ಫೇಸ್ ಬುಕ್,
ನಿನ್ನ ಉಪಕಾರ ನನಗೆ,
ರದ್ದಿಗೆ ಸೇರಲಿಕ್ಕಿದ್ದ ನನ್ನೆಲ್ಲಾ
ಕತೆ, ಕವಿತೆಗಳಿಗೆ ನನ್ನ ಮಿತ್ರರಿಂದ
ಒಂದೆರಡು ಲಾಯ್ಕು ಗಳಿಸಿಕೊಟ್ಟು
ನನ್ನ ಭಾವನೆಗಳ ಮಾನ ಕಾಪಾಡಿದ್ದಕ್ಕೆ
by ಹರೀಶ್ ಶೆಟ್ಟಿ,ಶಿರ್ವ
ತೇಲುತ್ತಿತ್ತು
ಬಾಳ ಗಗನದಲಿ
ಕಷ್ಟದ ಮೋಡಗಳು,
ತಾಳ್ಮೆ ಧೈರ್ಯದ
ವರ್ಷ ಸುರಿದು
ಧರೆಯ ಎದೆ ಸೀಳಿ
ಸುಖದ ಮೊಗ್ಗೊಂದು ಚಿಗುರಿಸಿತು
by ಹರೀಶ್ ಶೆಟ್ಟಿ,ಶಿರ್ವ
ನೆಲದಲ್ಲಿ
ಚಾಪೆ ಹಾಸಿ
ಮಲಗಿದ ಬಡ ಕನ್ಯೆಯ
ಕನಸಲಿ
ರಾಜಕುಮಾರನೊಬ್ಬ ಬಂದ
by ಹರೀಶ್ ಶೆಟ್ಟಿ,ಶಿರ್ವ
ಮೆತ್ತನೆ ಹಾಸಿಗೆಯಲಿ
ಮಲಗಿದ ಕನ್ಯೆ
ಹೊರಲಾಡುತ್ತಿದ್ದಳು
ನಿದ್ದೆ ಇಲ್ಲದೆ
by ಹರೀಶ್ ಶೆಟ್ಟಿ,ಶಿರ್ವ
ಆತ
ಅವಳನ್ನು
ಚಿನ್ನ ಚಿನ್ನ ಎಂದು
ಕರೆದು ಮುದ್ದಾಡುತ್ತಿದ್ದ
ಇಂದು ಅವಳ ಬೆಲೆ ಏರಿ
ಅವನಿಂದ ದೂರ
by ಹರೀಶ್ ಶೆಟ್ಟಿ,ಶಿರ್ವ
ನಿನ್ನ ಉಪಕಾರ ನನಗೆ,
ರದ್ದಿಗೆ ಸೇರಲಿಕ್ಕಿದ್ದ ನನ್ನೆಲ್ಲಾ
ಕತೆ, ಕವಿತೆಗಳಿಗೆ ನನ್ನ ಮಿತ್ರರಿಂದ
ಒಂದೆರಡು ಲಾಯ್ಕು ಗಳಿಸಿಕೊಟ್ಟು
ನನ್ನ ಭಾವನೆಗಳ ಮಾನ ಕಾಪಾಡಿದ್ದಕ್ಕೆ
by ಹರೀಶ್ ಶೆಟ್ಟಿ,ಶಿರ್ವ
ತೇಲುತ್ತಿತ್ತು
ಬಾಳ ಗಗನದಲಿ
ಕಷ್ಟದ ಮೋಡಗಳು,
ತಾಳ್ಮೆ ಧೈರ್ಯದ
ವರ್ಷ ಸುರಿದು
ಧರೆಯ ಎದೆ ಸೀಳಿ
ಸುಖದ ಮೊಗ್ಗೊಂದು ಚಿಗುರಿಸಿತು
by ಹರೀಶ್ ಶೆಟ್ಟಿ,ಶಿರ್ವ
ನೆಲದಲ್ಲಿ
ಚಾಪೆ ಹಾಸಿ
ಮಲಗಿದ ಬಡ ಕನ್ಯೆಯ
ಕನಸಲಿ
ರಾಜಕುಮಾರನೊಬ್ಬ ಬಂದ
by ಹರೀಶ್ ಶೆಟ್ಟಿ,ಶಿರ್ವ
ಮೆತ್ತನೆ ಹಾಸಿಗೆಯಲಿ
ಮಲಗಿದ ಕನ್ಯೆ
ಹೊರಲಾಡುತ್ತಿದ್ದಳು
ನಿದ್ದೆ ಇಲ್ಲದೆ
by ಹರೀಶ್ ಶೆಟ್ಟಿ,ಶಿರ್ವ
ಆತ
ಅವಳನ್ನು
ಚಿನ್ನ ಚಿನ್ನ ಎಂದು
ಕರೆದು ಮುದ್ದಾಡುತ್ತಿದ್ದ
ಇಂದು ಅವಳ ಬೆಲೆ ಏರಿ
ಅವನಿಂದ ದೂರ
by ಹರೀಶ್ ಶೆಟ್ಟಿ,ಶಿರ್ವ
ಇಷ್ಟ ಆದವು ಬಾಸ್
ReplyDelete