Sunday, September 22, 2013

ನೀನೆಲ್ಲೆಲ್ಲಿ ಹೋಗುವೆಯೋ

ನೀನೆಲ್ಲೆಲ್ಲಿ ಹೋಗುವೆಯೋ
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ಎಂದಾದರೂ ನನ್ನನ್ನು ನೆನಪಿಸಿ
ಅಶ್ರು ಸುರಿದರೆ ನಿನ್ನ
ಅದನಲ್ಲಿಯೇ ನಿಲ್ಲಿಸುವುದು
ಬಂದು ಅಶ್ರು ನನ್ನ
ನೀನೆಲ್ಲೆಲ್ಲಿಯ ಹಾದಿ ಹಿಡಿಯುವೆಯೋ 
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ನೀನೊಂದು ವೇಳೆ ಬೇಸರಗೊಂಡರೆ
ಆಗ ಬೇಸರಗೊಳ್ಳುವೆ ನಾನೂ
ಕಂಡು ಬರಲಿ ಬರದಿರಲಿ
ನಿನ್ನ ಹತ್ತಿರವಿರುವೆ ನಾನು
ನೀನೆಲ್ಲಿಯೂ ಹೋದರೂ
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ನಾನೊಂದು ವೇಳೆ ಅಗಲಿದರೆ
ಎಂದೂ ನನಗಾಗಿ ದುಃಖಿಸದಿರು
ನನ್ನ ಪ್ರೀತಿ ನೆನೆದು
ಎಂದೂ ಕಂಗಳನ್ನು ತೇವಗೊಳಿಸದಿರು
ನೀನು ಹಿಂತಿರುಗಿ ನೋಡಿದರೆ
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ನನ್ನ ದುಃಖವೂ ಜೊತೆಯಲ್ಲಿದೆ 
ನಿನ್ನ ಕಷ್ಟದಲಿ ನಿನ್ನ ವ್ಯಥೆಯಲಿ
ನನ್ನ ಪ್ರೀತಿ ನೀಡಿದೆ ನಿನಗೆ
ಜತೆ ಪ್ರತಿ ಜನ್ಮದಲಿ
ನೀನು ಯಾವುದೇ ಜನ್ಮ ಪಡೆದರೆ
ನನ್ನ ನೆರಳು ಜೊತೆಯಲ್ಲಿರುವುದು
ನನ್ನ ನೆರಳು
ನನ್ನ ನೆರಳು

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಮೇರ ಸಾಯ

तू जहाँ जहाँ चलेगा,
मेरा साया साथ होगा
मेरा साया...

कभी मुझको याद करके, जो बहेंगे तेरे आँसू
तो वहीं पे रोक लेंगे, उन्हें आ के मेरे आँसू
तू जिधर का रुख करेगा
मेरा साया...

तू अगर उदास होगा, तो उदास हूँगी मैं भी
नज़र आऊँ या ना आऊँ, तेरे पास हूँगी मैं भी
तू कहीं भी जा रहेगा
मेरा साया...

मैं अगर बिछड़ भी जाऊँ, कभी मेरा ग़म न करना
मेरा प्यार याद करके, कभी आँख नम न करना
तू जो मुड़के देख लेगा
मेरा साया...

मेरा ग़म रहा है शामिल, तेरे दुख में, तेरे ग़म में
मेरे प्यार ने दिया है, तेरा साथ हर जनम में
तू कोई जनम भी लेगा
मेरा साया...
www.youtube.com/watch?v=xhnxyhfEdGk‎

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...