ಸುಮ್ಮನೆ ಕಲ್ಪನೆ
ಸುಂದರ ಹೂವಾಗಬೇಕೆಂದು
ಅಂದವಾಗಿ ಅರಳಿ
ಅನೇಕರ ಮನ ಮೋಹಿಸಬೇಕೆಂದು
ಸುಮ್ಮನೆ ಕಲ್ಪನೆ
ವಿಶಾಲ ಮರವಾಗಬೇಕೆಂದು
ಹಣ್ಣು ತುಂಬಿದ
ಹಣ್ಣ ರುಚಿ ಸವಿದವರು ತೃಪ್ತರಾಗಬೇಕೆಂದು
ಸುಮ್ಮನೆ ಕಲ್ಪನೆ
ಹರಿಯುವ ನದಿಯಾಗಬೇಕೆಂದು
ಸ್ವಚ್ಚ ಜಲಭರಿತ
ಅನೇಕರ ದಾಹ ತಣಿಸಿ ಆನಂದಿಸಬೇಕೆಂದು
ಸುಮ್ಮನೆ ಕಲ್ಪನೆ
ಆಕಾಶದ ತಾರೆಯಾಗಬೇಕೆಂದು
ರಾತ್ರಿಯಲ್ಲಿ ಥಳ ಥಳ ಮಿನುಗಿ
ಅನೇಕ ಸಂಗಾತಿಯರೊಂದಿಗೆ ಸ್ವಚ್ಚಂದವಾಗಿ ವಿಹರಿಸಬೇಕೆಂದು
ಸುಮ್ಮನೆ ಕಲ್ಪನೆ
ಅವಳನ್ನು ಪಡೆಯಬೇಕೆಂದು
ಅಗಲಿದ ಅವಳು ಪುನಃ ಹಿಂತಿರುಗಿ ಬರಬೇಕೆಂದು
ನನ್ನನ್ನು ಪ್ರೀತಿಸುವಂತೆ ಮಾಡಬೇಕೆಂದು
ಅವಳನ್ನು ಹೃದಯ ಮಂದಿರದ ರಾಣಿ ಮಾಡಬೇಕೆಂದು
ಆದರೆ......ಕಲ್ಪನೆ ....ಸುಮ್ಮನೆ ಕಲ್ಪನೆ
by ಹರೀಶ್ ಶೆಟ್ಟಿ, ಶಿರ್ವ
ಸುಂದರ ಹೂವಾಗಬೇಕೆಂದು
ಅಂದವಾಗಿ ಅರಳಿ
ಅನೇಕರ ಮನ ಮೋಹಿಸಬೇಕೆಂದು
ಸುಮ್ಮನೆ ಕಲ್ಪನೆ
ವಿಶಾಲ ಮರವಾಗಬೇಕೆಂದು
ಹಣ್ಣು ತುಂಬಿದ
ಹಣ್ಣ ರುಚಿ ಸವಿದವರು ತೃಪ್ತರಾಗಬೇಕೆಂದು
ಸುಮ್ಮನೆ ಕಲ್ಪನೆ
ಹರಿಯುವ ನದಿಯಾಗಬೇಕೆಂದು
ಸ್ವಚ್ಚ ಜಲಭರಿತ
ಅನೇಕರ ದಾಹ ತಣಿಸಿ ಆನಂದಿಸಬೇಕೆಂದು
ಸುಮ್ಮನೆ ಕಲ್ಪನೆ
ಆಕಾಶದ ತಾರೆಯಾಗಬೇಕೆಂದು
ರಾತ್ರಿಯಲ್ಲಿ ಥಳ ಥಳ ಮಿನುಗಿ
ಅನೇಕ ಸಂಗಾತಿಯರೊಂದಿಗೆ ಸ್ವಚ್ಚಂದವಾಗಿ ವಿಹರಿಸಬೇಕೆಂದು
ಸುಮ್ಮನೆ ಕಲ್ಪನೆ
ಅವಳನ್ನು ಪಡೆಯಬೇಕೆಂದು
ಅಗಲಿದ ಅವಳು ಪುನಃ ಹಿಂತಿರುಗಿ ಬರಬೇಕೆಂದು
ನನ್ನನ್ನು ಪ್ರೀತಿಸುವಂತೆ ಮಾಡಬೇಕೆಂದು
ಅವಳನ್ನು ಹೃದಯ ಮಂದಿರದ ರಾಣಿ ಮಾಡಬೇಕೆಂದು
ಆದರೆ......ಕಲ್ಪನೆ ....ಸುಮ್ಮನೆ ಕಲ್ಪನೆ
by ಹರೀಶ್ ಶೆಟ್ಟಿ, ಶಿರ್ವ
ಆಸೆಗಳ ಸವಿಸ್ತಾರ ಪ್ರಸ್ತಾವನೆ ಇಲ್ಲಿದೆ. ಕಲ್ಪನೆಯ ಹರವೂ ವಿಶಾಲವಾಗಿದೆ.
ReplyDelete