Monday, September 30, 2013

ಎಲ್ಲೋ ಒಂದು ಮುದ್ದು ನಾಜೂಕು ಬಾಲೆ

!!ಎಲ್ಲೋ ಒಂದು ಮುದ್ದು ನಾಜೂಕು ಬಾಲೆ
ಅತಿ ಸುಂದರಿ
ಆದರೆ ವರ್ಣ ಶ್ಯಾಮಲೆ!!
ಅತಿ ಸುಂದರಿ...

!!ನನ್ನನ್ನು ತನ್ನ ಕನಸಿನ
ಬಾಹುಗಳಲ್ಲಿ ಕಂಡು
ಕೆಲವೊಮ್ಮೆ ನಿದ್ರೆಯಲಿ
ಅವಳು ಮಂದಹಾಸ ಬೀರಿರಬೇಕು
ಅದೇ ನಿದ್ರೆಯಲಿ ಹೊರಳಾಡಿ ಹೊರಳಾಡಿ
ಶಿರದಿಂದ ತಲೆದಿಂಬನ್ನು ಬೀಳಿಸಿರಬೇಕು!!
ಎಲ್ಲೋ ಒಂದು ಮುದ್ದು....

!!ಅದೇ ಕನಸು
ಮುಂಜಾವದ ದಡದಲ್ಲಿ ಬಂದು
ಅವಳ ಮನಸ್ಸಲ್ಲಿ
ಆಸೆಯನ್ನು ಹುಟ್ಟಿಸಿರಬೇಕು
ಹಲವು ಸಂಗೀತ ಎದೆಯ ಮೌನದಲಿ
ನನ್ನ ನೆನಪಾಗಿ ನುಡಿದಿರಬೇಕು
ಅವಳು ನಿಸ್ಸಂದೇಹ
ಮೆಲ್ಲ ಮೆಲ್ಲ ಧ್ವನಿಯಲಿ
ನನ್ನ ಧ್ಯಾನದಲ್ಲೇನೋ ಗುನುಗುನಿಸುತ್ತಿರಬೇಕು!!
ಎಲ್ಲೋ ಒಂದು ಮುದ್ದು....

!!ಪತ್ರ ಬರೆಯಲೆಂದು
ಮನಸ್ಸಾಗಿರಬೇಕು
ಆದರೆ ಬೆರಳು ಕಂಪಿಸುತ್ತಿರಬೇಕು
ಲೇಖನಿ ಕೈಯಿಂದ
ಜಾರಿ ಹೋಗಿರಬೇಕು
ಅತಿ ಉತ್ಸಾಹ ಲೇಖನಿ
ಪುನಃ ಎತ್ತಿರಬೇಕು
ನನ್ನ ಹೆಸರು ತನ್ನ ಪುಸ್ತಕದಲಿ ಬರೆದು
ಅವಳು ಲಜ್ಜೆಯಿಂದ ಬೆರಳನ್ನು ಕಚ್ಚಿಕೊಂಡಿರಬೇಕು!!
ಎಲ್ಲೋ ಒಂದು ಮುದ್ದು....

!!ಮನದಾಳದಿಂದ
ಭಾವ ಉಕ್ಕಿ ಬಂದು  
ದೇಹ ಮೆಲ್ಲ ಮೆಲ್ಲ ಜ್ವಲಿಸಿರಬೇಕು
ಎಲ್ಲೆಲ್ಲೋ ತನ್ನ ಹೆಜ್ಜೆ ಇಟ್ಟಿರಬೇಕು
ನೆಲದಲ್ಲಿ ಸೆರಗು ತೇಲಿ ಬಂದಿರಬೇಕು
ಕೆಲವೊಮ್ಮೆ ಹಗಲನ್ನು
ರಾತ್ರಿಯೆಂದು ಕರೆದಿರಬೇಕು
ಕೆಲವೊಮ್ಮೆ ರಾತ್ರಿಯನ್ನು
ಹಗಲೆಂದು ಹೇಳಿರಬೇಕು !!
ಎಲ್ಲೋ ಒಂದು ಮುದ್ದು....

ಮೂಲ : ಜಾನಿಸಾರ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಖಯ್ಯಾಮ್
ಚಿತ್ರ : ಶಂಕರ್ ಹುಸ್ಸೈನ್

मुझे अपने ख्वाबों की बाहों में पाकर
कभी नींद में मुस्कुराती तो होगी
उसी नींद में कसमसा-कसमसाकर
सरहाने से तकिये गिराती तो होगी

वही ख्वाब दिन के मुंडेरों पे आके
उसे मन ही मन में लुभाते तो होंगे
कई साझ सीने की खामोशियों में
मेरी याद से झनझनाते तो होंगे
वो बेसख्ता धीमें धीमें सुरों में
मेरी धुन में कुछ गुनगुनाती तो होगी

चलो खत लिखें जी में आता तो होगा
मगर उंगलियाँ कंपकपाती तो होगी
कलम हाथ से छुट जाता तो होगा
उमंगे कलम फिर उठाती तो होंगी
मेरा नाम अपनी किताबों पे लिखकर
वो दातों में उंगली दबाती तो होगी

जुबाँ से कभी अगर उफ् निकलती तो होगी
बदन धीमे धीमे सुलगता तो होगा
कहीं के कहीं पाँव पडते तो होंगे
जमीं पर दुपट्टा लटकता तो होगा
कभी सुबह को शाम कहती तो होगी
कभी रात को दिन बताती तो होगी
http://www.youtube.com/watch?v=18OLz4HB150

1 comment:

  1. "उमंगे कलम फिर उठाती तो होंगी
    मेरा नाम अपनी किताबों पे लिखकर
    वो दातों में उंगली दबाती तो होगी" ವಾವ್ ವಾವ್ ಅಖ್ತರ್ ಭೈ!

    "ನನ್ನ ಹೆಸರು ತನ್ನ ಪುಸ್ತಕದಲಿ ಬರೆದು
    ಅವಳು ನಾಚಿ ಬೆರಳನ್ನು ಕಚ್ಚಿರಬೇಕು!!
    ಎಲ್ಲೋ ಒಂದು ಮುದ್ದು...." ಸೂಪರ್ ಹರೀಶ್ ಸಾರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...