Saturday, September 7, 2013

ತುಂಬಾ ಅಸಹಾಯಕಳಾಗಿ


ತುಂಬಾ ಅಸಹಾಯಕಳಾಗಿ
ನನ್ನನ್ನವಳು ಕರೆದಿರಬೇಕು
ವಿಷವನ್ನು ಮೆಲ್ಲನೆ
ಔಷದಿಯೆಂದು ತಿಂದಿರಬೇಕು
ತುಂಬಾ ಅಸಹಾಯಕಳಾಗಿ.....

(ಭುಪಿಂದರ್  ಸಿಂಗ್ )
ಹೃದಯ ಹೀಗೆಯೂ
ಹಲವು ಕಥೆಗಳನ್ನು ಹೇಳಿರಬೇಕು
ಕಣ್ಣೀರು ಕಣ್ಣಿಂದ
ಸುರಿಸದೆ ಕುಡಿದಿರಬೇಕು
ಮತ್ತೆ ಕೋಣೆಯಲಿ ನನ್ನ
ಆ ಪತ್ರವನ್ನು ಸುಟ್ಟಿರಬೇಕು
ಒಂದೊಂದು ಪದಗಳು
ಅವಳ ಲಲಾಟದಲಿ ಕಾಣಿಸಿ ಕೊಂಡಿರಬೇಕು
ತುಂಬಾ ಅಸಹಾಯಕಳಾಗಿ.....

(ಮೊಹಮ್ಮದ್ ರಫಿ)
ಅವಳು ಹೆದರಿ ಎಷ್ಟೋ ಬಾರಿ
ಕಣ್ಣು ತಪ್ಪಿಸಿಕೊಂಡಿರಬೇಕು
ಹೃದಯದ ಜಗವನ್ನು
ಉರುಳುವುದನ್ನು ಕಂಡಿರಬೇಕು
ಮೇಜಿನಿಂದ ನನ್ನ ಚಿತ್ರ ತೆಗೆದಾಗ
ಎಲ್ಲ ಕಡೆ ನನ್ನನ್ನು
ನರಳುವುದನ್ನು ಕಂಡಿರಬೇಕು
ತುಂಬಾ ಅಸಹಾಯಕಳಾಗಿ....

(ತಲತ್ ಮೆಹಮೂದ್)
ಸ್ಪರ್ಶವನ್ನು ನೆನೆದು
ಬಯಕೆ ಮೂಡಿರಬೇಕು
ದುಃಖವನ್ನು ಸುಳ್ಳು ನಗುವಿಂದ
ಅಡಗಿಸಲು ಅಸಾಧ್ಯವಾಗಿರಬೇಕು
ನನ್ನ ಹೆಸರಿಂದ
ಕಣ್ಣು ತುಂಬಿ ಬಂದಿರಬೇಕು
ಗೆಳತಿಯ ಭುಜದಿಂದ
ತಲೆ ಎತ್ತದೆ ಹಿಡಿದಿಟ್ಟಿರಬೇಕು
ತುಂಬಾ ಅಸಹಾಯಕಳಾಗಿ....

(ಮನ್ನ ಡೇ )
ಕೇಶವನ್ನು ಯಾರೋ
ಒತ್ತಾಯಿಸಿ ಬಾಚಿರಬೇಕು
ಅದೆಷ್ಟೋ ದುಃಖದ ಮೋಡಗಳು
ಮುಖದಲಿ ಕವಿದಿರಬೇಕು
ಕಣ್ಣ ಮಿಂಚು ಎಷ್ಟೋ ದಿನದಿಂದ
ಹೊಳೆಯದೆ ಬತ್ತಿರಬೇಕು
ಚಹರೆಯಲಿ ಎಷ್ಟೋ ದಿನದಿಂದ
ತೇಜಸ್ಸು ಕಣ್ಮರೆಯಾಗಿರಬೇಕು
ತುಂಬಾ ಅಸಹಾಯಕಳಾಗಿ....

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ , ಶಿರ್ವ
ಹಾಡಿದವರು : ಭುಪಿಂದರ್  ಸಿಂಗ್ , ಮೊಹಮ್ಮದ್ ರಫಿ, ತಲತ್ ಮೆಹಮೂದ್ ,ಮನ್ನ ಡೇ
ಸಂಗೀತ : ಮದನ್ ಮೋಹನ್
ಚಿತ್ರ : ಹಕಿಕತ್
hoke majbur mujhe usne bhulaayaa hoga
zahar chupke se dava janke khaya hoga
hoke majbur

hoke majbur mujhe usne bhulaayaa hoga
zahar chupke se dava janke khaya hoga
hoke majbur

bhupidar: dil ne aise bhi kuchh afasane sunaae hoge
ashq aankho ne pi aur na bahaae hoge
bad kamare me jo khat mere jalaae hoge
ek ik harf jabi par ubhar aayaa hogaa

rafi: usane ghabaraake nazar laakh bachaai hogi
dil ki lutati hui duniyaa nazar aai hogi
mez se jab meri tasvir hataai hogi
har taraf mujhako tadapataa huaa paayaa hogaa
hoke majabur

talat: chhed ki baat pe aramaan machal aae hoge
gam dikhaave ki hansi ne na chhupaae hoge
naam par mere jab aansu nikal aae hoge - (2)
sar na kaandhe se saheli ke uthaayaa hogaa

mannaa de: zulf zid karake kisi ne jo banaai hogi
aur bhi gam ki ghataa mukhade pe chhaai hogi
bijali nazaro ne ka_i din na giraai hogi
rang chahare pe ka_i roz na aayaa hogaa
hoke majabur
www.youtube.com/watch?v=5l97Ul5X2A0

1 comment:

  1. ನಮ್ಮ Shirva Harish Shetty ಅವರು ಒಳ್ಳೆಯ ಕವಿ, ಹಿಂದಿ ಚಿತ್ರಗೀತೆಗಳ ಅನುವಾದಕಾರ ಮತ್ತು ಕಬೀರ ದೋಹಗಳನ್ನು ಕನ್ನಡೀಕರಿಸುವ ಅಪರೂಪದ ಪ್ರತಿಭೆ.

    ಅವರ ಈ ಭಾವಾನುವಾದ ಗಮನಿಸಿ, ಇದು ಸದಾನಂದ್ ಅವರ ಛಾಯಾಗ್ರಹಣವಿರುವ ಹಕೀಕತ್ ಚಿತ್ರದ್ದು ಒಳ್ಳೆಯ ಗೀತೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...