆ ಬಯಕೆ

ಮೂಲ : ಪ್ರೇಮ್ ಧವನ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ತಲತ್ ಮೆಹಮೂದ್, ಲತಾ ಮಂಗೇಶ್ಕರ್
ಸಂಗೀತ : ಅನಿಲ್ ಬಿಸ್ವಾಸ್
ಚಿತ್ರ : ತರನಾ


Seene mein sulagte hain armaan
Aankho mein udaasi chhaayi hai
Ye aaj teri duniya se hamein
Taqdeer kaha le aayi hai
Seene mein sulagte hain armaan

Kuchh aankh mein aansoo baaki hain
Jo mere gham ke saathi hain - 2
Ab dil hain na dil ke armaan hain - 2
Bas main hu meri tanhaai hai
Seene mein sulagte hain armaan

Na tujhse gila koyi hamko
Na koyi shikaayat duniya se
Do chaar qadam jab manzil thi - 2
Qismat ne thhokar khaayi hai
Seene mein sulagte hain armaan

Kuchh aisi aag lagi man mein
Jeene bhi na de marne bhi na de ...
Chup hu to kaleja jalta hai - 2
Bolu to teri ruswaayi hai

Seene mein sulagte hain armaan
www.youtube.com/watch?v=GMlTeyN3zo4

2 comments:

  1. ಒಳ್ಳೆಯ ಭಾವಾನುವಾದ ಸಾರ್.
    ಈ ಚಿತ್ರಕ್ಕೆ ಅರವಿಂದ್ ಲಾಡ್ ಛಾಯಾಗ್ರಹಣ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...