Tuesday, September 3, 2013

ನೀನು ಬಂದಾಗ ಓ ಇನಿಯ

!!ನೀನು ಬಂದಾಗ ಓ ಇನಿಯ
ಅಂಗಳದಲಿ ಹೂವರಳುವುದು
ಸುರಿಯುವುದು ಮಳೆ
ಸುರಿಯುವುದು ಮಳೆ ನಲಿ ನಲಿದು
ಹೃದಯಗಳೆರಡು ಹೀಗೆ ಒಂದಾಗುವುದು!!
ನೀನು ಬಂದಾಗ ಓ ಇನಿಯ  
ಅಂಗಳದಲಿ ಹೂವರಳುವುದು

!!ನಯನದಲಿ ಹೊಳೆಯುವ
ಕಾಡಿಗೆ ತುಂಬಿದೆ
ನಿನ್ನ ನಯನಗಳು
ಈ ಹೃದಯ ಕದ್ದಿದೆ
ನಿನ್ನ ನಯನಗಳು ತಿಳಿಯದೆ
ನನಗೆ ಹಲವು ವಚನಗಳು ನೀಡಿದ್ದೆ
ಉಸಿರ ಲಯ ಮಧ್ಯಮವಾಗಿದೆ
ನಾ ಮಾರು ಹೋದೆ!!
ಸುರಿಯುವುದು ಮಳೆ
ಸುರಿಯುವುದು ಮಳೆ ನಲಿ ನಲಿದು
ಹೃದಯಗಳೆರಡು ಹೀಗೆ ಒಂದಾಗುವುದು
ನೀನು ಬಂದಾಗ ಓ ಇನಿಯ
ಅಂಗಳದಲಿ ಹೂವರಳುವುದು

!!ಚಂದ್ರನನ್ನು ನೋಡುತ್ತಿರುವೆ
ರಾತ್ರಿಯಲಿ
ಜೀವನವಿದೆ
ನಿನ್ನ ಕೈಯಲ್ಲಿ
ಮಿನುಗುವ ತಾರೆಗಳಿವೆ
ಕಣ್ರೆಪ್ಪೆಯಲಿ
ಬಾ ನೀನು
ಜೋರಾದ ಮಳೆಯಲಿ
ಕನಸಿನ ಜಗವಾಗುವುದು ವರ್ಣಮಯ!!
ಸುರಿಯುವುದು ಮಳೆ
ಸುರಿಯುವುದು ಮಳೆ ನಲಿ ನಲಿದು
ಹೃದಯಗಳೆರಡು ಹೀಗೆ ಒಂದಾಗುವುದು
ನೀನು ಬಂದಾಗ ಓ ಇನಿಯ
ಅಂಗಳದಲಿ ಹೂವರಳುವುದು


ಮೂಲ : ಈರ್ಶದ್  ಕಾಮಿಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಉಸ್ತಾದ್ ರಾಶಿದ್ ಖಾನ್
ಸಂಗೀತ : ಪ್ರೀತಮ್
ಚಿತ್ರ : ಜಬ್ ವೀ ಮೆಟ್
Song :
Aaoge Jab Tum O Saajana - 2
Angana Phool Khilenge
Barsega Saawan, Barsega Saawan Jhoom Jhoomke
Do Dil Aise Milenge
Aaoge Jab Tum O Saajana, Angana Phool Khilenge

Naina Tere Kajraare Hai, Naino Pe Hum Dil Haare Hai
Anjaane Hi Tere Naino Ne Waade Kiye Kayi Saare Hai
Saanson Ki Lay Madham Chalein, Tose Gaye Barasega Saawan
Barsega Saawan Jhoom Jhoomke, Do Dil Aise Milenge
Aaoge Jab Tum Ho Saajana, Angana Phool Khilenge

Chanda Ko Taaku Raaton Ko, Hai Zindagi Tere Haanthon Mein
Palkon Pe Jhilmil Taarein Hain, Aana Bhari Barsaaton Mein
Sapnon Ka Jahaan Hoga Kela Kela Barasega Saawan
Barsega Saawan Jhoom Jhoomke, Do Dil Aise Milenge

(sargam)
Angana Phool Khilenge - 2 (sargam
www.youtube.com/watch?v=Dk7m8xcX1Hs

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...