Tuesday, September 3, 2013

ಅದೇಕೆ ?

ಗೆಳತಿ...

ಅದೇಕೆ ನೀನು 
ಎಲ್ಲದರಲ್ಲೂ 
ನೀನು ಮಾಡುತ್ತಿರುವುದು ಸರಿ
ಆದರೆ ಇತರರು ಮಾಡುವುದು 
ಸರಿಯಲ್ಲವೆಂದು ಹೇಳುತ್ತಿರುವೆ 
ಈ ಸರಿ ತಪ್ಪನ್ನು ಅಳೆಯುವ 
ಮಾಪನ ನೀನು 
ಯಾವ ಆಧಾರದಿಂದ ಮಾಡುವೆ 

ಒಂದು ವೇಳೆ ನಿಷ್ಪಕ್ಷವಾಗಿ
ಹೇಳುವೆಯಾದರೆ
ಇತರರು ತಪ್ಪೆಂದು
ಒಪ್ಪುವೆ,
ಆದರೆ ನೀನೆಂದೂ
ತಪ್ಪು ಮಾಡುವುದೇ ಇಲ್ಲವೇ
ನಾನು ನೀನು
ತಾನು ಮಾಡಿದ್ದು
ತಪ್ಪೆಂದು ಹೇಳುವುದು ನೋಡಿಲ್ಲ

ಇತರರಲ್ಲಿ ತಪ್ಪು ಹುಡುಕುವ
ಬದ್ದಲು ಯಾಕೆ ನೀನು
ಅನ್ಯರನ್ನು ದೂರುವ
ತನ್ನಲ್ಲಿದ್ದ ಈ ತ್ರುಟಿಯನ್ನು
ಸುಧಾರಿಸುವುದಿಲ್ಲ

by ಹರೀಶ್ ಶೆಟ್ಟಿ,ಶಿರ್ವ

1 comment:

  1. ತ್ರುಟಿಯ ಮೂಲದಲ್ಲೇ ಸಮಸ್ಯೆ ಇದೆ ಸಾರ್ ಕೆಲವರ ಚಿಂತನೆಯಲ್ಲಿ!

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...