Wednesday, September 18, 2013

ದೂರವಿದ್ದು ನುಡಿಯದಿರು

ದೂರವಿದ್ದು ನುಡಿಯದಿರು 
ಸನಿಹ ಬಾ ನೀನು
ದೂರವಿದ್ದು ನುಡಿಯದಿರು 
ಸನಿಹ ಬಾ ನೀನು 
ಸ್ಮೃತಿಯಲ್ಲಿರುವುದು ಈ ರಾತ್ರಿ 
ಸನಿಹ ಬಾ ನೀನು

ಎಷ್ಟೋ ಸಮಯದಿಂದ ಬಯಸುತ್ತಿದ್ದೆ
ನಿನ್ನನ್ನು ಸ್ಪರ್ಶಿಸಲೆಂದು
ಎಷ್ಟೋ ಸಮಯದಿಂದ ಬಯಸುತ್ತಿದ್ದೆ
ನಿನ್ನನ್ನು ಸ್ಪರ್ಶಿಸಲೆಂದು
ಈಗ ನಿಯಂತ್ರಿಸಲಾಗದು ಮನಸ್ಸನ್ನು
ಸನಿಹ ಬಾ ನೀನು
ದೂರವಿದ್ದು ನುಡಿಯದಿರು
ಸನಿಹ ಬಾ ನೀನು

ತಂಪು ಗಾಳಿಯಿಂದ ಧಗಧಗಿಸುವುದು
ಮೈಯ ಜ್ವಾಲೆ
ತಂಪು ಗಾಳಿಯಿಂದ ಧಗಧಗಿಸುವುದು
ಮೈಯ ಜ್ವಾಲೆ
ಪ್ರಾಣ ತೆಗೆದುಕೊಳ್ಳುವುದು ಈ ಮಳೆ
ಸನಿಹ ಬಾ ನೀನು
ದೂರವಿದ್ದು ನುಡಿಯದಿರು
ಸನಿಹ ಬಾ ನೀನು

ಈ ತರಹ ಸಂಕೋಚ ಪಡುವ
ಅಗತ್ಯವೇನು
ಈ ತರಹ ಸಂಕೋಚ ಪಡುವ
ಅಗತ್ಯವೇನು
ಜೀವಮಾನದ ಈ ಬಂಧವಾಗಿದೆ
ಸ್ಮೃತಿಯಲ್ಲಿರುವುದು ಈ ರಾತ್ರಿ
ಸನಿಹ ಬಾ ನೀನು
ದೂರವಿದ್ದು ನುಡಿಯದಿರು
ಸನಿಹ ಬಾ ನೀನು

ಮೂಲ : ಸಾಹಿರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಅಮಾನತ್ 


door reh kar na karo baat
kareeb aa jaao
door reh kar na karo baat
kareeb aa jaao

yaad reh jaayegi ye raat
kareeb aa jaao
ek muddat se tamanna thi
tumhe chhoone ki
ek muddat se tamanna thi
tumhe chhoone ki

aaj bas mein nahi jazbaat
kareeb aa jaao
aaj bas mein nahi jazbaat
kareeb aa jaao
door reh kar na karo baat
kareeb aa jaao

sard jhonko se bhadakte hain
badan mein shole
sard jhonko se bhadakte hain
badan mein shole

jaan le legi ye barsaat
kareeb aa jaao
jaan le legi ye barsaat
kareeb aa jaao
door reh kar na karo baat
kareeb aa jaao

is kadar hum se jhijhakne ki
zaroorat kya hai
is kadar hum se jhijhakne ki
zaroorat kya hai

zindagi bhar ka hai ab saath
kareeb aa jaao
zindagi bhar ka hai ab saath
kareeb aa jaao

yaad reh jaayegi ye raat
kareeb aa jaao
door reh kar na karo baat
kareeb aa jaao

1 comment:

  1. ಸ್ವತಃ ಸಾಹಿರ್ ಲುಧ್ಯಾನ್ವಿಯವರೇ ಕನ್ನಡೀಕರಿಸಿದ್ದರೂ ಇಷ್ಟು ಸಮೀಪ ಭಾವ ಲಹರಿ ಕೋಡಲಾಗುತಿರಲಿಲ್ಲ.
    ಅಂದಹಾಗೆ, ಅಮಾನತ್ ಚಿತ್ರದ ಛಾಯಾಗ್ರಾಹಕರು ಎಸ್. ಪಾಪು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...