Thursday, September 12, 2013

ಸಂತ ಜನಾಬಾಯಿ

ಸಂತ ಜನಾಬಾಯಿ ಅವರ ಒಂದು ಮರಾಠಿ ಅಭಂಗ್  ಕನ್ನಡದಲ್ಲಿ ನಿಮಗಾಗಿ.
ಸಂತ ಜನಾಬಾಯಿಯವರು ಮಹಾರಾಷ್ಟ್ರದ ಪಂಡರಪುರದಲ್ಲಿ ಸಂತ ನಾಮದೇವರ ಮನೆಯಲ್ಲಿ ಮನೆ ಸೇವಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಅನಾಥರಾಗಿದ್ದರು, ಸಂತ ಜನಾಬಾಯಿ ಅವರ ನಿತ್ಯ ಬೆಳಕಾಗುವುದು ಅವರ ಅಭಂಗದ ಒಟ್ಟಿಗೆ.೧೩೫೦ ರ ಇಸವಿಯಲ್ಲಿ ಸಂತ ನಾಮದೇವರು ತನ್ನ ದೇಹ ತ್ಯಾಗ ಮಾಡಿದ್ದರು, ಆಗಲೇ ಸಂತ ಜನಾಬಾಯಿ ಸಹ ಪಾಂಡುರಂಗನಲ್ಲಿ ವಿಲೀನವಾದರು .(ಕೇಳಿದ್ದು/ಓದಿದ್ದು )

ಬೀಸು ಕಲ್ಲಿನಲ್ಲಿ ಬೀಸುವೆ ಸತತ
ನಿನ್ನ ಗೀತೆ ನಾ ಹಾಡುವೆ ಅನಂತ!!೧!!

ಕ್ಷಣಕ್ಕೂ ಮರೆಯಲಾರೆ ನಿನ್ನನ್ನು
ಹರೇ ಮುರಾರಿ ನಿನ್ನ ಹೆಸರನ್ನು!!೨!!

ದಿನನಿತ್ಯ ಇದೇ ಕಾರ್ಯ
ಜಪಿಸುವೆ ನಾಮ ಹರಿಯ!!೩!!

ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ
ನೀನೆ ಸಖ ಚಕ್ರಧರ ಶ್ಯಾಮ !!೪!!

ಈಗ ಕೇವಲ ನಿನ್ನ ಚರಣದ ಧ್ಯಾನ
ಹೇಳುವಳು ದಾಸಿ ನಾಮದೇವನ!!೫!!

ಕನ್ನಡದಲ್ಲಿ : ಹರೀಶ್ ಶೆಟ್ಟಿ, ಶಿರ್ವ

दळिता कांडिता । तुज गाईन अनंता ॥१॥
न विसंबे क्षणभरी । तुझे नाम ग मुरारी ॥२॥
नित्य हाचि कारभार । मुखी हरि निरंतर ॥३॥
मायबाप बंधुबहिणी । तू बा सखा चक्रपाणी ॥४॥
लक्ष लागले चरणासी । म्हणे नामयाची दासी ॥५॥
संत जनाबाई 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...