Sunday, September 22, 2013

ಎದೆಯಲ್ಲಿ ಉರಿ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಹೃದಯವಿದ್ದಲಿ ಮಿಡಿತಕ್ಕೆ
ಕಾರಣದ ಹುಡುಕಾಟವೇಕೆ
ಶಿಲೆಯ ಹಾಗೆ ಇದು ಕೂಡ
ನಿರ್ಜೀವದಂತೆ ಏಕಿದೆ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಏಕಾಂತದ ಇದ್ಯಾವುದು
ಗಮ್ಯ ಗೆಳೆಯರೇ
ದೃಷ್ಟಿ ಬೀರಿದಲ್ಲೆಲ್ಲ
ಒಂದು ಮರುಭೂಮಿಯಂತೆ ಏಕಿದೆ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಅದೇನು ಹೊಸತನ
ಕಂಡು ಬರುತ್ತಿದೆ ನನ್ನಲ್ಲಿ
ದರ್ಪಣ ನನ್ನನ್ನು ನೋಡಿ
ಆಘಾತಗೊಂಡಂತೆ ಏಕಿದೆ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಮೂಲ : ಶಹರಿಯಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸುರೇಶ ವಾಡ್ಕರ್
ಸಂಗೀತ : ಜೈದೇವ್
ಚಿತ್ರ : ಗಮನ್
seene mein jalan aankhon mein tufaan saa kyon hai ?
is shahar mein har shaks pareshaan saa kyon hai ?
dil hai to, dhadakane kaa bahaanaa koee dhoondhe
patthar kee tarah behees -o-bejaan saa kyon hai ?
tanahaee kee ye kaunasee, manzil hai rafeekon
taa-hadd-ye-nazar ek bayaabaan saa kyon hain ?
kyaa koee nayee baat najar aatee hai hum me
aaeenaa humei dekh ke hairaan saa kyon hain ?

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...