Wednesday, October 30, 2013

ಭಾಗ್ಯ , ಸರದಿ, ಶ್ರಮ ಕೌಶಲ್ಯ

ಭಾಗ್ಯ 
____
ಅವನು 
ಬೆಳೆಸಿದ 
ಮರದ ಕಟ್ಟಿಗೆಯಿಂದಲೇ 
ಅವನ 
ಶವ ಸಂಸ್ಕಾರ 
__________

ಸರದಿ 
_____
ಮನೆಗೆ ಬಂದ
ನೆಂಟನನ್ನು
ನೋಡಿ
ಮನೆಯಲ್ಲಿ ಓಡಾಡುತ್ತಿದ್ದ
ಕೋಳಿಗಳಲ್ಲಿ ದ್ವಂದ
ಇಂದು ಯಾರ ಸರದಿಯೆಂದು
_________________

ಶ್ರಮ ಕೌಶಲ್ಯ
________
ಅವನ
ಮನೆಯಲ್ಲಿ
ಸಮೃದ್ಧವಾಗಿ ಬೆಳೆದ ಬಸಳೆ ಸೊಪ್ಪು
ಅವನ
ಶ್ರಮ ಕೌಶಲ್ಯದ
ವ್ಯಾಖ್ಯಾನ ಮಾಡುತಿತ್ತು

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...