Thursday, September 12, 2013

ಹನಿ ಹನಿ

ಅವನ 
ಸ್ನೇಹ 
ಎಂಬ 
ಪಂಜರದಲಿ 
ಅವಳು ಗಿಳಿಯಾಗಿ ಬಂಧಿ 
_______

ಮೊಗ್ಗೊಂದು ಚಿಂತನೆಯಲಿ 
ಅಲ್ಪ ಸಮಯ
ಅವಕಾಶ ನೀಡಿ 
ಅರಳುವುದು
ಬಹು ಬೇಗ
_______


ನಿನ್ನ ಅಗಲಿಕೆಯಲಿ
ಬರೆದ ಕವಿತೆಯಲಿ
ನೋವಿತ್ತು
ಅವನು
ಇದು ಕವಿತೆ ಅಲ್ಲ
ದೊಡ್ಡ ವೇದನೆ ಎಂದ
________

ಹಕ್ಕಿ
ತನ್ನ ಗೂಡು
ಹುಡುಕುತ್ತಿತ್ತು
ಹರಿಯುವ ನದಿಯಲಿ
ಗೂಡು ತೇಲುತ್ತಿತ್ತು
________

ಮಳೆ ಇಲ್ಲ
ಮಳೆ ಇಲ್ಲ ಎಂದ
ಈಗ ಮಳೆ ನಿಲ್ಲದನ್ನು
ನೋಡಿ
ಏನಿದು ಮಳೆಯ ಕಾಟ
ಎನ್ನುತ್ತಿದ್ದಾನೆ
________

ಅವನು
ಬ್ರಹ್ಮಚಾರಿ ಎಂದು ಪ್ರಸಿದ್ಧ
ವೇಶ್ಯಾಲಯದ
ವೇಶ್ಯರಿಗೆ
ಅವನ
ನಿತ್ಯ ದರ್ಶನ

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...