Tuesday, September 17, 2013

ವಿವಿಧ

ಅವರು ಉದ್ಯಾನದ ಒಳಗೆ 
ನುಸುಳಿ ಬಂದು 
ಅನೇಕ ಹೂಗಳನ್ನು 
ಕಾಲ ಅಡಿಯಲಿ ಜಜ್ಜಿ ಹೋದರು,
ಕೆಲವು ಬುದ್ಧಿ ಜೀವಿಗಳು 
ಉದ್ಯಾನದ ಮಾಲಿಯ 
ಮೇಲೆ ಅಪವಾದ ಹೊರಿಸಿದರು 
__________
ವೃಕ್ಷದಿಂದ ಬಿದ್ದ
ಹಣ್ಣಿಗೆ 
ಸಾವಿರಾರು ವಾರಸುದಾರರು
____________
ಸುಂದರ ಬಣ್ಣದ ಚಿಟ್ಟೆಯ
ಆನಂದದಿಂದ
ಸುಮಗಳಿಗೆ ಸಂತಸ
___________
ತಾರೆಗಳ ಮಧ್ಯೆ ಇದ್ದ
ಚಂದ್ರ
ಏಕಾಂತದ
ಹುಡುಕಾಟದಲಿ
___________
ರಾತ್ರಿಯ ಕಾವಲುಗಾರ
ಚಂದ್ರ
ಮಲಗಿದನೆಂದು
ಸುತ್ತ ಮುತ್ತ ಇದ್ದ
ತಾರೆಗಳ ಆರೋಪ

by ಹರೀಶ್ ಶೆಟ್ಟಿ,ಶಿರ್ವ

1 comment:

  1. ವ್ಯವಸ್ಥೆಯ ಲೋಪಗಳನ್ನು ಪ್ರತಿಮೆಗಳ ಜೊತೆ ಅಮೋಘವಾಗಿ ಸಮೀಕರಿಸಿದ್ದೀರಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...